ಇಲ್ಲಿದೆ ನೋಡಿ👌🏻, ಅನಂತ ಚತುರ್ದಶಿಗೆ ತುಂಬಾ ಸುಲಭವಾಗಿರುವ 1 ಹಾಡು👆🏻

Описание к видео ಇಲ್ಲಿದೆ ನೋಡಿ👌🏻, ಅನಂತ ಚತುರ್ದಶಿಗೆ ತುಂಬಾ ಸುಲಭವಾಗಿರುವ 1 ಹಾಡು👆🏻

ರಚನೆ :- ರಾಜೇಶ್ವರಿ ಹೆಬ್ಬಾರ್! ಅನಂತನ ಹಾಡು
ಅನಂತ ಚತುರ್ದಶಿ ಹಾಡು.

ಅನಂತ ಚತುರ್ದಶಿಗೆ ಒಂದು ಸುಲಭ ಹಾಡನ್ನು ರಚಿಸಿ ಅಮ್ಮನ ಮುದ್ದಾದ ಹಾರ್ಮೋನಿಯಂ ಒಟ್ಟಿಗೆ ತಾಳಕ್ಕೆ ಅನುಕೂಲವಾಗುವಂತೆ ಹಾಡಿದ್ದೇನೆ. ಸರ್ವರೂ ಕೇಳಿ ಬರುವ ಚತುರ್ದಶಿಗೆ ಕಲಿತು ಹಾಡಿ.

ಹಾಗೂ ನಮ್ಮ ಇನ್ನೂ ಹೆಚ್ಚಿನ ದೇವರ ಸುಲಭ ಹಾಡುಗಳಿಗೆ ತಪ್ಪದೇ ನಮ್ಮ ಚಾನೆಲ್ ಗೆ 👉🏻 ‪@rajeshwarihebbar7658‬ ಸಬ್ಸ್ಕ್ರೈಬ್ ಆಗಿ ಬೆಲ್ ಐಕಾನ್ ಒತ್ತಿ, ಹೊಸ ಹೊಸ ಹಾಡುಗಳನ್ನು ಕೇಳುತ್ತಾ ಇರಿ. ಅಂತೆಯೇ ಲೈಕ್ ಕಾಮೆಂಟ್ ಹಾಗೂ ಶೇರ್ ಮಾಡುವ ಮೂಲಕ ನಮ್ಮ ಪ್ರಯತ್ನಕ್ಕೆ ಪ್ರೋತ್ಸಾಹಿಸಿ.
ಧನ್ಯವಾದಗಳು.

👇🏻👇🏻👇🏻👇🏻👇🏻👇🏻👇🏻👇🏻👇🏻👇🏻👇🏻👇🏻

ಜಯಜಯವೆನ್ನಿರಿ ಅನುದಿನಾ | ಅನಂತಗೆ
ಜಯಜಯವೆನ್ನಿರಿ ಅನುಕ್ಷಣಾ || ಪ ||

ಕಳೆದುದನೆಲ್ಲವ ಕೊಡುವನೂ | ಈತ
ಕೊನೆತನಕ ಕೈ ಬಿಡದೆ ಕಾಯ್ವನೂ
ಕರವ ಜೋಡಿಸಿ ಬೇಡ್ವ ಕಂದಗೆ | ಈತ
ಕರುಣೆಯ ಕಣ್ಮುಚ್ಚಿ ತೋರ್ವನೂ || 1 ||

ಪರಿಪರಿಯ ನಾಮವ ಸ್ತುತಿಸಲೂ | ಇವನ
ಶ್ರೀಪಾದಕಮಲಕ್ಕೆರಗಲೂ
ಎಲ್ಲೆಲ್ಲೂ ಪಸರಿಸಿದಾ ಭಕ್ತಿಗೆ | ಇವನ
ಪರಿಪೂರ್ಣ ಪ್ರೇಮವು ದೊರೆವುದೂ || 2 ||

ಚತುರ್ದಶಿ ವೃತವಾ ಗೈಯ್ಯಲೂ | ಇವ
ಅನಂತಾನಂತ ಫಲವ ನೀಡ್ವನೂ
ಅಗ್ರಪೂಜೆಯ ಮಾಡ್ದ ಜೀವಕೆ | ಇವ
ಅನಂತರೂಪಗುಣವ ತುಂಬ್ವನೂ || 3 ||

#motherdaughter #bhaktibhajan #devotionalsongs
#rajeshwarihebbar #anantapuram #anatachaturdashi #chaturdashi #anantapadmanabhaswamy #song #easyrecipe
#easy #vlog #anant #kannadasongs

Комментарии

Информация по комментариям в разработке