ಬಾಳುವಂಥ ಹೂವೇ ಬಾಡುವಾಸೆ ಏಕೇ - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್ - ಮಾಧವಿ - ಹಂಸಲೇಖ

Описание к видео ಬಾಳುವಂಥ ಹೂವೇ ಬಾಡುವಾಸೆ ಏಕೇ - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್ - ಮಾಧವಿ - ಹಂಸಲೇಖ

Song: Baluvantha Hoove - HD Video
Kannada Movie: Aakasmika
Actor: Dr Rajkumar, Madhavi, Geetha
Music: Hamsalekha
Singer: Dr Rajkumar
Lyrics: Hamsalekha
Year :1993

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Aakasmika – ಆಕಸ್ಮಿಕ 1993*SGV

Baluvantha Hoove Song Lyrics in Kannada:

ಬಾಳುವಂಥ ಹೂವೆ ಬಾಡುವ ಆಸೆ ಏಕೆ
ಬಾಳುವಂಥ ಹೂವೆ ಬಾಡುವ ಆಸೆ ಏಕೆ ಹಾಡುವಂಥ ಕೋಗಿಲೆ ಅಳುವ ಆಸೆ ಏಕೆ
ಕವಲು ದಾರಿಯಲ್ಲಿ ಬಾಳು ಸಾಧ್ಯವೇ ಅವಳಿ ದೋಣಿ ಮೇಲೆ ಯಾನ ಯೋಗ್ಯವೇ
ಬಾಳುವಂಥ ಹೂವೆ ಬಾಡುವ ಆಸೆ ಏಕೆ ಹಾಡುವಂಥ ಕೋಗಿಲೆ ಅಳುವ ಆಸೆ ಏಕೆ

ಯಾರಿಗಿಲ್ಲ ನೋವು ಯಾರಿಗಿಲ್ಲ ಸಾವು ವ್ಯರ್ಥ ವ್ಯಸನದಿಂದ ಸಿಹಿಯು ಕೂಡ ಬೇವು
ಬಾಳು ಒಂದು ಸಂತೆ ಸಂತೆ ತುಂಬ ಚಿಂತೆ ಮದ್ಯ ಮದಗಳಿಂದ ಚಿಂತೆ ಬೇಳೆವುದಂತೆ
ಅಂಕೆ ಇರದ ಮನಸನು ದಂಡಿಸುವುದು ನ್ಯಾಯ ಮೂಕ ಮುಗ್ಧ ದೇಹವ ಹಿಂಸಿಸುವುದು ಹೇಯ
ಸಣ್ಣ ಬಿರುಕು ಸಾಲದೆ ತುಂಬು ದೋಣಿ ತಳ ಸೇರಲು
ಸಣ್ಣ ಅಳುಕು ಸಾಲದೆ ತುಂಬು ಬದುಕು ಬರಡಾಗಲು
ಬಾಳುವಂಥ ಹೂವೆ ಬಾಡುವ ಆಸೆ ಏಕೆ ಹಾಡುವಂಥ ಕೋಗಿಲೆ ಅಳುವ ಆಸೆ ಏಕೆ

ಬಾಳ ಕದನದಲ್ಲಿ ಭರವಸೆಗಳು ಬೇಕು ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು
ಜೀವರಾಶಿಯಲ್ಲಿ ಮಾನವರಿಗೆ ಆದ್ಯತೆ ನಾವೇ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ
ಇಲ್ಲಿ ಈಸಬೇಕು ಇದ್ದು ಜಯಿಸಬೇಕು ನಾಗರಿಕರಾದ ಮೇಲೆ ಸುಗುಣರಾಗಬೇಕು
ನಿನ್ನ ಹಳದಿ ಕಣ್ಣಲಿ ಜನರನೇಕೆ ನೀ ನೋಡುವೆ
ಮನದ ಡೊಂಕು ಕಾಣದೇ ಜಗವನೇಕೆ ನೀ ದೂರುವೇ
ಬಾಳುವಂಥ ಹೂವೆ ಬಾಡುವ ಆಸೆ ಏಕೆ ಹಾಡುವಂಥ ಕೋಗಿಲೆ ಅಳುವ ಆಸೆ ಏಕೆ
ಕವಲು ದಾರಿಯಲ್ಲಿ ಬಾಳು ಸಾಧ್ಯವೆ ಅವಳಿ ದೋಣಿ ಮೇಲೆ ಯಾನ ಯೋಗ್ಯವೇ
ಬಾಳುವಂಥ ಹೂವೆ ಬಾಡುವ ಆಸೆ ಏಕೆ ಹಾಡುವಂಥ ಕೋಗಿಲೆ ಅಳುವ ಆಸೆ ಏಕೆ

Комментарии

Информация по комментариям в разработке