ನಾಗ ಪಾತ್ರಿಗಳಾದ ಶ್ರೀಮಾನ್ ನಾಗರಾಜ್ ಭಟ್ ಅವರೊಂದಿಗೆ ವಿಶೇಷ ಸಂದರ್ಶನ.

Описание к видео ನಾಗ ಪಾತ್ರಿಗಳಾದ ಶ್ರೀಮಾನ್ ನಾಗರಾಜ್ ಭಟ್ ಅವರೊಂದಿಗೆ ವಿಶೇಷ ಸಂದರ್ಶನ.

ಕಲಿಯುಗದಲ್ಲಿ ನಾಗ ಸಾನಿಧ್ಯ ನಾಗ ದೋಷಗಳು ಸರ್ವರಿಗೂ ಸರ್ವೇಸಾಮಾನ್ಯವಾಗಿದೆ. ಇದರ ಅರಿವು ಮೂಡಿಸುವಲ್ಲಿ ನಾಗಪಾತ್ರಿಗಳು ವಿಶೇಷ ಪಾತ್ರವನ್ನು ವಹಿಸುತ್ತಾರೆ. ನಾಗಪಾತ್ರಿಗಳು ಸ್ವಂತ ಸಾಧನೆಯಿಂದ ತಪಸ್ವಿಗಳ ಅನುಗ್ರಹದಿಂದ ಶಕ್ತಿಯನ್ನ ತುಂಬಿಸಿಕೊಂಡು, ಲೋಕದ ಜನರ ಕಷ್ಟಗಳನ್ನು ಅರಿತು ಅವರಿಗೆ ಉಂಟಾದ ನಾಗ ದೋಷಗಳನ್ನು ವಿಶೇಷ ದಿವ್ಯದೃಷ್ಟಿಯಿಂದ ಕಂಡುಹಿಡಿದು ಬೇಕು ಬೇಕಾದ ಸೇವೆಗಳನ್ನು ಮಾಡಿಸುವುದರ ಮೂಲಕ ನಿವಾರಣೆ ಗೊಳಿಸುವರು. ನಾಗ ಸಾನಿಧ್ಯ ಮತ್ತು ಭಕ್ತರ ನಡುವಿನ ಕೊಂಡಿಯಾಗಿ ನಾಗಪಾತ್ರಿಗಳು ಕರ್ತವ್ಯ ನಿರ್ವಹಿಸುವವರು.
ಅಂತಹದರಲ್ಲಿ ಹೀಗೊಬ್ಬ ನಾಗಪಾತ್ರಿಗಳು ನಮ್ಮ ನಡುವೆ ಇದ್ದಾರೆ ಅವರೇ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆರಗ ಅಗ್ರಹಾರದ ಶ್ರೀ ರೇಣುಕಾ ಎಲ್ಲಮ್ಮ ನಾಗಯಕ್ಷಿಣಿ ದೇವಸ್ಥಾನದ ಮೊಕ್ತೇಸರರು ಮಹಾನ್ ಶಕ್ತಿ ಶ್ರೀಮಾನ್ ನಾಗರಾಜ ಭಟ್. ಮೂಲತಹ ಬೆಳಗಾವಿ ಜಿಲ್ಲೆಯಿಂದ ವಲಸೆ ಬಂದು ನಾಗನ ಮೂಲಮೃತಿಕೆ ಯ ಈ ಸಾನಿಧ್ಯದಲ್ಲಿ ನೆಲೆನಿಂತು ಭಕ್ತರ ಪಾಲಿಗೆ ಸಂಕಷ್ಟ ನಿವಾರಕ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸುಮಾರು ಹತ್ತು ವರ್ಷಗಳಿಂದ ಈ ಸಾನಿಧ್ಯದಲ್ಲಿ ಮುಖ್ಯ ದೇವತೆಯಾಗಿ ರೇಣುಕಾ ಯಲ್ಲಮ್ಮ ದೇವಸ್ಥಾನ, ಬದಿಯಲ್ಲೇ ಇರುವ ಶಕ್ತಿ ಮೂಲಮೃತಿಕೆ ಯಲ್ಲಿ ನಾಗನ ಸಾನಿಧ್ಯ, ಭಕ್ತರ ಆಶಯದಂತೆ ನಾಗನ ಶಿಲಾಮೂರ್ತಿ ಸ್ಥಾಪನೆ ಆಯಿತು. ಭಕ್ತರ ಸರ್ವದುಃಖ ಕಷ್ಟ ಕಾರ್ಪಣ್ಯಗಳಿಗೆ ಇಲ್ಲಿ ಬಂದು ಪ್ರಾರ್ಥಿಸಿ ಪ್ರಸಾದವನ್ನು ಸ್ವೀಕರಿಸಿದರೆ ಆಕ್ಷಣವೇ ಸಂಕಷ್ಟ ನಿವಾರಣೆ, ನಾಗಪಾತ್ರಿ ಗಳ ಮೂಲಕ ಪ್ರಾರ್ಥನೆ ಮಾಡಿ ಅಭಯ ಪಡೆದು ಪ್ರಸಾದ ಮುಡಿಗೇರಿಸಿಕೊಂಡರೆ ತಮ್ಮ ಇಷ್ಟಾರ್ಥಗಳು ಸಿದ್ಧಿಯಾಗುವುದು ಖಂಡಿತ ಎನ್ನುತ್ತಾರೆ ನಾಗಪಾತ್ರಿಗಳು. ಇಲ್ಲಿ ವರುಷಕ್ಕೊಮ್ಮೆ ಉತ್ತರಾಯಣದ ಮಕರ ಸಂಕ್ರಾಂತಿಯ ಸಂದರ್ಭ ಮೂರು ದಿನಗಳ ಜಾತ್ರೆ ಮಾಮೂಲೀ ಆಗಿರುತ್ತದೆ. ಈ ಸಂದರ್ಭ ನಾಗದೇವರ ಪ್ರೀತ್ಯರ್ಥ ವಿಶೇಷ ನಾಗಮಂಡಲ ಸಂಪನ್ನಗೊಳ್ಳುತ್ತದೆ. ಇಲ್ಲಿ ಪ್ರಸಾದ ಸ್ವೀಕರಿಸಿ ಇಷ್ಟಾರ್ಥಗಳು ಸಿದ್ಧಿಸಿದ ಭಕ್ತರು ಈ ಸಂದರ್ಭದಲ್ಲಿ ತಮ್ಮ ಕೈಲಾದ ಸೇವೆಗಳನ್ನು ಕೈಗೊಳ್ಳುತ್ತಾರೆ, ಶ್ರೀ ಸ್ವಾಮಿಯ ಪ್ರಸಾದವನ್ನು ಸ್ವೀಕರಿಸುತ್ತಾರೆ. ಭಕ್ತರು ಇಲ್ಲಿಗೆ ಬಂದು ತಮ್ಮ ಸಂಕಷ್ಟ ನಿವಾರಣೆಗೆ ಯಾವುದೇ ಸಮಯದಲ್ಲಿ ಬಂದರು ಮುಕ್ತ ಪ್ರವೇಶಾವಕಾಶ, ಶ್ರೀ ಸನ್ನಿಧಿಯಲ್ಲಿ ಸೇವೆಗಳಿಗೆ ನಿರ್ದಿಷ್ಟ ಬೆಲೆ ಗಳಿರುವುದಿಲ್ಲ ಅವರವರ ಅನುಕೂಲಕ್ಕೆ ತಕ್ಕಂತೆ ಸೇವೆ ಮಾಡಿಸಿ ಪ್ರಸಾದ ಸ್ವೀಕರಿಸಬಹುದು ಇದಕ್ಕಾಗಿ ನಾಗಪಾತ್ರಿ ಗಳಾದ ಶ್ರೀ ನಾಗರಾಜ ಭಟ್ ಅವರು ಭಕ್ತರ ಸಂಕಷ್ಟಗಳನ್ನು ಅರಿತು ಶ್ರೀ ಸನ್ನಿಧಿಗೆ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡುವರು.
ಈಗಾಗಲೇ ವಿಧಿವಿಧಾನಗಳನ್ನು ಪೂರೈಸಿ ಸ್ಥಾಪನೆಗೊಂಡ ನಾಗನ ಮೂರ್ತಿಗಳು ಯಾವುದೋ ಅನಾಹುತದಲ್ಲಿ ಭೂಮಿಯಲ್ಲಿ ಅಂತರ್ಗತವಾಗಿದ್ದ ರೆ ಆ ಸ್ಥಳದಲ್ಲಿ ನೆಲೆಸುವ ವರಿಗೆ ಕಷ್ಟನಷ್ಟಗಳು ಮಾನಸಿಕ ಉದ್ವೇಗಗಳು ಅಶಾಂತಿ ನೆಮ್ಮದಿ ಇಲ್ಲದ ಜೀವನ ನಡೆಸುವುದು ಸಾಮಾನ್ಯ. ಅಂತಹವರ ಪಾಲಿಗೆ ನಾಗಪಾತ್ರಿಗಳು ವರದಾನವೇ ಸರಿ. ಅವರು ತಮ್ಮ ದಿವ್ಯದೃಷ್ಟಿಯಲ್ಲಿ ಅಂತಹ ಪ್ರಕ್ರಿಯೆಗಳನ್ನು ಶೋಧಿಸಿ ಭಕ್ತರಿಗೆ ತಿಳಿಸುತ್ತಾರೆ. ಈಗಾಗಲೇ ಹತ್ತಾರು ಕಡೆಗಳಲ್ಲಿ ಭೂಖನನ ಮಾಡಿ ನಾಗನ ಮೂರ್ತಿಗಳನ್ನು ಎತ್ತುವಲ್ಲಿ ಯಶಸ್ವಿಯಾಗಿರುವ ಶ್ರೀ ನಾಗರಾಜ್ ಭಟ್ ಅವರು ಎಲ್ಲಿ ಭೂಮಿಯ ತಳಭಾಗದಲ್ಲಿ ಅಂತರ್ಗತ ನಾದ ನಾಗನ ಮೂರ್ತಿಗಳನ್ನು ಹೊರತೆಗೆದು ಸಂಸ್ಕಾರಗಳನ್ನು ನೀಡಿ ಮತ್ತೆ ಪುನರ್ಸ್ಥಾಪನೆ ಮಾಡಿದಲ್ಲಿ ಸಂಸಾರದಲ್ಲಿ ಶಾಶ್ವತವಾದ ನೆಮ್ಮದಿಗಳು ನೆಲೆವೂರುವವು ಎನ್ನುವ ಅಭಯದ ನುಡಿಗಳನ್ನು ಅನುಭವದಿಂದ ನುಡಿಯುತ್ತಾರೆ ನಾಗಪಾತ್ರಿಗಳು. ನಾಗನ ಸೇವೆಗಾಗಿ ಮುಡಿಪಾಗಿಟ್ಟಿರುವ ಇವರ ಕುಟುಂಬ ಸುಖಿ ಮಾದರಿ ಸಂಸಾರ .

Комментарии

Информация по комментариям в разработке