ಮಹೀಂದ್ರ OJA | Mahindra OJA

Описание к видео ಮಹೀಂದ್ರ OJA | Mahindra OJA

ಭವಿಷ್ಯದ-ಮುಂದುವರಿಯ ವೈಶಿಷ್ಟ್ಯಗಳೊಂದಿಗೆ, ಭಾರತೀಯ ಕೃಷಿಯಲ್ಲಿ ಬದಲಾವಣೆಯನ್ನು ಮುನ್ನಡೆಸಲು ಮಹೀಂದ್ರ OJA ಇಲ್ಲಿದೆ. ಈ ಟ್ರ್ಯಾಕ್ಟರ್ನ ನಂಬಲಾಗದ ವೈಶಿಷ್ಟ್ಯಗಳ ಕುರಿತು ತಿಳಿಯಲು ಈ ವೀಡಿಯೊವನ್ನು ವೀಕ್ಷಿಸಿ.

ಓಜಾ ಒಂದು ಕಾಂಪ್ಯಾಕ್ಟ್ ಹಾಗು 4 ವೀಲ್ ಡ್ರೈವ್ ಸರಣಿಯ ಅತಿ ಕಡಿಮೆ ತೂಕದ ಟ್ರಾಕ್ಟರ್. ಈ ಟ್ರಾಕ್ಟರ್ ಮೂರು ಅತ್ಯಾಧುನಿಕ ತಂತ್ರಜ್ಞಾನ ಗಳಾದ PROJA, MYOJA ಮತ್ತು ROBOJA ಗಳೊಂದಿಗೆ ಕೃಷಿಯಲ್ಲಿ ಹೊಸ ಕ್ರಾಂತಿಯನ್ನು ತರಲಿದೆ. ಮಹೀಂದ್ರಾ ಓಜಾವನ್ನು ಕೇವಲ ಒಂದು ಬಟನ್ ನ ಸಹಾಯದಿಂದ ಸ್ಟಾರ್ಟ್ಮಾ ಡಬಹುದು. ಮಹೀಂದ್ರಾ ಓಜಾ ಟ್ರಾಕ್ಟರ್ ನಲ್ಲಿ ಮುಂದೆ ಹಾಗೂ ಹಿಂದೆ ಚಲಿಸುವಂತೆ ಮಾಡಲು ಪ್ರತ್ಯೇಕವಾದ ಗೇರ್ ಲಿವರ್ ಕೊಡಲಾಗಿದ್ದು, ಅತ್ಯಂತ ವೇಗದಲ್ಲಿ ಈ ಟ್ರಾಕ್ಟರ್ ಹಿಮ್ಮುಖವಾಗಿ ಕೂಡ ಚಲಿಸುತ್ತದೆ. ಚಾಲಕನ ಅನುಕೂಲಕ್ಕಾಗಿ ಟ್ರಾಕ್ಟರ್ ನ ಸ್ಟೀಯರಿಂಗ್ ನ ಎತ್ತರ ಹಾಗೂ ಕೊನವನ್ನೂ ಸುಲಭವಾಗಿ ಬದಲಾಯಿಸಬಹುದಾಗಿದೆ. ಕೇವಲ ಒಂದೇ ಬಟನ್ ನ ಸಹಾಯದಿಂದ PTO ನ ನಿರ್ವಹಣೆ ಸಾಧ್ಯ. Creeper Mode ಸಹಾಯದಿಂದ ಟ್ರಾಕ್ಟರನ್ನು ಗಂಟೆಗೆ 0.3 ಕಿಲೋಮೀಟರ್ ವೇಗದಲ್ಲಿ ಚಲಿಸುವಂತೆ ಮಾಡಬಹುದು . ಇದರಿಂದ ನಿಖರವಾಗಿ ಮುಲ್ಚಿಂಗ್ ಮಾಡುವುದು ಹಾಗೂ drip line ಅಳವಡಿಸುವುದು ಸುಲಭ. ನಿಮ್ಮ ಟ್ರಾಕ್ಟರನ್ನು ಸ್ಮಾರ್ಟ್ ಫೋನ್ ಜೊತೆ ಜೋಡಣೆ ಮಾಡಿಕೊಳ್ಳಬಹುದಾಗಿದೆ. ಈ ಟ್ರಾಕ್ಟರ್ GPS ತಂತ್ರಜ್ಞಾನ ಹೊಂದಿದ್ದು, ಇದರಿಂದ ಟ್ರ್ಯಾಕ್ ಮಾಡಲು ಅನುಕೂಲ. Geo Fencing ತಂತ್ರಜ್ಞಾನ ಬಳಸಿ ನಿಮ್ಮ ಟ್ರಾಕ್ಟರ್ ಕಾರ್ಯನಿರ್ವಹಿಸಲು ಒಂದು ನಿರ್ದಿಷ್ಟ ಗಡಿ ಹಾಕಬಹುದು. ಟ್ರಾಕ್ಟರ್ ನಿಮ್ಮ ಜಮೀನನ್ನು ಬಿಟ್ಟು ಬೇರೆಡೆ ಇದ್ದರೆ , ಅದರ ಮಾಹಿತಿ ತಕ್ಷಣ ಸಿಗಲಿದೆ. ಇದಲ್ಲದೇ ಟ್ರಾಕ್ಟರ್ ನಲ್ಲಿ ಡೀಸೆಲ್ ಪ್ರಮಾಣ ಎಷ್ಟಿದೆ ಎಂಬ ಮಾಹಿತಿ ಹಾಗೂ ಟ್ರಾಕ್ಟರ್ ನ ಲೋಪದೋಷಗಳ ಮಾಹಿತಿ ನಿಮ್ಮ ಫೋನ್ ನಲ್ಲಿ ದೊರೆಯಲಿದೆ ರೋಬೋಜ ತಂತ್ರಜ್ಞಾನ ದಿಂದ PTO ಅನ್ನೂ ಅತಿ ಸುಲಭವಾಗಿ ನಿಯಂತ್ರಣ ಮಾಡಹಬಹುದು. Auto PTO, ON/OFF ಮಾಡುವುದರ ಮೂಲಕ ಟ್ರಾಕ್ಟರ್ ತಿರುಗುವ ಸಮಯದಲ್ಲಿ PTO ತಾನಾಗಿಯೇ ಮೇಲೆ ಹೋಗತ್ತದೆ. ಬಳಿಕ ತಂತಾನೆ ಕೆಳಗೆ ಬರುತ್ತದೆ. ಇದೆ ರೀತಿ ಟ್ರಾಕ್ಟರ್ ಅನ್ನೂ ಹಿಂದಕ್ಕೆ ತೆಗೆಯುವಾಗ ರೊಬೋಜ PTO ವನ್ನು ನಿಯಂತ್ರಿಸುತ್ತದೆ. ದ್ರಾಕ್ಷಿ ತೋಟ ಗಳಲ್ಲಿ ನಿಖರವಾಗಿ ಔಷಧಿ ಸಿಂಪಡಣೆ ಈ ಟ್ರಾಕ್ಟರ್ ಮೂಲಕ ಸಾಧ್ಯ.

Комментарии

Информация по комментариям в разработке