ಮನೆ ಮನೆಯಲ್ಲಿ ಫೇಮಸ್ ಆಯ್ತು 👌🏻😄ಈ |ಗಣೇಶನ ಆರತಿ ಹಾಡು

Описание к видео ಮನೆ ಮನೆಯಲ್ಲಿ ಫೇಮಸ್ ಆಯ್ತು 👌🏻😄ಈ |ಗಣೇಶನ ಆರತಿ ಹಾಡು

ಗಣೇಶನ ಆರತಿ ಹಾಡು - ರಾಜೇಶ್ವರಿ ಹೆಬ್ಬಾರ್
🎹🎹:- ಶಾರದಾ ಹೆಬ್ಬಾರ್
ರಾಗ ಸಂಯೋಜನೆ :- ರಾಜೇಶ್ವರಿ ಹೆಬ್ಬಾರ್

👇🏻👇🏻👇🏻👇🏻👇🏻👇🏻👇🏻👇🏻👇🏻👇🏻👇🏻👇🏻👇🏻👇🏻

ಎಂಥಾ ಚೆಲುವ ಮೂರುತಿ|ಮಾ
ಗಣಪತಿಗಿಂತು ಬೆಳಗೆ ಆರತಿ ||ಪ||

ಎಂಥಾ ಚೆಲುವನೀತ ಕಂತುಹಾರನ ಸುತ
ದಂತಿ ಮುಖನು ಏಕದಂತ ಎನಿಸಿದಾತ|
ಸಿರಿಪಾದ ಕಮಲವು ಎಂತು ಶೋಭಿಸುತಿದೆ
ಸಿರಿಪಾದಕೆರಗೀ ಕಮಲದಾರತಿ ಎತ್ತಿ ||1||

ಅದ್ಭುತ ರೂಪನು ಅದ್ವಿತೀಯನು
ಆದ್ಯಂತ ರಹಿತನು ಆದಿಪೂಜಿತನೀತ|
ಸುಂಡೀಲಧಾರನು ಆಂಡಜವಾಹನ
ನಂದಿವಾಹನ ಸುತ ನಂದ ಬೀರುವನೀತ ||2||

ಕಿರಿಗಣ್ಣಿನಲಿ ತಾ ಬೀರೀಯೆ ನೋಟವ
ತೋರಿ ಕರುಣೆಯ ಸಂಹರಿಪನೆ ವಿಘ್ನವ |
ಮೊರೆಹೊಕ್ಕ ಭಕ್ತರ ಮೊರೆಯನಾಲಿಸುವಾ
ಮೊರದಗಲದ ಕರ್ಣ ಮೆರಗು ಗೊಂಡಿಹನೀತ || 3 ||

ಶಿರದಾ ಕಿರೀಟವು ಮಿರಿಮಿರಿ ಮಿಂಚಿದೆ
ಉರಗನ ಉದರಕ್ಕಾಭರಣಾಗಿ ಬಿಗಿದಿಹ|
ಎಳ್ಳುಂಡೆ ಮೋದಕ ಮೆಲ್ಲೂವನೀತನ
ಡೊಳ್ಳಿನ ಹೊಟ್ಟೆಯು ಒಳ್ಳೆ ಶೋಭಿಸುತಿದೆ ||4||

ಕರದಿ ಪಾಶಾಂಕುಶ ಧರಿಸೀಹನೀತನು
ಧರಿಸೀದ ಜನಿವಾರ ಹೆಗಲೊಳಗಿಳಿದಿದೆ|
ಕರ್ಣ ಕುಂಡಲ ಬಹು ವರ್ಣದಿ ಹೊಳೆವುದೆ
ವರ್ಣಿಸಲಾರೆನೆ ರಕ್ತ ವರ್ಣಾಂಬರಧರ ||5||


#bhaktibhajan #ganesha
#bappa #moreya
#rajeshwarihebbar #easysongs
#arati #aratihaadu
#ganesharati
#festival #ganeshchaturthi
#viralvideo #bhajan

‪@rajeshwarihebbar7658‬

ನಮ್ಮ ಇನ್ನೂ ಹೆಚ್ಚಿನ ಹಾಡುಗಳಿಗೆ ತಪ್ಪದೇ ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ ಬೆಲ್ ಐಕಾನ್ ಒತ್ತಿ.
ಧನ್ಯವಾದಗಳು 🙏🏻.

Комментарии

Информация по комментариям в разработке