ನಿನ್ನ ಪ್ರೀತಿ ಎಷ್ಟು ಅಮೂಲ್ಯವಾದದ್ದು ninna preethi yestu amulyavadaddu

Описание к видео ನಿನ್ನ ಪ್ರೀತಿ ಎಷ್ಟು ಅಮೂಲ್ಯವಾದದ್ದು ninna preethi yestu amulyavadaddu

#GangadharParalanki


ನಿನ್ನ ಪ್ರೀತಿ ಎಷ್ಟು ಅಮೂಲ್ಯವಾದದ್ದು

ninna preethi yestu amulyavadaddu

Lyrics:- ✍️ Bro Gangadhar C Paralanki

Gangadhar C Paralanki
My Channel Subscribe And Like Share

Recording Studio Editer Bro vijaya Poul
video edited by. Pr. Bhimasen SjS

#BhimsenSjS

ಸಾಂಗ್ ಹೆಸರು ನಿನ್ನ ಪ್ರೀತಿ ಎಷ್ಟು ಅಮೂಲ್ಯವಾದದ್ದು.
ನಿನ್ನ ಪ್ರೀತಿ ಎಷ್ಟು ಅಮೂಲ್ಯವಾದದ್ದು
ಹಗಲಿರುಳು ನಿನ್ನನೇ ಆರಾಧಿಸುವೆ//2//
ನಿನ್ನ ಮಾತುಗಳು ಬಹಳ ಮಧುರ ಯೇಸಯ್ಯ
ಎಡಬಿಡದೆ ನಿನ್ನನ್ನೇ ಕೊಂಡಾಡುವೆನು //2//ನಿನ್ನ ಪ್ರೀತಿ ಎಷ್ಟು ಅಮೂಲ್ಯವಾದದ್ದು ಹಗಲಿರುಳು ನಿನ್ನನೇ ಆರಾದಿಸುವೆ

1.ಕರ್ತನೆ ನೀನು ಕನಿಕರವೂ ದಯಯುಳ್ಳ ದೇವರು
ನಾನು ಕುಗ್ಗಿದವನು ದಿಕ್ಕಿಲದವನು ಆಗಿದ್ದಾ ಗ//2//
ನಿಮ್ಮ ಅಭಿಷೇಕದಿಂದ ಉಜ್ಜಿವನಗೊಳಿಸಿ ಹಸಿರುಗಾವಲುಗಳಲ್ಲಿ ನನ್ನನು ನಡೆಸಿದಿ //2//
ನನ್ನ ಜೀವಮಾನವೆಲ್ಲಾ ನನ್ನ ದೇವರನೇ ಕೊಂಡಾಡುವೇನು //2//

2.ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕು ಆಗಿದೆ //2//
ಎಲ್ಲಾ ದೇವರುಗಳಲ್ಲಿ ಮಹೋನ್ನತನು ನೀನು
ಎಲ್ಲಾ ಮನುಷ್ಯರಿಗಿಂತ ಅತಿ ಸುಂದರನು //2//
ನಿನ್ನ ಕಾರ್ಯಗಳನ್ನು ಧ್ಯಾನಿಸುವೇನು ಕೃತಜ್ಞಾಸ್ತುತಿಯಿಂದ ಘನಪಡಿಸುವೆನು //2//

3.ನನ್ನ ಬಾಯಲ್ಲಿ ನಿನ್ನ ಸ್ತೋತ್ರವೊಂದೇ ಇರುವುದು
ಕಿನ್ನರಿಯನ್ನು ಭಾರಿಸುತ್ತಾ ಕುಣಿಯುತ್ತಾ ಹಾಡುವೆನು/ /2// ನಿನ್ನ ದರ್ಶನವನ್ನು ಕಾಣುವವರು ಎಂದೆಂದಿಗೂ ನಿನ್ನಲ್ಲಿ ಆನಂದಿಸುವರು //2//

ನಿನ್ನ ಪ್ರೀತಿ ಎಷ್ಟು ಅಮೂಲ್ಯವಾದದ್ದು
ಹಗಲಿರುಳು ನಿನ್ನನೇ ಆರಾಧಿ ಸುವೆ//2//
ನಿನ್ನ ಮಾತುಗಳು ಬಹಳ ಮಧುರ ಯೇಸಯ್ಯ
ಎಡಬಿಡದೆ ನಿನ್ನನೇ ಕೊಂಡಾಡುವೆನು// 2//
ನಿನ್ನ ಪ್ರೀತಿ ಎಷ್ಟು ಅಮೂಲ್ಯವಾದದ್ದು
ಹಗಲಿರುಳು ನಿನ್ನನೇ ಆರಾಧಿಸುವೆ

Комментарии

Информация по комментариям в разработке