Bangaara Neera (Bhavageethe) - ಬಂಗಾರ ನೀರ

Описание к видео Bangaara Neera (Bhavageethe) - ಬಂಗಾರ ನೀರ

ಬಂಗಾರ ನೀರ
ಸಂಗ್ರಹ - ಗೀತ ಮಾಧುರಿ
ರಚನೆ - ದ .ರಾ. ಬೇಂದ್ರೆ

bangaara neera
dhvani suruLi - gIta maadhuri
rachane - da ra bendre


To Buy DVD : http://www.totalkannada.com/

ಬಂಗಾರ ನೀರ :

ಬಂಗಾರ ನೀರ ಕಡಲಾಚೆಗೀಚೆಗಿದು ನೀಲ ನೀರ ತೀರ
ಮಿಂಚು ಬಲೆದ ತೆರೆ ತೆರೆಗಳಾಗಿ ಅಲೆಯುವುದು ಪುತ್ತ ಪೂರ
ಅದು ನಮ್ಮ ಊರು ಇದು ನಿಮ್ಮ ಊರು ತಮ್ಮ ತಮ್ಮ ಊರು ಧೀರ
ಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ.

ಕರೆ ಬಂದಿತಣ್ಣ ತೆರೆ ಬಂದಿತಣ್ಣ ನೆರೆ ಬಂದಿತಣ್ಣ ಬಳಿಗೆ
ಹರಿತದ ಭಾವ ಬೆರೆತದ ಜೀವ ಅದರೊಳಗೆ ಒಳಗೆ ಒಳಗೆ
ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್ಮ ನಿಮ್ಮ ಆತ್ಮಗಳಿಗೆ
ಅಂಬಿಗನು ಬಂದ ನಂಬಿಗನು ಬಂದ ಬಂದತಾ ದಿವ್ಯ ಘಳಿಗೆ.

ಇದು ಉಪ್ಪು ನೀರ ಕಡಲಲ್ಲೊ ನಮ್ಮ ಒಡಲಲ್ಲು ಇದರ ನೆಲೆಯು
ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿದತಾ ಇದರ ಬೆಲೆಯು
ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲಿ ಮಾತ್ರ ಒಡೆಯುವುದು ಇದರ ಸೆಲೆಯು
ಕಣ್ಣರಳಿದಾಗ ಕಣ್ ಹೊರಳಿದಾಗ ಹೊಳೆಯುವುದು ಇದರ ಕಳೆಯು.

ಬಂದವರ ಬಳಿಗೆ ಬಂದದಾ ಮತ್ತು ನಿಂದವರ ನೆರೆಗು ಬಂದದೋ ಬಂದದಾ
ನವ ಮನುವು ಬಂದ ಹೊಸದ್ವೀಪಗಳಿಗೆ ಹೊರತಾನ ಬನ್ನೀ ಅಂದದೋ ಅಂದದಾ.

Комментарии

Информация по комментариям в разработке