ಶ್ರೀ ಕಣಿವ ವೀರ ದಿಮ್ಮಮ್ಮ ದೇವಾಲಯ ತಿಪ್ಪೇನಹಳ್ಳಿ, ಚಿಕ್ಕಬಳ್ಳಾಪುರ

Описание к видео ಶ್ರೀ ಕಣಿವ ವೀರ ದಿಮ್ಮಮ್ಮ ದೇವಾಲಯ ತಿಪ್ಪೇನಹಳ್ಳಿ, ಚಿಕ್ಕಬಳ್ಳಾಪುರ

ಶ್ರೀ ಕಣಿವ ವೀರ ದಿಮ್ಮಮ್ಮ ದೇವಾಲಯ ತಿಪ್ಪೇನಹಳ್ಳಿ, ಚಿಕ್ಕಬಳ್ಳಾಪುರ- 562101
14ನೇ ಶತಮಾನದ ಮೊದಲ ಭಾಗದಲ್ಲಿ ಪಾಲರ್ ನದಿಯನ್ನು ದಾಟಿ ಕಂಚಿಯ ಯಣಮ೦ಜಿ ಪುತ್ತೂರಿನಿಂದ ಪಶ್ಚಿಮದ ಕಡೆ ನಂದಿ ನಾಡಿಗೆ ವಲಸೆ ಬಂದ ಹಲವಾರು ಒಕ್ಕಲಿಗ ಕುಟುಂಬಗಳ ಪೈಕಿ ಕೆಲವರು ಭೂಮಿ, ನೀರು ಅನುಕೂಲವಿದ್ದಡೆ ಊರು ಕಟ್ಟಿಕೊಂಡರು. ಈ ಒಕ್ಕಲಿಗರು ತಮ್ಮ ಬದುಕಿನ ಶ್ರದ್ದೆ ಮತ್ತು ಜೀವನೋತ್ಸವದಿಂದ ನೇಗಿಲು ಹಿಡಿದ ಕೈಯಲ್ಲಿ ಖಡ್ಗವನ್ನು ಹಿಡಿದು ಪಾಳೆಗಾರರಾಗಿ, ನಾಡಪ್ರಭುಗಳಾಗಿ ಸುಮಾರು 400 ವರ್ಷಗಳ ಕಾಲ ಆವತಿ, ದೇವನ ಹಳ್ಳಿ, ಯಲಹಂಕ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಮಾಸ್ತಿ, ದೊಡ್ಡಬಳ್ಳಾಪುರ, ಕೊರಟಗೆರೆ, ಬೆಂಗಳೂರು, ಮಾಗಡಿ ಮುಂತಾದ ಪ್ರಾಂತ್ಯಗಳಲ್ಲಿ ಪ್ರಜಾನುರಾಗಿಗಳಾಗಿ ಆಳ್ವಿಕೆ ನಡೆಸಿದರು. ಚಿಕ್ಕಬಳ್ಳಾಪುರ ಪ್ರಾಂತ್ಯದಲ್ಲಿ ಆವತಿ ಮೂಲಕ ಈ ಗೌಡರ ಆಳ್ವಿಕೆ ಕ್ರಿ.ಶ. 1479 ರಲ್ಲಿ ಆರಂಭ ಗೊಂಡಿದ್ದು 1791ರವರೆಗೂ ಮುಂದುವರೆಯಿತು.
ಚಿಕ್ಕಬಳ್ಳಾಪುರ - ಗೌರಿಬಿದನೂರು ಮಾರ್ಗದಲ್ಲಿ ಬಯಲು ಸೀಮೆಯಾದರೂ ಮಲೆನಾಡಿನ ಅನುಭವ ನೀಡುವ ತಂಪಾದ ಮರಗಿಡ ಬೆಟ್ಟಗಳಿಂದ ಅಲಂಕೃತವಾಗಿ ನಯನ ಮನೋಹರ ಪಾಕೃತಿಕ ಸೌಂದರ್ಯವನ್ನು ಹೊಂದಿರುವ ತಾಣದಲ್ಲಿರುವ ವೀರದಿಮ್ಮಮ್ಮ ಕಣಿವೆಯೆಂದೇ ಪ್ರಸಿದ್ಧಿಗೊಂಡಿದ್ದು ಇಲ್ಲಿನ ವೀರ ದಿಮ್ಮಮ್ಮ ದೇವಾಲಯವೂ ಆಂಧ್ರ, ತಮಿಳುನಾಡು ಹಾಗೂ ಕರ್ನಾಟಕದ ಭಕ್ತಾದಿಗಳನ್ನು ಆಕರ್ಷಿಸುತ್ತಿದ್ದು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಕೋರಿಕೆಗಳನ್ನು ಈಡೇರಿಸುವ ಆರಾಧ್ಯ ದೈವವೆಂದೇ ಪೂಜಿಸಲ್ಪಡುತ್ತಿರುವ ಈ ದೈವವನ್ನು ಆರಾಧಿಸಲು ಮುಸ್ಲಿಮರು ಸಹ ಪೂಜೆ ಹರಕೆ ಸಲ್ಲಿಸುತ್ತಾರೆ. ಇದೊಂದು ಭಾವೈಕ್ಯತೆಯ ದೇವಾಲಯವಾಗಿದ್ದು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಸಹೋದರತೆ, ತಾಯಿ- ಮಗುವಿನ ಬಾಂದ್ಯವ್ಯ, ಅಣ್ಣ-ತಂಗಿಯರ ವಾತ್ಸಲ್ಯ, ಸಾಕು ಮಗನಿಗೆ ತಾಯಿಯ ಮಾತೃ ಪ್ರೇಮ ಸವಿಉಣಿಸುವ ವೀರದಿಮ್ಮಮ್ಮ ಈ ಭಾಗದ ಜನರ ಭಕ್ತಿಯ ಪರಾಕಾಷ್ಟೆತೆಯನ್ನು ಉಣಬಡಿಸುತ್ತಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ತಿಪ್ಪೇನಹಳ್ಳಿಯ ಹೆಣ್ಣು ಮಗಳಾದ ವೀರ ದಿಮ್ಮಮ್ಮ ಜನರ ಮೇಲಿನ ಕರುಣೆಯಿಂದ ಸಾಕಿ ಸಲಹುತ್ತಾಳೆಂಬ ನಂಬಿಕೆ ಈ ಭಾಗದಲ್ಲಿದೆ.
ದೊರೆಗಳೇ ಕೃಷಿಕರಾದ್ದರಿಂದ ಇವರ ಆಳ್ವಿಕೆಯಲ್ಲಿ ಒಕ್ಕಲುತನಕ್ಕೆ ಹೆಚ್ಚಿನ ಪ್ರೋತ್ಸಾಹ ಅನುಕೂಲಗಳು ದೊರೆತವು. ಇಂತಹದೊಂದು ಕುಟುಂಬ ಚಿಕ್ಕಬಳ್ಳಾಪುರ ಬಳಿಯ ಈಗಿನ ತಿಪ್ಪೇನಹಳ್ಳಿ ಇರುವ ಜಾಗದಲ್ಲಿ ಬೇಸಾಯ ಮಾಡಲು ತಕ್ಕ ಭೂಮಿಯನ್ನು ಕಂಡುಕೊಂಡು ಅಲ್ಲಿಯೇ ನೆಲೆ ನಿಲ್ಲಲ್ಲು ತೀರ್ಮಾನಿಸಿ ವಿಶಾಲವಾಗಿ ಹರಡಿಕೊಂಡಿರುವ ಕಳವಾರ ಬೆಟ್ಟದ ಕಣಿವೆ ದನಕರುಗಳ ಸಾಕಾಣಿಕೆಗೆ ದೊಡ್ಡ ಆಸರೆಯಾಗಿ ಕಂಡು ವಾಸಿಸತೊಡಗಿದರು, ಈ ಕುಟುಂಬದಲ್ಲಿ ಇಬ್ಬರು ಅಣ್ಣ-ತಮ್ಮಂದಿರು ಹಾಗೂ ಪುಟ್ಟ ತಂಗಿಯಿದ್ದಳು, ತಾಯಿಯಿಲ್ಲದ ಕಾರಣ ಕುಟುಂಬದ ಹಿರಿಯನಾದ ತಂದೆಯ ಮಾರ್ಗದರ್ಶನದಲ್ಲಿ ಕೃಷಿಯ ಕಾಯಕವನ್ನು ನಡೆಸುತ್ತಿದ್ದರು. ಒಂದು ದಿನ ಅಣ್ಣಂದಿರು ಹೊಲಕ್ಕೆ ಹೊರಟಾಗ ಬಾಲಕಿ ವೀರದಿವಮ್ಮ ಅವರೊಡನೆ ಹೊರಡುವಾಗ ದಾರಿ ತಪ್ಪಿ ಕಾಡಿನಲ್ಲಿ ವಾಪಸ್ಸು ಬರಲು ಪ್ರಯತ್ನಿಸುತ್ತಿದ್ದಾಗ ಚೀರುತ್ತಿರುವ ಮಗುವಿನ ಅಳು ಕೇಳಿ ಕುತೂಹಲದಿಂದ ಮಗುವನ್ನು ಎತ್ತಿಕೊಳ್ಳುವಂತೆ ಮಾಡಿದ್ದು, ಅಣ್ಣಂದಿರ ಮನಸ್ಸನ್ನು ಒಪ್ಪಿಸಿ ಅನಾಥ ಮಗುವನ್ನು ತಾನೇ ಸಲಪಲು ಪ್ರಾರಂಭಿಸಿದ್ದು. ಸಣ್ಣ ಬಾಲಕಿಯಾದರೂ ಅಮ್ಮನ ಪ್ರೀತಿಯನ್ನು ನೀಡಲು ಮುಂದಾಗಿದ್ದು, ಆನಂತರ ಕಾಲಕ್ರಮದಲ್ಲಿ ಬೆಳೆದ ಬಾಲಕ ಒಮ್ಮೆ ಆಕೆಯನ್ನು ರಮಿಸಲು ಮುಂದಾಗಿದ್ದು, ಆಕೆ ನಂತರದ ದಿನಗಳಲ್ಲಿ ತನ್ನನ್ನು ತಾನೇ ಆಹುತಿಯಾಗಿ ಅರ್ಪಿಸಿಕೊಂಡು ನಂತರದ ದಿನಗಳಲ್ಲಿ ಸಾದ್ವಿ ಶ್ರೀ ವೀರದಿದ್ದಮ್ಮಳಾಗಿ ಈ ಭಾಗದ ಜನತೆಯ ಅಮೋತ್ತರಗಳನ್ನು ನೆರವೇರಿಸುತ್ತಿದ್ದಾಳೆ ಎನ್ನುವುದು ನಂಬಿಕೆ, ಈಗಲೂ ಈ ತಲೆಮಾರಿನ ಪೀಳಿಗೆ ಮುಂದುವರೆಯುತ್ತಿದ್ದು ಸದ್ಯದಲ್ಲಿ ಕೆಂಪ್ಪಣ್ಣ ಮತ್ತು ಕುಟುಂಬವರು ಈ ದೇವಾಲಯವನ್ನು ಪೂಸುತ್ತಿದ್ದು ವಿವಿಧ ಕಡೆಗಳಿಂದ ಭಕ್ತಾದಿಗಳು ಬಂದು ತಮ್ಮ ಹರಕೆಗಳನ್ನು ತೀರಿಸಿ ಆಶೋತ್ತರಗಳನ್ನು ನೆರವೇರಿಸಿಕೊಳ್ಳುತ್ತಾ ಬಂದಿದ್ದಾರೆ.

Комментарии

Информация по комментариям в разработке