ಅಡಿಗ ನುಡಿಹಾರ : ಜಿ.ಎಚ್. ನಾಯಕ | Adiga Nudihara : G.H. Nayaka

Описание к видео ಅಡಿಗ ನುಡಿಹಾರ : ಜಿ.ಎಚ್. ನಾಯಕ | Adiga Nudihara : G.H. Nayaka

ನವೋದಯ ಕಾವ್ಯ ಇಂಗ್ಲಂಡಿನ ರಮ್ಯ ಸಂಪ್ರದಾಯ (Romantic tradition)ದ ಪ್ರೇರಣೆಯಿಂದ ಬೆಳೆದಿದ್ದಾದರೆ , ಅಡಿಗರ ಕಾವ್ಯದ ಮಟ್ಟಿಗೆ ಅದು ಕ್ಲಾಸಿಕಲ್ ಎಂದು ಹೇಳಬೇಕು .ರೊಮ್ಯಾಂಟಿಕ್ ಕಾವ್ಯದಲ್ಲಿ ಮನುಷ್ಯ ಚೈತನ್ಯ (Human spirit) ಅಪಾರ, ಅಮೇಯ , ಅನಂತ ಎಂಬ ನಂಬಿಕೆ . ಆದರೆ ಕ್ಲಾಸಿಕಲ್ ಧೋರಣೆಯ ಪ್ರಕಾರ ಮನುಷ್ಯ ಚೈತನ್ಯಕ್ಕೆ ಮಿತಿಯಿದೆ , ಮೇರೆಯಿದೆ . ಅಡಿಗರ ಒಟ್ಟು ಕಾವ್ಯದಲ್ಲಿ ಈ ಕ್ಲಾಸಿಕಲ್ ಧೋರಣೆಯನ್ನು ಕಾಣುತ್ತೇವೆ . ಇದು ನವೋದಯ ಕಾವ್ಯಕ್ಕಿಂತ ಭಿನ್ನವಾದದ್ದು .

*****************
ವಿಮರ್ಶಕರಷ್ಟೇ ಅಲ್ಲದೆ , ಸಾಮಾಜಿಕ , ರಾಜಕೀಯ , ಸಾಂಸ್ಕೃತಿಕ ಚಿಂತಕರೂ ಆಗಿರುವ ಗೋವಿಂದರಾಯ ಹಮ್ಮಣ್ಣ ನಾಯಕ ತಮ್ಮ ದಿಟ್ಟ ನಿಲುವಿಗೆ, ಖಚಿತ ಅಭಿಪ್ರಾಯಕ್ಕೆ ಹೆಸರಾದವರು , ಉತ್ತರ ಕನ್ನಡ ಜಿಲ್ಲೆಯ ಸೂರ್ವೆಯಲ್ಲಿ ಜನನ . ನಿವೃತ್ತರಾದ ನಂತರದಲ್ಲಿ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ . ಅವರ 'ಉತ್ತರಾರ್ಧ' ಪ್ರಬಂಧ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ನಿರಪೇಕ್ಷ ವಿಮರ್ಶಾ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಹಾಗು ನಿಜದನಿ ವಿಮರ್ಶಾ ಕೃತಿಗೆ ವಿ.ಎಂ.ಇನಾಂದಾರ ಸ್ಮಾರಕ ಬಹುಮಾನ ಲಭಿಸಿವೆ .

ಸಂಪಾದನೆ , ಛಾಯಾಗ್ರಹಣ , ಸಂಕಲನ : ಕುಂಟಾಡಿ ನಿತೇಶ್
ಸಂಗೀತ : ಜೋಯೆಲ್ ಸಕ್ಕರಿ

Комментарии

Информация по комментариям в разработке