satyanarayan pooja part _2

Описание к видео satyanarayan pooja part _2

#ಸತ್ಯನಾರಾಯಣ_ಆರತಿ_ಹಾಡು
ಎತ್ತುವೆನಾರುತಿ ಭಕ್ತಿಯಿಂದ ಶ್ರೀ ಸತ್ಯನಾರಾಯಣಗೆ
ಶಂಖ ಚಕ್ರ ಗದ ಪದ್ಮ ಧರಿಸಿದ ಸುಂದರಮೂರುತಿ ಗೆ
ಕರುಣ ದಯಾಳು ಕೇಶವನಿಗೆ ಮಾಡುವೆ ನಾನು ಮಂಗಳಾರುತಿಯಾll ಪll
ಕಾಶಿನಗರದಿ ಬಡ ಬ್ರಾಹ್ಮಣನಿಗೆ ಭಾಗ್ಯವ ಕೊಟ್ಟಂತೆ ಮಾಡಿ
ಅಪಾರಮಹಿಮ ಅಚ್ಯುತನಿಗೆ ಮಾಡುವೆ ನಾನು ಮುತ್ತಿನಾರತಿಯಾ ll1ll
ಅತೀ ಮದವೇರಿದ ಉಲ್ಕಾಮುಖನಿಗೆ ಕರುಣೆಯ ತೋರಿಸಿದಿ
ಕರುಣ ದಯಾಳು ಕೇಶವನಿಗೆ ಮಾಡುವೆ ನಾನು ಮಂಗಳಾರುತಿಯಾ ll 2ll
ಪತಿಯ ದರುಶನಕೆ ಪ್ರಸಾದವ ತ್ಯಜಿಸಿ ಹೋದ ಪತಿವ್ರತೆಗೆ
ಪತಿ ಭಾಗ್ಯವ ನೀಡಿ ಪಾವನಗೌದ ಪರಮ ದಯಾಳುವಿಗೆ ll3ll
ಗೋಪಾಲಕರು ಕೊಟ್ಟ ಪ್ರಸಾದವ ತ್ಯಜಿಸಿದ ತುಂಗನಿಗೆ
ಅತಿ ದುಃಖವ ನೀಡಿ ಮುಕ್ತಿಯ ತೋರಿದ ಹತ್ತವತಾರನಿಗೆ ll4ll

Комментарии

Информация по комментариям в разработке