Telepathy Theory & ಮಹಾವತಾರ್ ಬಾಬಾಜಿ ರೋಚಕ ಕಥೆ Part 5 II Mahavathar Babaji Untold Story in Kannada

Описание к видео Telepathy Theory & ಮಹಾವತಾರ್ ಬಾಬಾಜಿ ರೋಚಕ ಕಥೆ Part 5 II Mahavathar Babaji Untold Story in Kannada

ವಿಸ್ಮಯ - UNTOLD STORY SERIES
ಮಹಾವತಾರ್ ಬಾಬಾಜಿ ಜೀವನ ಕಥೆ - ಈಗ ಕನ್ನಡದಲ್ಲಿ

ಹಲೋ ಗೆಳೆಯರೇ, ನಮಸ್ಕಾರ.

ಕೆಳಗೆ ಬಾಬಾಜಿಯವರ ಉಳಿದ ವಿಡಿಯೋಗಳ link ಕೊಟ್ಟಿದ್ದೇನೆ



Part 1 -    • ಮಹಾವತಾರ್ ಬಾಬಾಜಿ ರೋಚಕ ಕಥೆ Part 1 II Ma...  
Part 2 -    • ಮಹಾವತಾರ್ ಬಾಬಾಜಿ ರೋಚಕ ಕಥೆ Part 2 II Ma...  
Part 3 -    • ಮಹಾವತಾರ್ ಬಾಬಾಜಿ ರೋಚಕ ಕಥೆ Part 3 II Ma...  
Part 4 -    • ಮಹಾವತಾರ್ ಬಾಬಾಜಿ ರೋಚಕ ಕಥೆ Part 4 II Ma...  
Part 5 -    • Telepathy Theory & ಮಹಾವತಾರ್ ಬಾಬಾಜಿ ರೋ...  
Part 6 -    • ಮಹಾವತಾರ್ ಬಾಬಾಜಿ ರೋಚಕ ಕಥೆ Part 6 II Ma...  
Part 7 -    • ಮಹಾವತಾರ್ ಬಾಬಾಜಿ ರೋಚಕ ಕಥೆ Part 7 II Ma...  
Part 8 -    • SAA ರಾಮಯ್ಯ & VT ನೀಲಕಂಠನ್ Biography ಮಹ...  
Part 9 -    • SAA ರಾಮಯ್ಯ & VT ನೀಲಕಂಠನ್ Biography ಮಹ...  
Part 10 -    • ಕ್ರಿಯಾ ಯೋಗ ಹೇಗೆ ಸಾಧ್ಯ? ಮಹಾವತಾರ್ ಬಾಬಾಜ...  

Part 11 -    • Superstar ರಜಿನಿಕಾಂತ್ & ಬಾಬಾಜಿ - ಹೇಗೆ....  

ನಾನು ಇವತ್ತಿನ episode ಶುರು ಮಾಡೋಕ್ಕೆ ಮೊದಲು, Part 3 episode ನಲ್ಲಿ ನಡೆದ ಒಂದು ಅದ್ಭುತ ಘಟನೆಯನ್ನ ನಿಮಗೆ ಸಣ್ಣದಾಗಿ ವಿವರಿಸುವ ಪ್ರಯತ್ನ ಮಾಡುತ್ತೀನಿ.

ಹಲವರಿಗೆ ಈ ಪ್ರಶ್ನೆ ಕಾಡುತಿರುತ್ತೆ. ಅದೇ ಪವಾಡಗಳು. ಪವಾಡಗಳು ಹೇಗೆ ನಡೆಯುತ್ತೆ. ಅದು ಯಾಕೆ ಮಹಾನ್ ಸಾಧಕರಿಂದಾನೆ ಮಾತ್ರ ಸಾಧ್ಯ, ಅನ್ನೋದರ ನಿಗೂಢ ರಹಸ್ಯ ನಾನು ನಿಮಗೆ ಹೇಳುತ್ತೀನಿ.

ಬಾಬಾಜಿಯವರು ಲಹರಿಯವರನ್ನ ರಾನಿಕೇತ್ ಗೆ ಕರೆಸುವ ಸಂಕಲ್ಪದಿಂದ, ಲಹರಿಯವರ ಮೇಲಧಿಕಾರಿಗಳಿಗೆ ಲಹರಿಯವರನ್ನ ಧ್ಯಾನಪುರ್ ಪ್ರಾಂತ್ಯದಿಂದ ರಾನಿಕೇತ್ ಪ್ರಾಂತ್ಯಕ್ಕೆ ಬದಲಿ ಮಾಡಲು ನಿಶಬ್ದವಾಗಿ ಸೂಚಿಸಿದರು. ಅದರಂತೆ ಮೇಲಧಿಕಾರಿಗಳು transfer order pass ಮಾಡುತ್ತಾರೆ, ಹಾಗೇನೇ ಲಹರಿಯವರು ಬಂದು ಬಾಬಾಜಿಯವರನ್ನ ಭೇಟಿ ಮಾಡುತ್ತಾರೆ. ಈ ಪವಾಡ ಹೇಗಾಯಿತು ಅನ್ನೋದು ನೀವು ಯೋಚನೆ ಮಾಡಿದಿರಾ?
ಬಾಬಾಜಿ ಯವರು ಮೇಲಧಿಕಾರಿಗಳಿಗೆ ಹೇಗೆ ಸೂಚನೆ ಕೊಟ್ರು ಅನ್ನುವ ಪ್ರಶ್ನೆಗೆ ಉತ್ತರ, telepathy, ಭಾವಗ್ರಾಹಕ ಪ್ರಸರಣ ವಿದ್ಯೆ. ಮಾನವ ಜಾತಿಯಲ್ಲಿನ ಏಕತ್ವವನ್ನು ಅನುಭೂತಿ ಪಡೆದ ನಂತರ, ಎಲ್ಲರ ಮನಸ್ಸು ಆ ಅನುಭೂತಿ ಪಡೆದ ವ್ಯಕ್ತಿಗೆ, ಪ್ರಸರಣ ಕೇಂದ್ರಗಳಾಗಿ ಕೆಲಸ ಮಾಡುತ್ತದೆ. ಅಂದರೆ ತನ್ನ mind ನಲ್ಲಿರುವ thoughts, telecast ಮಾಡುವ communications signal ಗಳಾಗಿ ಕೆಲಸ ಮಾಡುತ್ತದೆ ಅಂತ ಬಾಬಾಜಿಯವರು ಹೇಳಿರುತ್ತಾರೆ. ಒಂದು ಮಾತಿನಲ್ಲಿ ಹೇಳಬೇಕಂದರೆ ಇದೊಂದು mind to mind communication ವಿದ್ಯೆಯಾಗಿರುತ್ತೆ.

ಅಸಲಿಗೆ ನಮ್ಮ ಬಳಿ ಯಾವುದೇ ರೀತಿಯ ಸಾಧನೆಗಳಿಲ್ಲದೆ ಭಾಷೆಗಳಿಗೆ ಸಂಬಂಧ ಇಲ್ಲದೇನೆ ಎಷ್ಟೋ ಮೈಲಿ ದೂರ ಇರುವ ವ್ಯಕ್ತಿಯೊಂದಿಗೆ ನಮ್ಮ ಭಾವವನ್ನು ಹಂಚಿಕೊಂಡು ಆ ವ್ಯಕ್ತಿಯ ಭಾವವನ್ನು ಗ್ರಹಿಸಬಲ್ಲ extra sensory perceptions ಅನ್ನುವ ಪ್ರಕ್ರಿಯಿಂದ ಅನುಸರಿಸುವ ವಿದ್ಯೆಯೇ ಈ telepathy. ಈ telepathy ಯಾವುದೇ ರೀತಿಯಾದ ಮಂತ್ರ ತಂತ್ರ ವಿದ್ಯೆ, ಮಾಯೆ ಮರ್ಮಗಳಿಲ್ಲದ ಮಹತ್ತರವಾದ ಮಹಾ ಶಕ್ತಿವಂತವಾ ವಿಧ್ಯೆ. ancient Greek ಪ್ರಕಾರ Tele ಅಂದರೆ distance, ದೂರ. Pathy ಅಂದರೆ feeling, communication, passion, experiences. ಪೂರ್ವದಲ್ಲಿ ಧ್ಯಾನದಲ್ಲಿರುವ ಋಷಿಗಳು ಸಪ್ತ ಸಮುದ್ರದ ಹಿಂದೆ ಇದ್ದ ಹಲವು ಋಷಿಗಳ ಜೊತೆ ಈ telepathy ಯಿಂದಾನೆ ಸಂಭಾಷಣೆ ಮಾಡುತ್ತಿದ್ದರು ಅಂತ ಕೆಲವು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಕೇಳೋದಕ್ಕೆ ವಿಚಿತ್ರವಾಗಿದ್ದರು higher level of telepathy experts ಗಳಿಂದ ವಸ್ತುಗಳನ್ನ ಕೂಡ ಅಲುಗಾಡಿಸಬಹುದು. ನಿಮಗೂ ಕೂಡ ಇದರ ಅನುಭವ ಆಗಿರುತ್ತೆ. ಕೆಲವೊಮ್ಮೆ ಯಾವುದೇ ಸಂಬಂಧ ಇಲ್ಲದೆ ಇಬ್ಬರು ವ್ಯಕ್ತಿಗಳು ಒಂದೇ ಮಾತನ್ನ, ಒಂದೇ ಆಲೋಚನೆಯನ್ನ ವ್ಯಕ್ತ ಪಡಿಸುವುದು, ಯಾರೊಂದಿಗೆ ಮಾತಾಡಬೇಕು ಅಂತ phone ತೆಗೆಯೋದರ ಒಳಗೇನೇ ಅವರೇ ನಮ್ಮಗೆ phone ಮಾಡೋದು, ಅವರೇ ಬಂದು ಭೇಟಿ ಮಾಡೋದು, ಇದೆಲ್ಲ ನಮಗೆ ನಿತ್ಯವೂ ಎದುರಾಗುವ ಅನುಭವಗಳೇ. ಸಾಧಾರಣವಾಗಿ ಸ್ತ್ರೀಯರಿಗುವ ಸಹಜ ಅವಬೋದನ I mean intuition ಕಾರಣದಿಂದಾಗಿ ಪುರುಷರಿಗಿಂತ telepathy ಸ್ತ್ರೀಯರಿಗೆ ಸಿದ್ಧಿಸುತ್ತೆ ಅಂತ ಕೆಲವು article ಗಳಲ್ಲಿ ಉಲ್ಲೇಖಿಸಲಾಗಿದೆ. ಒಂದು ಸರಿ ಈ telepathy ಪ್ರಕ್ರಿಯೆಗೆ ಇಬ್ಬರು ವ್ಯಕ್ತಿಗಳು connect ಆದರೆ ಅವರು ತಮ್ಮ ತಮ ಭಾವಗಳನ್ನ ಹಂಚಿಕೊಳ್ಳುವುದು ಅಷ್ಟೇ ಅಲ್ಲ ಒಬ್ಬರ ಅಧೀನದಲ್ಲಿ ಇನ್ನೊಬರು ತುಂಬಾ easy ಯಾಗಿ ಬಂದುಬಿಡುತ್ತಾರೆ. ಈ ಅದ್ಭುತವಾದ ಶಕ್ತಿಯನ್ನು ನಾವು ಯೋಗ, ಧ್ಯಾನ ಪ್ರಕ್ರಿಯೆಗೆಳಿಂದ ಪಡೆಯಬಹುದು. ಬಾಬಾ ರಂತಹ ಅತೀತ ಮಾನವರಿಗೆ ಈ ವಿದ್ಯೆ ತುಂಬಾನೇ ಸುಲಭವಾದದ್ದು ಅದನ್ನೇ ಬಾಬಾಜಿಯವರು ಇಲ್ಲಿ ಮಾಡಿದು.

ಸಾಮಾನ್ಯವಾಗಿ ಎಲ್ಲರು ಹೇಳುತ್ತಾರೆ, ಆ ದೇವರು ಹಾಗೆ ಪವಾಡ ಮಾಡಿದರಂತೆ, ಈ ಸ್ವಾಮಿಜಿ ಹೀಗೆ ಮಾಯೆ ಮಾಡಿದರಂತೆ ಅಂತ. ಆದರೆ ನಾನು ಈ ಪವಾಡಗಳನ್ನ ಹೇಗೆ ಮಾಡಲು ಸದ್ಯ ಅನ್ನುವ ವಿಚಾರವಾಗಿ ತಲೆ ಕೆಡಿಸಿಕೊಂಡಾಗ ನನಗೆ ಸಿಕ್ಕ ಉತ್ತರ ಇದು. ನಿಮ್ಮ ಅಭಿಪ್ರಾಯವನ್ನ ದಯವಿಟ್ಟು comments ನಲ್ಲಿ post ಮಾಡಿ. ಹೀಗೆ ಬಾಬಾಜಿಯವರು ಮಾಡಿರುವಂತಹ ಹಲವಾರು ಪವಾಡಗಳು ನಿಜವಾಗಿಯೂ ನಡೆದಿದೆ ಹಾಗು ಹೇಗೆ ನಡೆದಿದೆ ಅನ್ನೋದನ್ನ ನಾವು ಅರ್ಥ ಮಾಡಿಕೊಳಬಹುದು.
ಇಲ್ಲಿಂದ ನಾವು ನಮ್ಮ episode ಶುರು ಮಾಡೋಣ.

ಇದು ಇಲ್ಲಿಗೆ ಮುಗಿಯೋಲ್ಲ. ಗೆಳೆಯರೇ, ಇನ್ನು ಹಲವು ಸ್ವಾರಸ್ಯ ಘಟನೆಗಳು ಮುಂದೆ ಇದೆ. ನಾವು ಅದನ್ನ onebyone ಹೇಳ್ತಿವಿ. ನಾವು ಎಂದಿನಂತೆ ಹೇಳುವ ಹಾಗೆ ದಯವಿಟ್ಟು ನಮ್ಮ ವಿಡಿಯೋವನ್ನ ಲೈಕ್ ಮಾಡಿ, ಈ ಅದ್ಭುತ ವಿಚಾರವನ್ನ ನಿಮ್ಮ ಫ್ಯಾಮಿಲಿ, ಫ್ರೆಂಡ್ಸ್ ಹಾಗು 4 ಜನ ಸಜ್ಜನರಿಗೆ ಶೇರ್ ಮಾಡಿ.

ಮಿಸ್ಟರಿ #mysteryRevealed
ನಿಮ್ಮ ಕಾಮನಬಿಲ್ಲು YouTube Channel ನಲ್ಲಿ

The Untold Story of Guru Sri Mahavathar Babaji

CONTENT FROM VARIOUS BOOKS, VIDEOS.
MUSIC FROM INDIAN MOVIES BGM
GURU ASTAKAM FROM OUR MUSICAL GURU SRI KULADEEP PAI GURU PARAMPARA ALBUM

We have used content to spread the awareness on Babaji in Kannada language, kindly support as Gurus.

Комментарии

Информация по комментариям в разработке