ಉ.ಕ.ಜಿಲ್ಲೆಯ ಯಲ್ಲಾಪುರ, ಅಂಕೋಲಾ ತಾಲೂಕಿನಲ್ಲಿ ಭಾರಿ ಮಳೆ; ಜನರ ಸುರಕ್ಷತೆಗೆ ಪರ್ಯಾಯ ದೋಣಿ ವ್ಯವಸ್ಥೆ

Описание к видео ಉ.ಕ.ಜಿಲ್ಲೆಯ ಯಲ್ಲಾಪುರ, ಅಂಕೋಲಾ ತಾಲೂಕಿನಲ್ಲಿ ಭಾರಿ ಮಳೆ; ಜನರ ಸುರಕ್ಷತೆಗೆ ಪರ್ಯಾಯ ದೋಣಿ ವ್ಯವಸ್ಥೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಸುರಿದ ಭಾರಿ ಮಳೆಯಿಂದ ಯಲ್ಲಾಪುರ, ಅಂಕೋಲಾ ತಾಲೂಕಿನ 20ಕ್ಕೂ ಅಧಿಕ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ.
ಹಳ್ಳಿಗಳ ಸಂಪರ್ಕ ಸೇತುವೆ ಹಾಗೂ ರಸ್ತೆಗಳು ಹಾನಿಯಾಗಿದ್ದು, ಜನಜೀವನ ಬಾಧಿತವಾಗಿದೆ. ಜಿಲ್ಲಾಡಳಿತ, ಸಂಪರ್ಕಕ್ಕಾಗಿ ದೋಣಿಗಳ ವ್ಯವಸ್ಥೆಯನ್ನು ಕಲ್ಪಿಸಿದೆ.
ದೋಣಿಗಳು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಕಾರ್ಯದಲ್ಲಿ ತೊಡಗಿವೆ.
ಮಾಜಿ ಸಚಿವ ಶಿವರಾಮ್ ಹೆಬ್ಬಾರ್‍, ಜನರ ಸುರಕ್ಷತೆ ದೃಷ್ಟಿಯಿಂದ ದೋಣಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವರಾಮ ಗಾವಂಕರ್, ಜಿಲ್ಲೆಯ ಅನೇಕ ಗ್ರಾಮಗಳು ಸಂಪರ್ಕವನ್ನು ಕಳೆದುಕೊಂಡಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತ, ದೋಣಿ ವ್ಯವಸ್ಥೆ ಕಲ್ಪಿಸಿದೆ. ಶೀಘ್ರ ಸಂಪರ್ಕ ಸೇತುವೆ ಹಾಗು ರಸ್ತೆಗಳ ದುರಸ್ತಿ ಕೈಗೊಳ್ಳುವಂತೆ ಮನವಿ ಮಾಡಿದರು

Комментарии

Информация по комментариям в разработке