Jnaniyago Manuja - Sri Sridhara Swamiji | Vishweshwar Bhat Kharwa

Описание к видео Jnaniyago Manuja - Sri Sridhara Swamiji | Vishweshwar Bhat Kharwa

About Sadguru Bhagawan Sri Sridhara Swami Maharaj,Varadapura

Singer - Vishweshwar Bhat Kharwa

Lyrics -

ಜ್ಞಾನಿಯಾಗೋ ಮನುಜ
ಗುರುವ ಧ್ಯಾನಿಸಿ ಮನದೊಳು ಪೂಜಿಸಿ ಸೇವಿಸಿ
ಜ್ಞಾನಿಯಾಗೋ ಮನುಜ

ಗಾನಲೋಲ ಶ್ರೀ ಶ್ರೀಧರವಲ್ಯನ
ಸಾನುರಾಗದಿಂ ಪಾಡುತ ನಲಿಯುತ

ಕಾಮಕ್ರೋಧಮತ್ಸರಂಗಳಲಿ
ತಾಮಸನಾಗುತ ಕಾಲವ ಕಳೆದು
ತಾನಾರೆಂಬುದನರಿಯದೆ ಮೌಢ್ಯದಿ
ಮಾನವಜನ್ಮವ ಹಾನಿ ಮಾಡಲುಬೇಡ ||1||

ನಿರುತವು ಶ್ರೀಧರ ದಾಸನ ಕಾಯುವ
ಕರುಣಾಮಯ ಸದ್ಗುರುವರನ
ಪರಿಪರಿವಿಧದೊಳಗಂಚಿಸಿ ಮೆಚ್ಚಿಸಿ
ವರಪಡೆವ ಮಾರ್ಗವನರಿಯೋ ||2||

ಹರಿಯನು ಧ್ಯಾನಿಸೇ ದುರಿತಗಳೆಲ್ಲವ
ಪರಿಹರಿಸುವ ಎಂಬುದನರಿಯೋ
ಗುರುಸೇವೆಯ ನೀ ನಿರುತವುಗೈಯಲು
ಪರಮಪದದ ಸೋಪಾನವನರಿಯೋ ||3||

ಹರಿಹರರೊಂದೆಂಬರಿವನು ತೋರಿದ
ಪರಮಹಂಸ ಸದ್ಗುರುವರನ
ನಿರುತವು ಪಾಡುತ ಮನದಲಿ ಕಾಣುತ
ಪರಮಾನಂದವ ನೀ ಪಡೆಯೋ ||4||

Комментарии

Информация по комментариям в разработке