ಮಾನವನ ಕರ್ತವ್ಯ ಭಾಗ-2 - @ಜಗದ್ಗುರು ಶ್ರೀ ನಂದೀಶ್ವರ ಮಹಾಸ್ವಾಮಿಗಳವರ ಪ್ರವಚನಗಳು

Описание к видео ಮಾನವನ ಕರ್ತವ್ಯ ಭಾಗ-2 - @ಜಗದ್ಗುರು ಶ್ರೀ ನಂದೀಶ್ವರ ಮಹಾಸ್ವಾಮಿಗಳವರ ಪ್ರವಚನಗಳು

2 ಮಾನವನ ಕರ್ತವ್ಯ -
ಭಾರತ ಭೂಮಿಯ ಮೇಲೆ ಕಾಲ ಕಾಲದಿಂದಲೂ ಮಾನವ ಕುಲದ ಉದ್ದಾರಕ್ಕಾಗಿ ಅವತರಿಸಿ ಬರುತ್ತಿರುವ ವಿಭೂತಿ ಪುರುಷರಲ್ಲಿ ಶ್ರೀ ನಿಜಗುಣರು, ಶ್ರೀ ಸಿದ್ಧಾರೂಢರು, ಶ್ರೀ ಶಿವಾನಂದ ಮಹಾಸ್ವಾಮಿಗಳು ಪ್ರಮುಖರು. ಅವರ ಅಭಿಲಾಷೆಯು ಸರ್ವ ಜೀವರು ಸುಖಿಗಳಾಗಿರಬೇಕೆಂಬುದಾಗಿತ್ತು. ಈ ಸುಖದ ನಿಧಿ ಜ್ಞಾನದಲ್ಲಿದೆಯೆಂದು ತಿಳಿದು ಭಕ್ತರ ಅಜ್ಞಾನವನ್ನು ಕಳೆಯಲೆಂದೇ ತಮ್ಮ ಸರ್ವ ಸುಖವನ್ನು ತ್ಯಾಗಮಾಡಿ ನಂಬಿದ ಭಕ್ತರನ್ನು ಬರೀಯ ಕೈಯಿಂದ ಬರಿ ತತ್ವಜ್ಞಾನಾಮೃತದ ಶಾಸ್ತ್ರದಿಂದ ಉದ್ದಾರ ಮಾಡಿದವರು. ಅಂತವರ ಶ್ರೇಣಿಯಲ್ಲಿ ಕನ್ನಡ ನಾಡಿನ ಗದಗನ ಮುಕ್ತೇಶ್ವರ ಪೀಠದ ತೃತೀಯ ಜಗದ್ಗುರುಗಳಾದ ಜಗದ್ಗುರು ಶ್ರೀ ನಂದೀಶ್ವರ ಮಹಾಸ್ವಾಮಿಗಳು ಪ್ರಮುಖರಾಗಿದ್ದಾರೆ. ಇವರು ಜಗದ್ಗುರು ಶ್ರೀ ಶಿವಾನಂದ ಮಹಾಸ್ವಾಮೀಜಿಯವರ ಕರ ಸಂಜಾತರು. ಇವರು ಮಾಡಿದ ಪ್ರವಚನಗಳು ಭಕ್ತರಿಗೆ ಪರಮಾಮೃತಗಳಾಗಿದ್ದು, ಅವರ ವಾಣಿಯಲ್ಲಿ ಮಾಧುರ್ಯವಿತ್ತು, ಕತ್ತಲೆಯನ್ನು ಕಳೆಯುವ ಶಕ್ತಿಯಿತ್ತು, ತತ್ವವನ್ನು ಸಂಸಾರದೊಂದಿಗೆ ವ್ಯತ್ಯಾಸಿಕರಿಸುವ ತಿಳಿ ಹಾಸ್ಯವಿತ್ತು, ಇಂತಹ ಪ್ರವಚನಗಳು ಅವರ ಜೀವಿತ ಕಾಲಮಾನದಲ್ಲಿ ಲೆಕ್ಕವಿಲ್ಲಷ್ಟು ಕೇಳಿ ಪುನೀತರಾದ ಭಕ್ತರ ಸಂಖ್ಯೆ ಅಗಣಿತವಾದುದು. ಅವುಗಳು ಇವರ ನಾಮಾಂಕಿತಲ್ಲಿ"ಜಗದ್ಗುರು ಶ್ರೀ ನಂದೀಶ್ವರ ಮಹಾಸ್ವಾಮಿಗಳವರ ಪ್ರವಚನ ಪುಷ್ಪಗಳು" ಎಂಬ ಪುಸ್ತಕಗಳೂ ಬಂದಿದ್ದಾವೆ. ಆದರೆ ಬದಲಾದ ಕಾಲದಲ್ಲಿ ಜಗದ್ಗುರು ಶ್ರೀ ನಂದೀಶ್ವರ ಮಹಾಸ್ವಾಮಿಗಳವರ ಪ್ರವಚನಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಿಗುವಂತಾದರೆ ಉತ್ತಮವೆಂದು ತಿಳಿದು, ಮಹಾಸ್ವಾಮಿಗಳ ಭಕ್ತರ ಆಸೆಯಂತೆ ಅವರ ಪ್ರವಚನಗಳನ್ನು ಇಲ್ಲಿ ನೀಡತಾಗುತ್ತಿದೆ. ಜಗದ್ಗುರು ಶ್ರೀ ನಂದೀಶ್ವರ ಮಹಾಸ್ವಾಮಿಗಳವರ ಒಡನಾಡಿ ಶಿಷ್ಯರಾದ ಶ್ರೀ ಮಳಿಶಾಂತಪ್ಪ ಮಾಸಣಗಿ ಯವರು ಮಹಾಸ್ವಾಮಿಗಳ ಪ್ರವಚನಗಳನ್ನು ಪೂರ್ವದಿಂದಲೂ ಧ್ವನಿಸುರಳಿಗಳಲ್ಲಿ ಸಂಗ್ರಹಿಸಿದ ಮಹತ್‌ ಕಾರ್ಯದಿಂದ ಇಂದು ಮಹಾಸ್ವಾಮಿಗಳವರ ಧ್ವನಿಯನ್ನು ಕೇಳುವ ಸದಾವಕಾಶ ನಮ್ಮದಾಗಿದೆ.
ಈ ಕಾರ್ಯದಿಂದ ಜಗದ್ಗುರು ಶ್ರೀ ನಂದೀಶ್ವರ ಮಹಾಸ್ವಾಮಿಗಳವರ ಸರ್ವ ಭಕ್ತರು ಕೇಳಿ ಹರ್ಷಗೊಳ್ಳುವಿರೆಂದು ಭಾವಿಸುತ್ತೇವೆ.
ಸಂಪರ್ಕ : ಶ್ರೀ ಮಳಿಶಾಂತಪ್ಪ ಮಾಸಣಗಿ
ಜಗದ್ಗುರು ಶ್ರೀ ಶಿವಾನಂದ ಮಠ ಗದಗ.
9448805483
9986295483
ಸಂಕಲನ : ಅಮರೇಶ ರಾಂಪೂರ
9972929862

Комментарии

Информация по комментариям в разработке