SMB Solar Wild Animals and Birds Reppeller. Contact to Gowdru Nagaraja, Cell- 6363737439.

Описание к видео SMB Solar Wild Animals and Birds Reppeller. Contact to Gowdru Nagaraja, Cell- 6363737439.

"SMB ಸೌರ ಸ್ವಯಂ ಚಾಲಿತ ಕಾಡು ಪ್ರಾಣಿಗಳು ಹಾಗೂ ಪಕ್ಷಿಗಳನ್ನು ಹಿಮ್ಮೆಟ್ಟಿಸುವ ದ್ವನಿ ವರ್ಧಕ" (SMB Solar Wild Animals and Birds Reppeller)

"ರೈತರ ಬೆಳೆಗೆ ಹಾನಿ ಮಾಡುವ ಪ್ರಾಣಿ,ಪಕ್ಷಿಗಳನ್ನು ವಿಭಿನ್ನವಾಗಿ ಸದ್ದು ಮಾಡಿ ಓಡಿಸುವ ಸ್ವಯಂ ಚಾಲಿತ ಸೌರ ಯಂತ್ರ"
ರೈತರು ಕಷ್ಟಪಟ್ಟು ಬೆಳೆದ ಬೆಳೆಯು ಕಾಡು ಹಂದಿ, ಜಿಂಕೆ ಇನ್ನಿತರೆ ಪ್ರಾಣಿ-ಪಕ್ಷಿಗಳ ಕಾಟದಿಂದ ಹೊಲದಲ್ಲಿ ಸಜ್ಜೆ, ಜೋಳ, ಮಕ್ಕೆಜೋಳ, ಹಣ್ಣು ಸೇರಿದಂತೆ ಇನ್ನಿತರೆ ಬೆಳೆ ರಕ್ಷಣೆ ಮಾಡುವುದೇ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ರೈತ ಕಷ್ಟಪಟ್ಟು ಬೆಳೆದ ಕೃಷಿ-ತೋಟಗಾರಿಕೆ ಬೆಳೆ ಪ್ರಾಣಿ-ಪಕ್ಷಿಗಳ ಪಾಲಾಗುತ್ತಿದ್ದು, ಬೆಳೆ ಕಾಪಾಡಿಕೊಳ್ಳಲು ರೈತ ರಾತ್ರಿ ನಿದ್ದೆ ಬಿಟ್ಟು ಕಾವಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡುಪ್ರಾಣಿಗಳು ಹೊಲದಲ್ಲಿ ಕೆಲಸ ಮಾಡುವ ರೈತನ ಮೇಲೂ, ನಾಡಿಗೆ ನುಗ್ಗಿ ಮನುಷ್ಯ ಹಾಗೂ ಸಾಕು ಪ್ರಾಣಿಗಳ ಮೇಲೂ ದಾಳಿ ಮಾಡಿದ್ದುಂಟು. ಅದರಲ್ಲೂ ಜಿಂಕೆ, ಕಾಡು ಹಂದಿ, ನವಿಲುಗಳ ಕಾಟಕ್ಕೆ ರೈತ ಹೈರಾಣಾಗಿ ಹೋಗಿದ್ದು, ಬೆಳೆದ ಬೆಳೆ ಕೈಗೆ ಬಾರದೆ ಸಾವಿರಾರು ರೂಪಾಯಿಗಳು ನಷ್ಟ ಅನುಭವಿಸುತ್ತಿದ್ದಾನೆ. ನಾಡಿನ ಕೆಲ ಭಾಗದಲ್ಲಿ ಕಾಡು ಹಂದಿಗಳ ಕಾಟ ಜಾಸ್ತಿಯಾಗಿದ್ದು, ರಾತ್ರಿ ವೇಳೆ ಹಿಂಡು ಹಿಂಡಾಗಿ ತೋಟದ ಕಡೆಗೆ ನುಗ್ಗಿ ಬೆಳೆದಿದ್ದ ಬೆಳೆಯನ್ನು ನಾಶ ಮಾಡುತ್ತಿವೆ. ಹಗಲಿನಲ್ಲಿ ಕೋತಿಗಳ ಕಾಟ, ಧವಸ-ಧಾನ್ಯಗಳನ್ನು ಪಕ್ಷಿಗಳು ತಿಂದು ಮುಗಿಸುತ್ತದೆ. ಸಂಜೆಯಾದರೆ ಕಾಡಿನಿಂದ ನಾಡಿಗೆ ಗುಂಪು ಗುಂಪಾಗಿ ಬರುವ ಜಿಂಕೆಗಳು ಒಂದು ತೋಟಕ್ಕೆ ನುಗ್ಗಿ ಒಡಲು ಆರಂಭಿಸಿದರೆ ಬೆಳೆ ಸಂಪೂರ್ಣ ನಾಶವಾದಂತೆಯೇ ಸರಿ. ಮೊದಲೆಲ್ಲ ಡಬ್ಬಕ್ಕೆ ಕೋಲಿನಿಂದ ಬಾರಿಸಿ ಶಬ್ದಮಾಡಿ ಪ್ರಾಣಿ ಪಕ್ಷಿಗಳನ್ನು ಓಡಿಸುತ್ತಿದ್ದರು. ಜೋರಾಗಿ ಕೂಗುತ್ತಾ, ಕೇಕೆ ಹಾಕುತ್ತಾ ಹೊಲದ ತುಂಬಾ ಓಡಾಡಬೇಕಿತ್ತು. ಅನಂತರ ವೈಜ್ಞಾನಿಕತೆ ಮುಂದುವರೆದಂತೆ ಗಾಳಿಗೆ ಬಡೆದುಕೊಳ್ಳುವ ತಮಟೆಯನ್ನು ರೈತರು ಅಳವಡಿಸಿಕೊಂಡರು. ಈಗ ಈ ಸೌರಶಕ್ತಿಯನ್ನು ಬಳಸಿ ಸುಧಾರಿತ ಸಾಧನ ಬಂದಿದೆ. ಈ ರೀತಿ ಮೊದಲು ಹೊರದೇಶ, ಹೊರರಾಜ್ಯಗಳಲ್ಲಿ ಮಾಡಲಾಗಿತ್ತು ಈಗ ಪ್ರಥಮವಾಗಿ ಕರ್ನಾಟಕದಲ್ಲಿ ಬಳ್ಳಾರಿ ಜಿಲ್ಲೆಯ, ಕೂಡ್ಲಿಗಿ ತಾಲೂಕಿನ ಜಂಗಮಸೋವೇನ ಹಳ್ಳಿಯ ಗೌಡ್ರು ನಾಗರಾಜ ಇವರು ಅಭಿರುದ್ಧಿಪಡಿಸಿ ಪ್ರಯೋಗ ನಡೆಸಿ, ತಯ್ಯಾರಿಸಿ ಶ್ರೀ ಮೂಗಬಸವೇಶ್ವರ ಎಂಟರ್ ಪ್ರೇಸಸ್ ಅಡಿಯಲ್ಲಿ ರೈತರಿಗೆ ಸುಲಭ ದರದಲ್ಲಿ ವಿತರಿಸಲಾಗುತ್ತಿದೆ. ಇದರಲ್ಲಿ ಪ್ರಾಣಿ, ಪಕ್ಷಿಗಳು ಹೆದರುವಂತಹ, ಅವುಗಳಿಗೆ ಕಿರಿ ಕಿರಿ ಉಂಟುಮಾಡುವಂತಹ ವಿಭಿನ್ನವಾದ ಧ್ವನಿಗಳನ್ನು ಅಳವಡಿಸಲಾಗಿದೆ, ಪ್ರಾಣಿಪಕ್ಷಿಗಳು ಆ ಧ್ವನಿಗೆ ಅಭ್ಯಾಸವಾಗದಿರಲಿ ಎಂದು ಅವಗವಾಗ ಧ್ವನಿಯಲ್ಲಿ ಬದಲಾವಣೆಯಾಗುತ್ತಿರುತ್ತದೆ. ಈ ಯಂತ್ರವು ಸಂಪೂರ್ಣವಾಗಿ ಸ್ವಯಂಚಾಲಿತವಾಗಿ ಸೌರ ಶಕ್ತಿಯನ್ನು ಉಪಯೋಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ 10 ನಿಮಿಷ ಗಳಿಗೊಮ್ಮೆ 1 ನಿಮಿಷ ವಿಭಿನ್ನ ರೀತಿಯಲ್ಲಿ ಸದ್ದು ಮಾಡುವುದು. ರಾತ್ರಿ ಬೇಕಾದಲ್ಲಿ ರಾತ್ರಿ, ಅಥವಾ ಅಗಲು ಬೇಕಾದಲ್ಲಿ ಅಗಲು ಈ ಯಂತ್ರವನ್ನು ಬಳಸಬಹುದು. ಒಂದು ಯಂತ್ರವು 8-10 ಎಕರೆ ವಿಸ್ತೀರ್ಣದ ವರೆಗೂ ಬೆಳೆಗಳಿಗೆ ಪ್ರಾಣಿ-ಪಕ್ಷಿಗಳಿಂದ ರಕ್ಷಣೆ ನೀಡಬಹುದು.

ಹೆಚ್ಚಿನ ವಿವಗಳಿಗಾಗಿ ಸಂಪರ್ಕಿಸಿ:
ಶ್ರೀ ಮೂಗಬಸವೇಶ್ವರ ಎಂಟರ್ ಪ್ರೇಸಸ್.
ಗೌಡ್ರು ನಾಗರಾಜ.
ಜಂಗಮಸೋವೇನಹಳ್ಳಿ,
ಕೂಡ್ಲಿಗಿ ತಾಲೂಕು.
Cell- 6363737439

Комментарии

Информация по комментариям в разработке