kalyanadanna ni baro basavanna - ಕಲ್ಯಾಣದಣ್ಣ ನೀ ಬಾರೋ ಬಸವಣ್ಣ

Описание к видео kalyanadanna ni baro basavanna - ಕಲ್ಯಾಣದಣ್ಣ ನೀ ಬಾರೋ ಬಸವಣ್ಣ

ಕಲ್ಯಾಣದಣ್ಣ ನೀ ಬಾರೋ ಬಸವಣ
----------------------------------------------
ರಾಗ : ಪೀಲು ಭಜನೆ : ತಾಳಕೇರಿ ಬಸವರಾಜು


ಕಲ್ಯಾಣದಣ್ಣ ನೀ ಬಾರೋ ಬಸವಣ್ಣ ನೀ ಬರದಿರಲು ಜಗವೆಲ್ಲ ಅಳಿಗಾಲವಣ್ಣ, ನೀ ಲೋಕ ಪ್ರಾಣ ||

ಸತ್ಯ ಶಿವ ಧಾರ್ಮ ಸಿರಿಯೆಲ್ಲ ಕ್ಷಯವಾಗಿದೆ ಮಿಥ್ಯ ಮರೆ ಮೋಸಗೈದವರಿಗೆ ಜಯವಾಗಿದೆ | ಭಕ್ತಿ ಭಂಡಾರವೋ ಮುಕ್ತಿ ಮಂದಿರವೋ ನಿತ್ಯ ಜೀವನ ಸಾರ ಬರಿದಾಗಿದೆ || ಕಲ್ಯಾಣದಣ್ಣ ||

ನೀತಿ ನಿಜತತ್ತ್ವ ನಿಧಿಸಲಾರ ಹೊಲಸಾಗಿದೆ ಪ್ರೀತಿ ವಿಶ್ವಾಸ ನಡೆ ಪೂರಾ ಕಲಾಕಾಗಿದೆ | ಮೃತ್ಯು ಮ್ಯಾಸನಾಗಿದೆ, ಮೃತ್ಯು ಮನೆ ಮಾಡಿದೆ ಸತ್ಯ ಹುಸಿಯಾಗಿ ಸುಜನರಿಗೆ ಹಗೆಯಾಗಿದೆ || ಕಲ್ಯಾಣದಣ್ಣ ||ನೀತಿ ನಿಜತತ್ತ್ವ ನಿಧಿಸಲಾರ ಹೊಲಸಾಗಿದೆ ಪ್ರೀತಿ ವಿಶ್ವಾಸ ನಡೆ ಪೂರಾ ಕಲಾಕಾಗಿದೆ | ಮೃತ್ಯು ಮ್ಯಾಸನಾಗಿದೆ, ಮೃತ್ಯು ಮನೆ ಮಾಡಿದೆ ಸತ್ಯ ಹುಸಿಯಾಗಿ ಸುಜನರಿಗೆ ಹಗೆಯಾಗಿದೆ || ಕಲ್ಯಾಣದಣ್ಣ ||

ಪುಣ್ಯ ಕಾಯಕವು ಕೈಮುರಿದು ಬೋಳಾಗಿದೆ ಮಾನ್ಯ ಸತೀಧರ್ಮ ಕುಲಕೋಟಿ ಹಾಳಾಗಿದೆ | ಕರುಣೆ ಸೆಲೆ ನಿಂತಿದೆ, ಧರೆಯೊಳುಡಿ ತುಂಬಿದೆ ಕುಲ ಕೋತಿ ಮಾಯೆಗೆ ಬಲಿಯಾಗಿದೆ || ಕಲ್ಯಾಣದಣ್ಣ ||

ಆಸೆ ಪಾಶದ ಬಂಧನ ಬಿಗಿಯಾಗಿದೆ ನಾಶವಾಗುವ ದಾರಿಯಲ್ಲಿ ಜನ ಸಾಗಿದೆ ರೋಷ ಕಿಡಿಯಾಗಿದೆ, ತೋಷ ಕಡೆಯಾಗಿದೆ, ಈಶ ತಾಲ್ಕೆರೆಯ ಪುರವಾಸ ದಯ ಬಾರದೆ || ಕಲ್ಯಾಣದಣ್ಣ ||

Комментарии

Информация по комментариям в разработке