ಹಸಿದಾಗ ಅನ್ನ ದಣಿದಾಗ ನೀರು - HD ವಿಡಿಯೋ ಸಾಂಗ್ - ಶಿವರಾಜ್ ಕುಮಾರ್ - ಎಸ್.ಪಿ.ಬಿ - ಹಂಸಲೇಖ | Hasidaga Anna

Описание к видео ಹಸಿದಾಗ ಅನ್ನ ದಣಿದಾಗ ನೀರು - HD ವಿಡಿಯೋ ಸಾಂಗ್ - ಶಿವರಾಜ್ ಕುಮಾರ್ - ಎಸ್.ಪಿ.ಬಿ - ಹಂಸಲೇಖ | Hasidaga Anna

Song: Hasidaga Anna- HD Video
Kannada Movie:Thavarina Siri
Actor: Shivarajkumar, Daisy Bopanna
Music: Hamsalekha
Singer: SPB, Nanditha
Lyrics: Hamsalekha
Year : 2006

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Thavarina Siri – ತವರಿನ ಸಿರಿ 2006*SGV

Hasidaga Anna Song Lyrics In Kannada

ಗಂಡು : ಹೂಂ... ಹೂಂಹೂಂಹೂಂಹೂಂ ಹೂಂ... ಹೂಂಹೂಂಹೂಂಹೂಂ
ಕೋರಸ್ : ಓಓಓಓಓಓಓ ಓಓಓಓಓ
ಗಂಡು : ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ
ಮನಸಿದ್ದು ಪ್ರೀತಿ ಕೈ ಇದ್ದು ದಾನ ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ
ಭೂಮಿ ತಾಯಿ ತಂದ ಬೆವರಿನ ಸಿರಿ ಹಂಚಿಕೊಂಡು ತಿನ್ನದೇ ಇದ್ರೆ ಏನ್ ಚಂದವೋ
ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ
ಭೂಮಿ ತಾಯಿ ತಂದ ಬೆವರಿನ ಸಿರಿ ಹಂಚಿಕೊಂಡು ತಿನ್ನದೇ ಇದ್ರೆ ಏನ್ ಚಂದವೋ
ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ

ಕೋರಸ್ : ಓಓ.. ಓ...
ಗಂಡು : ಮೋಡ ಮುನಿದು ಚದುರಿದರೇ ಪೈರು ತೆನೆ ಇಲ್ಲಣ್ಣ
ಹೂವು ಮುನಿದು ಮುಚ್ಚಿದರೇ ಜೇನು ಗೂಡೇ ಇಲ್ಲಣ್ಣ
ತನ್ನೆಲ್ಲ ಕೆಚ್ಚಲು ಕರುವಿಗೆ ಅಂದರೆ ಹಸುವಿನ ಹಾಲೇ ನಮಗಿಲ್ಲ
ಹಸುವಿನ ಹಾಲೇ ನಮಗಿಲ್ಲ
ನೀಡೋ ಈ ನಿಯಮ ಪಾಲಿಸದಿದ್ದರೆ ಏನ್ ಚಂದವೋ ಏನ್ ಚಂದವೋ
ಶಿವನು ಕೊಟ್ಟ ಆಸ್ತಿ ಭೂಮಿಯಾ ಸಿರಿ ಅವನಾಸ್ತಿ ನನದೆನ್ನೋದು ಏನ್ ಚಂದವೋ
ಕೋರಸ್ : ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ

ಗಂಡು : ದೇವರಿಗೆ ಕಾಯಾಗಿ ಗಂಟಲಿಗೆ ನೀರಾಗಿ ಗುಡಿಸಲಿಗೆ ಸೂರಾಗಿ ಸೇತುವೆಗೆ ಹಾಸಾಗಿ
ಬದುಕೆಲ್ಲಾ ನೀಡುತ್ತಾ ಬಾನೆತ್ತರ ಬಾಳುತ್ತಾ ಇರಬೇಕು ತೆಂಗಿನ ಮರದಂತೆ
ಇರಬೇಕು ತೆಂಗಿನ ಮರದಂತೆ
ನರನಾಗಿ ಮರೆತು ಕೀಳಾಗಿ ಹೋದರೆ ಏನ್ ಚಂದವೋ ಏನ್ ಚಂದವೋ
ಕೋರಸ್ : ಮನಸಿದ್ದು ಪ್ರೀತಿ ಕೈ ಇದ್ದು ದಾನ ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ
ನಮ್ಮ ಅಣ್ಣನೇ ನಮ್ಮ ತವರಿನ ಸಿರಿ ಈ ದೈವ ಇಲ್ಲದ ಊರು ಏನ್ ಚಂದವೋ
ಗಂಡು : ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ

Комментарии

Информация по комментариям в разработке