ಸುತರೆದೆಯಾಳದಿ ಸ್ಪಂದನವೇಳಲಿ | ಗೀತಭಾರತಿ

Описание к видео ಸುತರೆದೆಯಾಳದಿ ಸ್ಪಂದನವೇಳಲಿ | ಗೀತಭಾರತಿ

ಸುತರೆದೆಯಾಳದಿ ಸ್ಪಂದನವೇಳಲಿ ಏಳಲಿ ಪ್ರತಿ ಭಾರತಪ್ರೇಮಿ
ಸೀಮಾ ವಲಯದಿ ರಕ್ಷಿತವಾಗಲಿ ಅಂಗುಲ ಅಂಗುಲವೀ ಭೂಮಿ || ಪ ||

ಸಹ್ಯಾದ್ರಿಯ ಗಿರಿ ಕಂದರ ಕಾನನ, ಹಿಮವತ್ಪರ್ವತದುನ್ನತ ಸ್ಥಾನ
ಗಂಗಾಭಗಿನಿಯ ಸಿಂಧೂ ಜಲಧಿಯ, ಸಂಗಮ ಹಿಂದು ಮಹೋದಧಿಗಾನ
ಹಾರೈಸಲಿ ಹರಸಲಿ ದಿಗ್ವಿಜಯಕೆ, ಜನಮನವಿಂದಾಗಲಿ ರಣಗಾಮಿ || 1 ||

ಬಾಹುದ್ವಯಕೇರಲಿ ಭೂಭಕ್ತಿಯ, ಚಿರಶಕ್ತಿಯ ನವ ಶರಸಂಚಾರ
ಕದನದಿ ಕೊಲೆಯಾಗಲಿ ಬಲಿಯಾಗಲಿ, ಆಗಲಿ ಅರಿವಂಶದ ಸಂಹಾರ
ವಾಯುವ್ಯದೊಳೀಶಾನ್ಯದೊಳೆಲ್ಲೆಡೆ ಮುನಿದೇಳಲಿ ಋಷಿ ಮುನಿಜನಭೂಮಿ || 2 ||

ಕೆಚ್ಚಿನ ಕಾಳ್ಗಿಚ್ಚಿನ, ಮೈಬೆವರಿನ, ಕೆನ್ನೆತ್ತರಿನಭಿಷೇಕದಿ ನೆನೆದು
ಉದ್ದಗಲಕು ಅಡಿಗಡಿಗೋರೋರ್ವರು, ರಣಭೈರವನವತಾರವ ತಳೆದು
ಏಳಲಿ, ಜನಶಕ್ತಿಯು ಮೇಲೇಳಲಿ, ಜೈಸುಗೆ ಈ ಮೃತ್ಯುಂಜಯ ಭೂಮಿ


Visit us at
►YOUTUBE:    / samvadk  
►INSTAGRAM : https://instagram.com/samvada_?igshid...
►TWITTER : https://twitter.com/samvada?s=09
►FACEBOOK :  / samvada  
►WEBSITE : https://samvada.org/

#geethabharathi
#geethaganga
#samvada

Комментарии

Информация по комментариям в разработке