ವೀಡಿಯೊ ಶಿರ್ಷಿಕೆ: ಅಟಲ್ ಪಿಂಚಣಿ ಯೋಜನೆ | Atal Pension Yojna | Kannada | HDFC Bank

Описание к видео ವೀಡಿಯೊ ಶಿರ್ಷಿಕೆ: ಅಟಲ್ ಪಿಂಚಣಿ ಯೋಜನೆ | Atal Pension Yojna | Kannada | HDFC Bank

ಅಟಲ್ ಪಿಂಚಣಿ ಯೋಜನೆ (APY) ಎಂಬುದು 2015-16ರಲ್ಲಿ ಭಾರತ ಸರ್ಕಾರವು ಪರಿಚಯಿಸಿದ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಇದು ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ವಿಸ್ತರಣೆಯಾಗಿದ್ದು, APY ಅಡಿಯಲ್ಲಿನ ಕೊಡುಗೆಗಳನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿರ್ವಹಿಸುತ್ತದೆ ಮತ್ತು ನಿಯಂತ್ರಿಸುತ್ತದೆ.
ಮುಖ್ಯವಾಗಿ APY ಅಸಂಘಟಿತ ವಲಯದಲ್ಲಿ ಇರುವರನ್ನು ಗುರಿಯಾಗಿಸುತ್ತದೆ, ಮತ್ತು ಇದರ ಉದ್ದೇಶ ಪಿಂಚಣಿ ಯೋಜನೆಯ ಅಡಿಯಲ್ಲಿ ಎಲ್ಲರನ್ನು ತರುವುದಾಗಿದೆ. ಎಲ್ಲಾ ನಾಗರಿಕರು ತಮ್ಮ ನಿವೃತ್ತಿಯ ನಂತರದ ವರ್ಷಗಳಲ್ಲಿ ಸ್ಥಿರವಾದ ಆದಾಯದ ಮೂಲವನ್ನು ಹೊಂದಲು ಇದು ಅನುವು ಮಾಡಿಕೊಡುತ್ತದೆ. ನಿವೃತ್ತಿಯ ಕಾರ್ಪಸ್ ರಚಿಸಲು ಈ ಯೋಜನೆಯು ಚಿಕ್ಕ ವಯಸ್ಸಿನಿಂದಲೇ ಉಳಿತಾಯವನ್ನು ಪ್ರೋತ್ಸಾಹಿಸುತ್ತದೆ, ಮತ್ತು APY ಅಡಿಯಲ್ಲಿ ನಿಗದಿತ ಕನಿಷ್ಠ ಮಾಸಿಕ ಪಿಂಚಣಿಯು ಜನರಿಗೆ ನಿವೃತ್ತಿಯಾದ ನಂತರ ಯಾವುದೇ ಹಣಕಾಸಿನ ಕಟ್ಟುಪಾಡುಗಳಿಗೆ ತಯಾರಾಗಲು ಸಹಾಯ ಮಾಡುತ್ತದೆ.
ಎಲ್ಲಾ ಬ್ಯಾಂಕ್ ಖಾತೆದಾರರಿಗೆ APY ಮುಕ್ತವಾಗಿದೆ. ಆಧಾರ್ ಕಾರ್ಡ್, ಮಾನ್ಯ ಮೊಬೈಲ್ ಸಂಖ್ಯೆ, ಆಧಾರ್-ಲಿಂಕ್ ಮಾಡಿದ ಬ್ಯಾಂಕ್ ಖಾತೆ ಹೊಂದಿರುವ ಮತ್ತು 18-40 ವರ್ಷ ವಯಸ್ಸಿನ ಭಾರತದ ಎಲ್ಲಾ ನಾಗರಿಕರು ಪಿಂಚಣಿ ಯೋಜನೆಯ ಲಾಭ ಪಡೆಯಬಹುದು.
ನಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ನೀವು ಫಾಲೋ ಮಾಡಬಹುದು:
ಟ್ವಿಟರ್ -   / hdfcsec  
ಫೇಸ್ಬುಕ್ -   / hdfcsecurities  
ಲಿಂಕ್ಡ್‌ಇನ್ -   / hdfc-securities  
ಇನ್ಸ್ಟಾಗ್ರಾಮ್ -   / hdfcsec  
ಷೇರುಗಳು, ವ್ಯವಹಾರ, ವ್ಯಾಪಾರ, ಐಪಿಒ ಮತ್ತು ಇನ್ನೂ ಹೆಚ್ಚಿನವುಗಳ ಇತ್ತೀಚಿನ ಅಪ್ಡೇಟ್ ಗಳಿಗಾಗಿ ಈಗ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಚಾನಲ್‌ಗೆ ಚಂದಾದಾರರಾಗಿ.
#HDFCSecurities

Комментарии

Информация по комментариям в разработке