Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть ಜವಾಹರ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆ JNVST 2021

  • JNV Dharwad
  • 2020-12-06
  • 483
ಜವಾಹರ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆ JNVST 2021
  • ok logo

Скачать ಜವಾಹರ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆ JNVST 2021 бесплатно в качестве 4к (2к / 1080p)

У нас вы можете скачать бесплатно ಜವಾಹರ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆ JNVST 2021 или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку ಜವಾಹರ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆ JNVST 2021 бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео ಜವಾಹರ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆ JNVST 2021

ಪತ್ರಿಕಾ ಪ್ರಕಟಣೆ
ಧಾರವಾಡ ಜಿಲ್ಲೆಯಲ್ಲಿರುವ ಕೇಂದ್ರ ಸರ್ಕಾರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ಜವಾಹರ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆಗೆ ಸಂಬಂಧ ಪಟ್ಟ ವಿವರಣೆ.
ದೇಶದಾದ್ಯಂತ ೨೭ ರಾಜ್ಯಗಳು ಹಾಗೂ ೮ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜವಾಹರ ನವೋದಯ ವಿದ್ಯಾಲಯಗಳು ಭಾರತ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದ್ದು, ೬ನೇ ತರಗತಿಯಿಂದ ೧೨ನೇ ತರಗತಿಯ ವರೆಗಿನ ಸಹಶಿಕ್ಷಣವನ್ನು ಇಲ್ಲಿ ಪೂರೈಸಬಹುದಾಗಿದೆ. ಜವಾಹರ ನವೋದಯ ವಿದ್ಯಾಲಯಗಳು ವಿದ್ಯಾರ್ಥಿಗಳ ಶಿಕ್ಷಣ ಕ್ಷೇತ್ರದ ಉನ್ನತ ಸಾಧನೆಗೆ ಪ್ರೇರಕವಾದ ಘನೋದ್ದೇಶಗಳನ್ನು ಹೊಂದಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಅತ್ಯಾಧುನಿಕ ಶಿಕ್ಷಣ ನೀಡುವುದು ಮೂರು ಭಾಷೆಯಲ್ಲಿ ಓದು ಬರಹ ಕಲಿಯಲು ಅವಕಾಶ ನೀಡುವುದು, ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಧಿಸುವ ವಿಶೇಷ ವಲಸೆ ನೀತಿ ಮುಂತಾದವುಗಳು, ವಿದ್ಯಾರ್ಥಿಯ ಭವ್ಯ ಭವಿಷ್ಯವನ್ನು ಭದ್ರವಾಗಿರಿಸಲು ಸಹಕಾರಿಯಾಗಿವೆ. ಈ ವಿದ್ಯಾಲಯಗಳು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE)ಯ ಪಠ್ಯಕ್ರಮಕ್ಕೆ ಒಳಪಟ್ಟಿದ್ದು, ಊಟ, ವಸತಿ, ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ಇಲ್ಲಿ ಉಚಿತವಾಗಿ ನೀಡಲಾಗುವುದು. ಈ ವಿದ್ಯಾಲಗಳ ೬ನೇ ತರಗತಿಯ ೮೦ ವಿದ್ಯಾರ್ಥಿಗಳ ಆಯ್ಕೆಯ ಪ್ರಕ್ರಿಯೆ ಪರೀಕ್ಷೆಯ ಮೂಲಕ ನಡೆಸಲಾಗುವುದು.
ಧಾರವಾಡ ಜಿಲ್ಲೆಯಲ್ಲಿರುವ ಜವಾಹರ ನವೋದಯ ವಿದ್ಯಾಲಯವು ಧಾರವಾಡದಿಂದ ೭ ಕಿ.ಮೀ. ದೂರದ ಕ್ಯಾರಕೊಪ್ಪ ಗ್ರಾಮದ ಸಮೀಪವಿದ್ದು, ಸುಸಜ್ಜಿತವಾದ ಕಟ್ಟಡ, ಗ್ರಂಥಾಲಯ, ಪ್ರಯೋಗಾಲಯ, ಕಲಿಕೆಯ ಪೂರಕ ಸಾಧನಗಳು, ಕ್ರೀಡಾಂಗಣ ಹಾಗೂ ಸುಂದರವಾದ ವಾತಾವರಣವನ್ನು ಹೊಂದಿದ್ದು ಗುರುಕುಲ ಶಿಕ್ಷಣ ಪದ್ದತಿಯನ್ನು ಮೆಲಕು ಹಾಕುವಂತಿದೆ.
ಹಿಂದಿನ ವರ್ಷದಲ್ಲಿ (೨೦೧೯-೨೦) ೧೦ ಮತ್ತು ೧೨ ನೇ ತರಗತಿಯ ವಿದ್ಯಾರ್ಥಿಗಳು ಸಿ.ಬಿ.ಎಸ್.ಇ. ಪರೀಕ್ಷೆಯಲ್ಲಿ ನೂರು ಪ್ರತಿಶತ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇಲ್ಲಿ ಕ್ರೀಡೆ, ಕಲೆ, ಸಂಗೀತ ಹಾಗೂ ಕಂಪ್ಯೂಟರ ಶಿಕ್ಷಣ ತರಬೇತಿಯನ್ನು ಹೊಂದುತ್ತಾರೆ. ಸ್ಕೂಲ್ ಗೇಮ್ಸ್ ಫೆಡರೇಶನ್ ಒಫ಼್ ಇಂಡಿಯಾ (SGFI) ನಲ್ಲಿ ಹನ್ನೊಂದು ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುವುದು ಒಂದು ಉತ್ತಮ ಸಾಧನೆಯಾಗಿದೆ.
೨೦೨೧ರ ಜ.ನ.ವಿ ಪ್ರವೇಶ ಪರೀಕ್ಷೆಗೆ ಸರಳವಾದ ಗಣಕೀಕೃತ ಅರ್ಜಿಯನ್ನು ಸಲ್ಲಿಸಬೇಕು. www.navodaya.gov.in ಮೂಲಕ ಯಾವುದೇ ಶುಲ್ಕವಿಲ್ಲದೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಹ ವಿದ್ಯಾರ್ಥಿಗಳು ೫ ನೇ ತರಗತಿಯಲ್ಲಿ ಓದುತ್ತಿದ್ದು, ಶಾಲೆಯ ಮುಖ್ಯೋಪಾದ್ಯರಿಂದ ಪಡೆದ ಪ್ರಮಾಣ ಪತ್ರವನ್ನು ಅಭ್ಯರ್ಥಿಯ ಹಾಗೂ ಪಾಲಕ/ಪೋಷಕರ ಸಹಿ ಮತ್ತು ಪೋಟೊದೊಂದಿಗೆ ಅಪ್ಲೋಡ್ ಮಾಡಬೇಕು.
ಗಣಕೀಕೃತ ಅರ್ಜಿ ತುಂಬುವ ಕೊನೆಯ ದಿನಾಂಕ ೧೫-೧೨-೨೦೨೦
ಜವಾಹರ ನವೋದಯ ವಿದ್ಯಾಲಯ ಧಾರವಾಡ
ವಿಶೇಷ ಲಕ್ಷಣಗಳು
• 6 ನೇ ತರಗತಿ ಇಂದ 12ನೇ ತರಗತಿಯವರೆಗೆ ಉಚಿತ ವಸತಿ, ಊಟ ಮತ್ತು ಶಿಕ್ಷಣ.
• 25% ನಗರ ವಿದ್ಯಾರ್ಥಿಗಳಿಗೆ ಮತ್ತು 75% ಗ್ರಾಮೀಣ ವಿದ್ಯಾರ್ಥಿ ಗಾಳಿಗೆ ಆದ್ಯತೆ.
SC, ST ವಿದ್ಯಾರ್ಥಿ ಗಳಿಗೆ 22.5%, OBC ವಿದ್ಯಾರ್ಥಿ ಗಳಿಗೆ 27%, ವಿಭಿನ್ನ ಶಕ್ತ ವಿದ್ಯಾರ್ಥಿ ಗಳಿಗೆ 3%.
ಇತರೆ ವಿದ್ಯಾರ್ಥಿಗಳಿಗೆ ಉಳಿದ 47.5% ರಂತೆ ದಾಖಲಾತಿ ಮಾಡಿಕೊಳ್ಳಲಾಗುತ್ತದೆ.
• ಸಹ ಶಿಕ್ಷಣ ನೀತಿ- ಹೆಣ್ಣು ಮತ್ತು ಗಂಡು ಮಕ್ಕಳಿಗೆ ಒಂದೇ ವರ್ಗದಲ್ಲಿ ಪಾಠ ಹೇಳುವುದು.
• ಪ್ರತಿ ವರ್ಗದಲ್ಲಿ ಅಂತರ್ಜಾಲ ವ್ಯವಸ್ಥೆ.
• ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಧಿಸುವ ವಿಶೇಷ ವಲಸೆ ನೀತಿ.
• ಸುಸಜ್ಜಿತ 40 laptop ಮತ್ತು ಸ್ಮಾರ್ಟ್ ಬೋರ್ಡ್ ಉಳ್ಳ ಸ್ಯಾಮ್ಸಂಗ್ ಸ್ಮಾರ್ಟ್ ಕ್ಲಾಸ್ ಕೊಠಡಿ,
• ಸುಸಜ್ಜಿತ ಕಂಪ್ಯೂಟರ್ ತರಬೇತಿ ಕೊಠಡಿ ಮತ್ತು ತರಬೇತಿ ಶಿಕ್ಷಕರು.
• ಸುಸಜ್ಜಿತ ಪ್ರತ್ಯೇಕ ರಸಾಯನಶಾಸ್ತ್ರ ಜೀವಶಾಸ್ತ್ರ, ಭೌತಶಾಸ್ತ್ರ ಮತ್ತು ಕಿರಿಯ ವಿದ್ಯಾರ್ಥಿಗಳ ವಿಜ್ಞಾನ ಪ್ರಯೋಗಾಲಯ ಗಳು.
• ಗಣಿತ ವಿಷಯಕ್ಕೆ ಪರಿಸರದಲ್ಲಿ ಮಾಡಿರುವ ಗಣಿತ ಮಾದರಿಗಳ ತೋಟ ಮತ್ತು ಪ್ರಯೋಗಾಲಯ.
• ಹತ್ತು ಸಾವಿರಕ್ಕೂ ಮೇಲ್ಪಟ್ಟು ಪುಸ್ತಕ ಗಳಿರುವ ಸುಸಜ್ಜಿತ ಗ್ರಂಥಾಲಯ.
• ಸ್ಕೌಟ್ಸ್ ಮತ್ತು ಗೈಡ್ಸ್, ಎನ್ ಸಿ ಸಿ, ಎನ್ ಎಸ್ ಎಸ್ ಮತ್ತು ಎಸ್ ಪಿ ಸಿ ತರಬೇತಿಗಳು.
• CBSE ಶಿಕ್ಷಣ ಪದ್ಧತಿ, ತ್ರಿಭಾಷಾ ಸೂತ್ರದ ಅನುಸಾರ ಪಾಠ ಪ್ರವಚನ. ಕನ್ನಡ, ಹಿಂದಿ ಮತ್ತು ಆಂಗ್ಲ ಬಾಷೆಗಳಲ್ಲಿ ಪ್ರಾವೀಣ್ಯತೆ ಕೊಡುವುದು.
• ಕಲೆ, ಸಂಗೀತ ಮತ್ತು ಇತರೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ.
• ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ತಯಾರಿ ಮಾಡುವುದು.
• ಒಳ್ಳೆಯ ಅನುಭವಿ ಮತ್ತು ಪರಿಣಿತ ಶಿಕ್ಷಕರಿಂದ ಪಾಠ , ಪ್ರವಚನ.
• ಪ್ರತ್ಯೇಕ ಅಡುಗೆಮನೆ ಮೇಲ್ವಿಚಾರಕ, ಸ್ವಚ್ಛ ಮತ್ತು ಆರೋಗ್ಯಕರ ಉಪಹಾರ ಗೃಹ.
• ವಿಶಾಲವಾದ 400ಮೀ. ಕ್ರೀಡಾಂಗಣ ವಿದ್ದು, ಎಲ್ಲ ರೀತಿಯ ಆಟೋಟ ಗಳಿಗೆ ಪ್ರಾಶಸ್ತ್ಯ.
• ಶಿಕ್ಷಕರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆ ಯಲ್ಲಿ ಹೆಣ್ಣು ಮಕ್ಕಳಿಗೆ ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ವಸತಿ ನಿಲಯಗಳು.
• ಈ ಶಾಲೆಯಿಂದ ವಿದ್ಯೆ ಪಡೆದ ಅನೇಕ ವಿದ್ಯಾರ್ಥಿಗಳು ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗ ಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
• ಈ ವಿದ್ಯಾಲಯದಲ್ಲಿ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಲಾಗುತ್ತದೆ.

Комментарии

Информация по комментариям в разработке

Похожие видео

  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей [email protected]