ನಿಮ್ಮ ಕೆಲಸಕ್ಕೆ ತಕ್ಕ ಸಂಬಳ ಸಿಗುತ್ತಿದೆಯಾ ? ಕನಿಷ್ಠ ವೇತನ ಕಾಯ್ದೆ-1948||ಸಮಗ್ರ ಮಾಹಿತಿ||NR KUMAR SWAMY

Описание к видео ನಿಮ್ಮ ಕೆಲಸಕ್ಕೆ ತಕ್ಕ ಸಂಬಳ ಸಿಗುತ್ತಿದೆಯಾ ? ಕನಿಷ್ಠ ವೇತನ ಕಾಯ್ದೆ-1948||ಸಮಗ್ರ ಮಾಹಿತಿ||NR KUMAR SWAMY

ಕೇಂದ್ರ ವಲಯದಲ್ಲಿ, ಕನಿಷ್ಠ ವೇತನ ದರ ಅಧಿನಿಯಮ 1948 ರ ಅಡಿಯಲ್ಲಿ, 2010 ನೇ ಇಸ್ವಿಯ ಅಕ್ಟೋಬರ್ 1 ರಂದು, ಕನಿಷ್ಠ ವೇತನ ದರವನ್ನು ಪರಿಷ್ಕರಿಸಲಾಯಿತು. ಆಯಾ ರಾಜ್ಯ ಸರಕಾರಗಳು ರಾಜ್ಯ ವಲಯದಲ್ಲಿ ಕಾಲ ಕಾಲಕ್ಕೆ ಕನಿಷ್ಠ ವೇತನ ದರವನ್ನು ಪರಿಷ್ಕರಿಸುತ್ತವೆ. ಕೃಷಿಯನ್ನೂ ಒಳಗೊಂಡಂತೆ ಅನುಸೂಚಿತ ಉದ್ಯೋಗಗಳಿಗೆ ನಿಗದಿ ಪಡಿಸಿದ ಕನಿಷ್ಠ ವೇತನ ದರವು ಸಂಘಟಿತ ಹಾಗೂ ಅಸಂಘಟಿತ ವಲಯಗಳ ಕ್ಷೇತ್ರಕ್ಕೂ ಅನ್ವಯವಾಗುತ್ತದೆ.

ಈ ಕಾಯಿದೆಯನ್ನು ಜಾರಿಗೆ ತರಲು ಎರಡು ಮಟ್ಟದಲ್ಲಿ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ವಲಯದಲ್ಲಿ ಸೆಂಟ್ರಲ್ ಇಂಡಸ್ಟ್ರಿಯಲ್ ರಿಲೇಶನ್ ಮೆಶಿನರಿ (CIRM) ಎಂದು ಹೆಸರುವಾಸಿಯಾದ ಪ್ರಧಾನ ಕಾರ್ಮಿಕ ಆಯುಕ್ತರ ಕಛೇರಿಯ (ಕೇಂದ್ರ) ಅಧೀಕ್ಷಕರ ಮೂಲಕ ಹಾಗೂ ರಾಜ್ಯದಲ್ಲಿ ರಾಜ್ಯ ಮಟ್ಟದಲ್ಲಿ ಅದಕ್ಕಾಗಿ ಮೀಸಲಾದ ವ್ಯವಸ್ಥೆಯ ಮೂಲಕ ಕಾಯಿದೆಯನ್ನು ಕಾರ್ಯ ರೂಪಕ್ಕೆ ತರುವುದನ್ನು ದೃಢಪಡಿಸಿಕೊಳ್ಳಲಾಗುತ್ತದೆ. ಇವುಗಳು ಕಾಲಕಾಲಕ್ಕೆ ತಪಾಸಣೆ ನಡೆಸುವುದರ ಮೂಲಕ ಕನಿಷ್ಠ ವೇತನ ದರ ಜಾರಿಯಲ್ಲಿದೆಯೇ, ಇಲ್ಲವೇ; ಇಲ್ಲವಾದರೆ ಮಾಲೀಕರು/ಒಡೆಯರು ಬಾಕಿ ಇರುವ ವೇತನವನ್ನು ಅರ್ಹ ಕಾರ್ಮಿಕರಿಗೆ ಸಂದಾಯ ಮಾಡುವಂತೆ ನಿರ್ದೇಶಿಸುತ್ತಾರೆ. ಒಂದು ವೇಳೆ ಈ ಕಾಯಿದೆಯನ್ನು ಪಾಲಿಸದಿದ್ದರೆ, ಕಾಯಿದೆಯ 22 ನೇ ಪರಿಚ್ಛೇದದ ಪ್ರಕಾರ ತಪ್ಪು ಮಾಡುತ್ತಿರುವ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ.

Комментарии

Информация по комментариям в разработке