Tabarana Kathe `ತಬರನ ಕಥೆ’

Описание к видео Tabarana Kathe `ತಬರನ ಕಥೆ’

ಕುವೆಂಪು ಮತ್ತು ಹೇಮವತಿ ಅವರ ಮಗನಾಗಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ೧೯೩೮ರಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಬಿ.ಎ. ಆನರ್ಸ್ ಮತ್ತು ಎಂ.ಎ. ಪದವಿಗಳನ್ನು ಪಡೆದರು. ನಂತರ ಬೇರಾವ ಉದ್ಯೋಗಕ್ಕೂ ಹೋಗದೆ, ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಕೃಷಿ ತೋಟಗಾರಿಕೆಯಲ್ಲಿ ನಿರತರಾದರು. ಮುಖ್ಯವಾಗಿ ಸಣ್ಣಕಥೆ ಮತ್ತು ಕಾದಂಬರಿಗಳನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮವಾಗಿ ರೂಪಿಸಿಕೊಂಡ ಇವರು ಹಲವು ವೈಚಾರಿಕ ಮತ್ತು ವೈಜ್ಞಾನಿಕ ಬರಹಗಳನ್ನು ಕೂಡ ಪ್ರಕಟಿಸಿದ್ದಾರೆ. ಇಲ್ಲಿ ಅವರ ಪ್ರಸಿದ್ಧ ಸಣ್ಣಕಥೆ `ತಬರನ ಕಥೆ’ ಯನ್ನು ಆಯ್ದುಕೊಳ್ಳಲಾಗಿದೆ. ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
ನಿಮ್ಮ ಪ್ರಾಮಾಣಿಕ ಅಭಿಪ್ರಾಯಗಳಿಗೆ ಸದಾ ಸ್ವಾಗತ. ನಮಸ್ಕಾರ

Комментарии

Информация по комментариям в разработке