Tulunad || Mayoda Parel || ಮಾಯೋದ ಪರೆಲ್ || koragajja Tulu devotional song || yashavanth | gunaprasad

Описание к видео Tulunad || Mayoda Parel || ಮಾಯೋದ ಪರೆಲ್ || koragajja Tulu devotional song || yashavanth | gunaprasad

Koragajja Song "ಮಾಯೋದ ಪರೆಲ್ ಮಣ್ಣಾಪುದ ನಿರೆಲ್ " Mayoda Parel Mannapuda Nirel
Tulu devotional songs
ನಿರ್ಮಾಣ - ಸವಿತಾ. ಪಂಜ
ಸಾಹಿತ್ಯ - ಯಶವಂತ.ಕಲಾಯಿ
ಗಾಯನ -ಗುಣಪ್ರಸಾದ್.ಕುಕ್ಕಟೆ ಮತ್ತು ಪೂಜಾ.ಸನಿಲ್
ಪ್ರಚಾರ ಕಲೆ ಮತ್ತು ಸಂಕಲನ - ಯತಿನ್, ಆರಾಧ್ಯ ಫೋಟೋ ಸ್ಟುಡಿಯೋ ನಿಂತಿಕಲ್.
Original Song : Jhanak Jhanak Gejjeda.
Song link :    • Jhanak Jhanak || Goddess Durgama || T...  
Channel name :Universal zhone
ಸರಿಸುಮಾರು 381 ವರ್ಷಗಳ ಹಿಂದೆ ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಮಣ್ಣಾಪು ಎಂಬಲ್ಲಿ ಶ್ರೀ ಲಕ್ಷ್ಮೀ ನಾರಾಯಣ ದೇವರನ್ನು ಆರಾಧಿಸಿಕೊಂಡು ಬರುತ್ತಿದ್ದ ತಂತ್ರಿತ್ತಾಯರ ಮನತನ ವಾಸವಾಗಿತ್ತು.
ಪ್ರಸ್ತುತ ಶಿವಪ್ರಸಾದ್ ಕಲ್ಲೂರಾಯರ ಹಿರಿಯರ ಈ ಮನೆತನಕ್ಕೆ ಪ್ರಸ್ತುತ ಶ್ರೀ ಮಣ್ಣಾಪು ಕ್ಷೇತ್ರದ ಪ್ರಧಾನ ಅರ್ಚಕರಾದ ಕುಂಡ ಮೊಗೇರ ಇವರ ಐದು ತಲೆಮಾರಿನ ಹಿಂದಿನ ಮನೆತನದ ಹಿರಿಯ ವ್ಯಕ್ತಿ ಐತ್ತ ಮೊಗೇರ ಕೃಷಿ ಕೆಲಸಗಾರರಾಗಿದ್ದರು. ವ್ಯವಸಾಯದ 30ಕ್ಕೂ ಹೆಚ್ಚು ದನಕರುಗಳನ್ನು ತಂತ್ರಿತ್ತಾಯರ ಮನೆತನದವರು ಸಾಕುತ್ತಿದ್ದರಿಂದ, ಅದರ ನಿರ್ವಹಣೆಯನ್ನು ಐತ ಮೊಗೇರರವರಿಗೆ ನೀಡಲಾಗಿತ್ತು. ಹಾಗೆ ಕೆಲಸ ಮಾಡುತ್ತಾ ದಿನಕಳೆದಂತೆ ಕೆಲವು ದನಕರುಗಳು ಕಣ್ಮರೆಯಾಗುತ್ತಾ ಬರುತಿದ್ದವು. ದನಕರುಗಳು ಕಣ್ಮರೆಯಾಗುತ್ತಿದ್ದ ಕಾರಣವನ್ನು ತಿಳಿಯಲಾರದೇ ಮನೆಯ ಯಜಮಾನರು ಇವರ ಮೇಲೆ ಒತ್ತಡ ಹಾಕುತ್ತಿದ್ದರಿಂದ ಚಿಂತೆಗೊಳಗಾಗಿ ತನಗೆ ಬಂದ ಕಷ್ಟ ಪರಿಹಾರಕ್ಕಾಗಿ ಕೊರಗಜ್ಜನ ಪ್ರಾರ್ಥನೆಯೊಂದೇ ದಾರಿಯೆಂದು ತಿಳಿದು, ಐತ್ತ ಮೊಗೇರರವರು ಮರುದಿನ ಬೆಳಿಗ್ಗೆ ಸ್ವಾಮಿ ಅಜ್ಜ, ದಿನದಿಂದ ದಿನಕ್ಕೆ ದನಕರುಗಳು ಕಣ್ಮರೆಯಾಗುತ್ತಿದ್ದು, ಬೆಳಗ್ಗೆ ಮೇಯಲು ಹಟ್ಟಿಯಿಂದ ಹೋದ ಎಲ್ಲಾ ದನಕರುಗಳು ಯಾವುದೇ ತೊಂದರೆಯಿಲ್ಲದೇ ವಾಪಾಸಾದರೆ, ನಾನು ನಿನ್ನನ್ನು ಕಲ್ಲು ಪ್ರತಿಷ್ಠಾಪನೆ ಮಾಡಿ ನಂಬುತ್ತೇನೆ.” ಎಂದು ಪ್ರಾರ್ಥಿಸಿಕೊಂಡರು. ಪ್ರಾರ್ಥನೆ ಪವಾಡ ಸದೃಶವಾಗಿ ಮಾರ್ಪಾಡುಗೊಂಡು ಆ ದಿನದಿಂದಲೇ ಬೆಳಗ್ಗೆ ಬಿಟ್ಟ ಎಲ್ಲಾ ದನಕರುಗಳು ವಾಪಾಸಾಗುತ್ತಿದ್ದವು. ಅದನ್ನು ಕಂಡು ತಂತ್ರಿತ್ತಾಯ ಮನೆತನದ ಹಿರಿಯರು ಎಲ್ಲಾ ದನಗಳು ವಾಪಾಸಾಗುತ್ತಿದೆ. ಈಗ ಮೊದಲಿನಂತಿಲ್ಲ, ಏನು ಕಾರಣ ಎಂದಾಗ... ತಾನು ಕೊರಗಜ್ಜ ದೈವವನ್ನು ಪ್ರಾರ್ಥಿಸಿಕೊಂಡ ವಿಚಾರ ತಿಳಿಸಿದಾಗ ಸಂತೋಷದಿಂದ, ನೀನು ನಿನ್ನ ಕೈಯಾರೆ ಶಿಲಾ ಪ್ರತಿಷ್ಠೆ ಮಾಡಲು ಹೇಳುತ್ತಾರೆ. ಮರುದಿನವೇ ತನ್ನ ಕೋರಿಕೆಯಂತೆ ತಂತ್ರಿತ್ತಾಯರ ಮನೆತನದ ಹಿರಿಯರ ಸಮ್ಮುಖದಲ್ಲಿ ಕಲ್ಲನ್ನು ಪ್ರತಿಷ್ಠೆ ಮಾಡುತ್ತಾರೆ. ಆ ವ್ಯಕ್ತಿಯು ದೈವಾದೀನರಾದ ನಂತರ ದೈವ ಚಾಕರಿಯ ಎಲ್ಲಾ ಜವಾಬ್ದಾರಿಗಳು ಮತ್ತು ವ್ಯವಸಾಯದ ಜವಾಬ್ದಾರಿಗಳನ್ನು ಆತನ ಮಗನು ವಹಿಸಿಕೊಂಡನು. ಈತನ ಮಕ್ಕಳು ದೊಡ್ಡವರಾಗುತ್ತಿದ್ದಂತೆ, ವಾಸ ಮಾಡಲು ಮೊದಲು ಮೀಸಲಿಟ್ಟಿದ್ದ ಜಾಗವು ಸಾಕಾಗುವುದಿಲ್ಲ. ಈ ಬಗ್ಗೆ ಅವರಲ್ಲಿ ಪ್ರಸ್ತಾಪಿಸಿದಾಗ, ವಾಸ ಸ್ಥಳದಿಂದ ಸ್ವಲ್ಪ ದೂರದಲ್ಲಿ ವಾಸ ಮಾಡಲು ಹೇಳುತ್ತಾರೆ ಈ ವಿಚಾರವಾಗಿ ತಂತ್ರಿಗಳ ಮನೆತನದವರು ಆ ಕುಟುಂಬದ ಹಿರಿಯರನ್ನು ಕರೆದು “ನಿನ್ನ ಕುಟುಂಬದ ಎಲ್ಲರೂ ನಾಳೆ ಬರಬೇಕೆಂದಾಗ", ಎಲ್ಲರೂ ಅಲ್ಲಿ ಸೇರುತ್ತಾರೆ. ಆ ಕಾಲದಲ್ಲಿ ತಂತ್ರಿಯವರ ಮನೆತನದವರು ಪರಿವಾರ ದೈವಗಳನ್ನು ಪೂಜಿಸುತ್ತಿದ್ದರು. ಮನೆತನದ ಹಿರಿಯರ ಹೇಳಿಕೆಯಂತೆ, ತಮ್ಮ ಕುಟುಂಬವು ಮೂಲ ಮನೆತನದ ವಾಸಸ್ಥಳದಿಂದ ಹೊರಡುವಾಗ, ಈ ಕುಟುಂಬದ ಹಿರಿಯನಲ್ಲಿ ಪರಿವಾರ ದೈವಗಳಾದ ಧರ್ಮದೈವ, ಮಂತ್ರ ಗುಳಿಗ, ಕಲ್ಲುರ್ಟಿ ದೈವದ ಭಂಡಾರಗಳನ್ನು ಈತನಿಗೆ ಒಪ್ಪಿಸಿ, ನೀನೇ ಆ ಪ್ರದೇಶದಲ್ಲಿ ಈ ದೈವಗಳನ್ನು ಸ್ಥಾಪಿಸು ಎಂದು ಆಶಿರ್ವಾದ ನೀಡಿದ ನಂತರ ಈ ಪ್ರದೇಶಕ್ಕೆ ಬಂದು ಸುಮಾರು 20 ಮನೆಗಳನ್ನು ನಿರ್ಮಿಸಿದರು.ನಂತರ ಆ ಕುಟುಂಬಗಳು ಸೇರಿಕೊಂಡು ಧರ್ಮದೈವ, ಮಂತ್ರಗುಳಿಗ, ಕಲ್ಲುರ್ಟಿ ದೈವಗಳಿಗೆ ಗುಡಿಯನ್ನು ನಿರ್ಮಿಸಿದರು. ಒಕ್ಕಲು ಬಂದ ಸಮಯದಲ್ಲಿ ಐತ್ತ ಮೊಗೇರನು ಕೊರಗಜ್ಜನನ್ನು ಕಲ್ಲು ಪ್ರತಿಷ್ಠಾಪನೆ ಮಾಡಿದ್ದ ಮೂಲಸ್ಥಾನವು ಮುಳ್ಳು ಆವೃತವಾಗಿ ಕೊರಗಜ್ಜನ ಮೂಲಕಲ್ಲನ್ನು ಗುರುತಿಸಲಾಗದೇ ಆ ಶಿಲೆಯ ಪರ್ಯಾಯವಾಗಿ ಧರ್ಮದೈವದ ಗುಡಿಯ ಹಿಂಭಾಗದಲ್ಲಿ ಹೊಸ ಕಟ್ಟೆಯನ್ನು, ಹೊಸ ಶಿಲಾಕಲ್ಲನ್ನು ಹಾಕಿ ಕೊರಗಜ್ಜನನ್ನು ಸ್ಥಾಪಿಸಿದರು. ಈ ಕಟ್ಟೆಯನ್ನು ಸ್ಥಾಪಿಸಿ ಈಗ 31 ವರ್ಷಗಳಾಗಿದ್ದು, ಆನಂತರ ಇಲ್ಲಿ ಸಂಕ್ರಾಂತಿ ಅಗೇಲು ಸೇವೆ ನಡೆಯುತ್ತಾ ಬಂದಿದೆ. 2004-05 ರಿಂದ ದೈವಕ್ಕೆ ನೇಮೋತ್ಸವ ಕೊಡಲು ಆರಂಬಿಸಿದ್ದು, ಕಳೆದ ಎರಡು ವರ್ಷದ ಹಿಂದೆ ಶ್ರೀ ದೈವದ ನೇಮೋತ್ಸವ ಸಂದರ್ಭದಲ್ಲಿ, ದೈವದ ನುಡಿಯಲ್ಲಿ ಪ್ರಶ್ನಾಚಿಂತನೆ ನಡೆಸಬೇಕೆಂದು ಕಂಡುಬಂದಿತ್ತು. ಕೇರಳದ ಜ್ಯೋತಿಷ್ಯರಾದ ಶ್ರೀ ಜಯಚಂದ್ರನ್ ಇವರ ನೇತೃತ್ವದಲ್ಲಿ, ಅಷ್ಟಮಂಗಳ ಪ್ರಶ್ನಾ ಚಿಂತನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕೊರಗಜ್ಜ ದೈವದ ಕಟ್ಟೆಯು ವಾಸ್ತು ಪ್ರಕಾರವಾಗಿಲ್ಲ ಮತ್ತು ಕೊರಗಜ್ಜ ದೈವದ ಕಟ್ಟೆಯು ಇಲ್ಲಿ ಇದ್ದರು ಮೂಲ ಶಿಲಾಕಲ್ಲು 500 ಮೀಟರ್ ಬನಪ್ರದೇಶದಲ್ಲಿ ಇದೆಯೆಂದು ಕಂಡುಬಂದಿದ್ದು ಇದನ್ನು ಆ ಪ್ರದೇಶದಿಂದ ತಂದು ಈಗಿನ ಕಟ್ಟೆ ಹಾಗೂ ಶಿಲಾಕಲ್ಲಿಗೆ ಚೈತನ್ಯ ಇಲ್ಲದ ಕಾರಣ ಹೊಸ ಕಟ್ಟೆಯನ್ನು ವಾಸ್ತು ಶಿಲ್ಪಿಗಳ ಮಾರ್ಗದರ್ಶನದಲ್ಲಿ ನಿರ್ಮಾಣ ಮಾಡಬೇಕೆಂದು ತಿಳಿದು ಬಂದಿದ್ದು, ಈ ಕಟ್ಟೆಗೆ cement ಬಳಸದೇ ಕೆಂಪು ಕಲ್ಲು ಮತ್ತು ಲಾವಾ ಮರದ ತೊಗಟೆ ರಸ ಮಿಶ್ರಿತ ಮಣ್ಣು ಹಾಗೂ ಬೆಲ್ಲ ಸೇರಿಸಿ ಕಟ್ಟೆ ನಿರ್ಮಾಣವಾಗಬೇಕೆಂದು ತಿಳಿದುಬಂದಿರುತ್ತದೆ. ದೂರದಲ್ಲಿರುವ ಮೂಲಶಿಲೆಯನ್ನು ಕಲ್ಲೂರಾಯ ಮನೆತನದವರಲ್ಲಿ ಅನುಮತಿ ಪಡೆದು ನೇಮೋತ್ಸವದ ಮೂಲಕವೇ ಶ್ರೀ ಕೊರಗಜ್ಜ ದೈವದ ಮೂಲಶಿಲೆ ಕಲ್ಲು ಹಾಗೂ ಒಂದು ಹಿಡಿ ಮಣ್ಣನ್ನು ಪ್ರಸ್ತುತ ಮಣ್ಣಾಮ ಕುಟುಂಬದ ಹಿರಿಯವರಾದ ಶ್ರೀ ಕುಂಡ ಮೊಗೇರರವರಿಗೆ ಒಪ್ಪಿಸಿ ಅಲ್ಲಿಂದ ಜೀರ್ಣೋದ್ಧಾರಗೊಂಡ ಕಟ್ಟೆಯಲ್ಲಿ ಮೂಲಶಿಲಾಕಲ್ಲನ್ನು ಪ್ರತಿಷ್ಠಾಪಿಸಲಾಯಿತು.
#korgajja #koragajjasongs#koragajjastatus #koragajjakshetra #koragajjatempleinmanglore #swami#swamikoragajjakuttar #swamikoragajja#saarlapattadajja#maayakare #koragajjanamahime#koragajjasongs#tulunaadadaivaradhane #ajjanamaaye #ajjanasugipu#yelukoppadamaikare #muttaledaisira #mayodabolpu
   • ಜೋಡಿ ಕಲ್ಲುರ್ಟಿ ಕೋಲ ಕುಲ್ಕುಂದ, ಕಡಬ  jod...      • Видео      • Navarathri lion folk dance      • Видео      • sri hosamma daiva pallathadka kola pu...      • ಜೋಡಿ ಕಲ್ಲುರ್ಟಿ ಕೋಲ ಕುಲ್ಕುಂದ, ಕಡಬ  jod...      • ಮಂತ್ರವಾದಿ ಗುಳಿಗ ನೆಮೋತ್ಸವ (ಕೆಂಡ ಸೇವೆ )...      • Видео      / pvkbjbu8rul   https://youtu.b
e/Rzkgg5

Комментарии

Информация по комментариям в разработке