ಸೋಜುಗಾದ ಸೂಜು ಮಲ್ಲಿಗೆ | ಹಾರ್ಮೋನಿಯಂ ಸ್ವರ | Sojugada Sooju Mallige Harmonium Swara | @panchupb ​

Описание к видео ಸೋಜುಗಾದ ಸೂಜು ಮಲ್ಲಿಗೆ | ಹಾರ್ಮೋನಿಯಂ ಸ್ವರ | Sojugada Sooju Mallige Harmonium Swara | @panchupb ​

ಸೂಜುಗದ ಸೂಜು ಮಲ್ಲಿಗೆ ಕನ್ನಡದ ಜನಪ್ರಿಯ ಜಾನಪದ ಗೀತೆಯಾಗಿದೆ.ಈ ಹಾಡು ಶಿವನಿಗೆ ಹೇಗೆ ಪೂಜೆ ಮಾಡ್ತೀವಿ ಅನ್ನೋದು ಹೆಳ್ಳುತ್ತೆ. ಮಹಾದೇವನ ಆಶೀರ್ವಾದ ನನ್ನ ನಿಮ್ಮ ಎಲ್ಲರ ಮೇಲೆ ಸದಾ ಇರಲಿ.

#sojugadasoojumallige #sojugadasoojumalligekannadajanapadaSong
#SojugadaSoojumalligeharmoniumswara #sojugadasoojumalligeharmoniumnotes#HowtosingSojugada#Learnsojugadasong#howtosingkannadasong #Panchupb


ಸಾಹಿತ್ಯ
............................
ಮಾದೇವ ಮಾದೇವ
ಮಾದೇವ ಮಾದೇವ
ಮಾ_ದೇ_ವ ಮಾದೇವ

ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ
ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮ್ಗೆ
ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ
ಮಾದಪ್ಪನ ಪೂಜೆಗೆ ಬಂದು ಮಾದೇವ ನಿಮ್ಮ

ತಪ್ಪಾಲೆ ಬೆಳಗಿವಿನೀ ತುಪ್ಪವ ಕಾಸಿವ್ನಿ
ಕಿತ್ತಾಳೆ ಹಣ್ಣ ತಂದ್ವಿನಿ ಮಾದೇವ ನಿಮ್ಗೆ
ಕಿತ್ತಾಳೆ ಹಣ್ಣ ತಂದೀವ್ನಿ ಮಾದಪ್ಪ
ಕಿತ್ತಾಡಿ ಬರುವೆ ಪರಸೆಗೆ ಮಹಾದೇವ ನಿಮ್ಗೆ

ಬೆಟ್ಟತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ
ಬೆಟ್ಟದ್ಮಾದೇವ ಗತಿ ಎಂದು ಮಾದೇವ ನೀವೆ
ಬೆಟ್ಟದ್ಮಾದೇವ ಗತಿ ಎಂದು ಅವರಿನ್ನೂ
ಹಟ್ಟಿ ಹಂಬಲವ ಮರೆತಾರೋ ಮಾದೇವ ನಿಮ್ಮ


Follow me on

INSTAGRAM : https://instagram.com/panchu_pb?utm_m...

FACEBOOK :   / piano.pb.7  

Thanks for watching
#Panchupb

Комментарии

Информация по комментариям в разработке