Chandana Siri Chandana - Yuvaraja - HD Video Song | Shivarajkumar | SPB | Ramana Gogula

Описание к видео Chandana Siri Chandana - Yuvaraja - HD Video Song | Shivarajkumar | SPB | Ramana Gogula

Yuvaraja Movie Song: Chandana Siri Chandana - HD Video
Actor: Shivarajkumar, Bhavna Pani
Music: Ramana Gogula
Singer: SPB
Lyrics: K Kalyan
Year :2001

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Yuvaraja – ಯುವರಾಜ 2001$SGV

Chandana Siri Chandana Song Lyrics In Kannada

ಚಂದನ ಸಿರಿ ಚಂದನ ಸಿರಿ ಚೆಲ್ಲು ಚೆಲ್ಲು ಚಿಗರೆ ಮರಿ
ನಮ್ಮ ಮಾಲಕ್ಷ್ಮಿ ಘಲ್ ಘಲ್ ಎನ್ನುತ ಬಂದಳೋ
ಹೇಯ್.... ನಿಂತರು ಸರಿ ಕುಂತರು ಸರಿ ನಕ್ಕರಿವಳು ನವಿಲು ಗರಿ
ಅಮ್ಮಾ ಅಮ್ಮಮ್ಮಾ ಮನೆಗೆ ದೀಪಾವಳಿ ತಂದಳೋ
ಹೇಯ್ ... ಘಮ್ಮಂತ ಅರಳುತಿದೆ ನಮ್ಮ ಮನೆಯ ಈ ಮೊಗ್ಗು ಕಣ್ತುಂಬ ಕನಸು ಇದೆ
ಆದರೂ ಯಾಕೋ ಈ ಸಿಗ್ಗು ಅಚ್ಚಚ್ಚಚ್ಚೋ ಬೆಲ್ಲದಚ್ಚೋ
ಇನ್ನೂ ಮನೆ ತುಂಬ ಡುಂ ಡುಂ ಡುಂ ತುತ್ತೂರಿ...
ಚಂದನ ಸಿರಿ ಚಂದನ ಸಿರಿ ಚೆಲ್ಲು ಚೆಲ್ಲು ಚಿಗರೆ ಮರಿ
ನಮ್ಮ ಮಾಲಕ್ಷ್ಮಿ ಘಲ್ ಘಲ್ ಎನ್ನುತ ಬಂದಳೋ

ನಿನ್ನ ಹೆಜ್ಜೆಯನು ಕಂಡರೆ ಹಂಸ ನಡೆಯಲು ಮರೆತು ತಾಳ ಹಾಕಲು ಕೂರುವುದು
ನಿನ್ನ ಲಜ್ಜೆಯನು ಕಂಡರೇ ಕೋಗಿಲೆ ಹಾಡಲು ಮರೆತು ಘಟ್ಟಿಮೇಳ ಶುರು ಮಾಡುವುದು
ಮದುವೆಗಳ ಬಂಧನವು ಸ್ವರ್ಗದಲ್ಲೇ ಆರಂಭ
ಈ ಚೆಲುವೆಯ ಮದುವೆ ಸ್ವರ್ಗದಾ ಪ್ರತಿಬಿಂಬ
ಹೃದಯದಲಿ ಮನೆ ಕಟ್ಟಿ ಪ್ರೀತಿಸಿರಿ ಹಾಡುತ ದಿನ ದಿನ
ನಿಂತರು ಸರಿ ಕುಂತರು ಸರಿ ನಮ್ಮ ಮಾಲಕ್ಷ್ಮಿ ಮನೆಗೆ ದೀಪಾವಳಿ ತಂದಳೋ
ಚಂದನ ಸಿರಿ ಚಂದನ ಸಿರಿ ಚೆಲ್ಲು ಚೆಲ್ಲು ಚಿಗರೆ ಮರಿ
ನಮ್ಮ ಮಾಲಕ್ಷ್ಮಿ ಘಲ್ ಘಲ್ ಎನ್ನುತ ಬಂದಳೋ

ರಂಗವ್ವ ರಂಗಿ ರಂಗೇರತ್ವಾಳೇ ಮುಚ್ಚಿಟ್ಟ ಮನ್ಸು ಬಿಚ್ಚಿಡ್ತಾವಳೇ
ಬಿಂಕಕ್ಕೆ ಬಿಗುಮಾನ ಸೇರಿಸ್ತಾವಳೇ
ಅಲ್ಲೂ ಸೊಬಾನೇ ಚಿಕ್ಕವ್ವನ ಪದ ಹೇಳ್ತಾವಳೇ
ಹೆತ್ತ ಮನೆಗಿವಳು ನಂದಾದೀಪ ನಗುವ ದೀಪ ಮೆಟ್ಟೋ ಮನೆಗಿವಳು ಪ್ರತಿರೂಪ
ಕಷ್ಟ ಸುಖಗಳೆಲ್ಲ ತನ್ನದು ಎಂದು ತನ್ನವರೆಂದು ಮನೆ ಬೆಳಗುವಳು ಈ ರೂಪ
ಕಣ್ಣೀರ ಮರೆಸುತ್ತ ಕತ್ತಲೆಯ ಕಳೆಯುವಳೋ ಎದುರಾಡೋ ಮಾತಿಲ್ಲ ಅದೃಷ್ಟ ದೇವತೆಯೋ
ವಂದಿಸುವೆ ದೇವರಿಗೆ ಅತ್ತಿಗೆಯ ನಮ್ಮ ಬಾಳಿನ ತೋರಣ
ಚಂದನ ಸಿರಿ ಚಂದನ ಸಿರಿ ಚೆಲ್ಲು ಚೆಲ್ಲು ಚಿಗರೆ ಮರಿ
ನಮ್ಮ ಮಾಲಕ್ಷ್ಮಿ ಘಲ್ ಘಲ್ ಎನ್ನುತ ಬಂದಳೋ
ಹೇಯ್.... ನಿಂತರು ಸರಿ ಕುಂತರು ಸರಿ ನಕ್ಕರಿವಳು ನವಿಲು ಗರಿ
ಅಮ್ಮಾ ಅಮ್ಮಮ್ಮಾ ಮನೆಗೆ ದೀಪಾವಳಿ ತಂದಳೋ
ಹೇಯ್ ... ಘಮ್ಮಂತ ಅರಳುತಿದೆ ನಮ್ಮ ಮನೆಯ ಈ ಮೊಗ್ಗು ಕಣ್ತುಂಬ ಕನಸು ಇದೆ
ಆದರೂ ಯಾಕೋ ಈ ಸಿಗ್ಗು ಅಚ್ಚಚ್ಚಚ್ಚೋ ಬೆಲ್ಲದಚ್ಚೋ
ಇನ್ನೂ ಮನೆ ತುಂಬ ಡುಂ ಡುಂ ಡುಂ ತುತ್ತೂರಿ...
ಚಂದನ ಸಿರಿ ಚಂದನ ಸಿರಿ ಚೆಲ್ಲು ಚೆಲ್ಲು ಚಿಗರೆ ಮರಿ
ನಮ್ಮ ಮಾಲಕ್ಷ್ಮಿ ಘಲ್ ಘಲ್ ಎನ್ನುತ ಬಂದಳೋ

Комментарии

Информация по комментариям в разработке