Gowri Aarati haadu/ kannada Aarati song / Devi Aarati song/ ಗೌರಿ ಆರತಿ ಹಾಡು

Описание к видео Gowri Aarati haadu/ kannada Aarati song / Devi Aarati song/ ಗೌರಿ ಆರತಿ ಹಾಡು

Composed by Smt.Subbalakshmamma
ಆರತಿ ಎತ್ತುವೆ ಪಾರ್ವತಿಗೆ
ಮಾರಜನಕ ಕೃಷ್ಣ ಸೋದರಿಗೆ ll

ಮುತ್ತು ಮಾಣಿಕ್ಯ ನವರತ್ನದಾರತಿ ಎತ್ತಿ ಪಾಡುವೆ ನಿನ್ನ ಈ ಕ್ಷಣದಿl
ಮುತ್ತೈದೆ ತನವಿತ್ತು ಮುದದಿ ಪಾಲಿಸು ಎಂದು ಪಾಡುವೇನು ನಾ ಬೇಡುವೆನುll

ಗಿರಿರಾಜ ಕುವರಿಯೆ ಹರನರಸಿಯೆ ನೀ ಶೌರಿ ಸಹೋದರಿ ಶಂಕರಿl
ವರನರಸಿಂಹನ ವಂದಿಸಿ ಬೇಡುವೆ ವರಗಳ ಪಾಲಿಸು ವರ ಗೌರಿll

ಪತಿಭಿಕ್ಷೆಯನಿತ್ತು ಪಾಲಿಸೇನುತಲಿ ಪರಮ ಮಂಗಳೆಯನು ಬೇಡುತಲಿ l
ಪರಮ ಸಂತೋಷದಿ ಪಾಡುತಲಿ ನಿನ್ನ ಬೇಡುತಲೀ ಕೊಂಡಾಡುತಲಿll

Комментарии

Информация по комментариям в разработке