Ananya Bhat singer, ಗಾಯಕಿ ಅನನ್ಯ ಭಟ್ ತಂಡ ಹಾಡುಗಳನ್ನು ಹಾಡಿ ನೆರೆದಿದ್ದರನ್ನು ರಂಜಿಸಿದರು.

Описание к видео Ananya Bhat singer, ಗಾಯಕಿ ಅನನ್ಯ ಭಟ್ ತಂಡ ಹಾಡುಗಳನ್ನು ಹಾಡಿ ನೆರೆದಿದ್ದರನ್ನು ರಂಜಿಸಿದರು.

ಅಲ್ಲಿ ರಾಗ ತಾಳ ನಿನಾದ. ರಾಗದ ಆಲಾಪನೆಗೆ ನೆರೆದಿದ್ದ ಜನರನ್ನು ಸೆಳೆದಿತ್ತು. ಸುಮಧುರ ಕಂಠದಿಂದ ಹೊಮ್ಮಿದ ಸಂಗೀತ ಅನನ್ಯ ಅನುಭವ ನೀಡಿತ್ತು. ರ್ಮಸ್ಥಳ ಲಕ್ಷದೀಪೋತ್ಸವದ ಅಮೃತರ್ಷಿಣಿ ಸಭಾಂಗಣದಲ್ಲಿ ಜರುಗಿದ ಮನೋರಂಜನಾ ಕರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಅನನ್ಯ ಭಟ್ ಹಾಗೂ ಅವರ ತಂಡ ಹಾಡುಗಳನ್ನು ಹಾಡಿ ನೆರೆದಿದ್ದ ಭಕ್ತರನ್ನು ರಂಜಿಸಿದರು. ’ಶರಣು ಶರಣು ದೇವಾ ಶರಣು, ಮಾದೇವಗೆ ಮಂಗಳಾರತಿ ಬೆಳಗೀರೆ’ ಎಂದು ಶಿವನ ಧ್ಯಾನ ಮಾಡುತ್ತಾ ಗಾಯನ ಆರಂಭವಾಯಿತು. ’ತಿಂಗಳು ಮುಳುಗಿದವೋ ರಂಗೋಲಿ ಬೆಳಗಿದವೋ’ ಹಾಗೂ ಗೀಗಿ ಪದ್ಯವನ್ನು ಹಾಡುವ ಮೂಲಕ ಜನ-ಮನ ಸೆಳೆದರು. ಪ್ರಸಿದ್ಧ ’ಸೋಜುಗದ ಸೂಜು ಮಲ್ಲಿಗೆ, ಮಾದೇವ ನಿನ್ನ ಮಂಡೆ ಮ್ಯಾಲೆ ದುಂಡು ಮಲ್ಲಿಗೆ’ ಹಾಡು ಎಲ್ಲರ ಚಪ್ಪಾಳೆಗೆ ಪಾತ್ರವಾಯಿತು. ಬಿ.ವಿ ಕಾರಂತರು ಕನ್ನಡಕ್ಕೆ ಮೊದಲು ಪರಿಚಯಿಸಿದ ’ಗೋವಿಂದ ಮುರಹರ ಗೋವಿಂದ’ ಹಾಗೂ ಸೋಲಿಗ ಜನಾಂಗದವರು ಇ?ಪಡುವ ನಾರಾಯಣನ ಕುರಿತಾದ ಗೀತೆ ಎಲ್ಲರ ಮನ ತಣಿಸಿತು. ಕನ್ನಡ ಬೆಳಿಸಿ ಉಳಿಸುವುದು ನಮ್ಮ ರ್ತವ್ಯ ಎಂಬ ಸಂದೇಶವನ್ನು ನೀಡುತ್ತಾ ಕನ್ನಡದ ಅಭಿಮಾನವನ್ನು ಎಲ್ಲೆಡೆ ಬಿತ್ತುವುದರ ಮೂಲಕ ’ಕನ್ನಡ ಉಳಿಸಿ ಕನ್ನಡ ಬೆಳೆಸಿ ಕನ್ನಡವನ್ನೇ ಬಳಸಿ’ ಗೀತೆಯನ್ನು ತಮ್ಮ ಸುಶ್ರಾವ್ಯ ಕಂಠದಿಂದ ಪ್ರಸ್ತುತಪಡಿಸಿರುವುದು ಎಲ್ಲರಿಗೆ ಖುಷಿ ತಂದಿತು. ಎಲ್ಲರೂ ಚಪ್ಪಾಳೆಯ ಮೂಲಕ ಗಾಯಕಿಗೆ ಹಾಗೂ ಜನಪದ ಸಂಗೀತಕ್ಕೆ ಪ್ರೋತ್ಸಾಹ ನೀಡಿದರು. ಅನನ್ಯ ಭಟ್ ಅವರನ್ನು ಹೇಮಾವತಿ ಹೆಗಡೆ ಸನ್ಮಾನಿಸಿದರು ಜನಪದ ಆಸಕ್ತಿ ಮೊದಲಿನಿಂದಲೂ ಇತ್ತು.. ಅದನ್ನು ಇನ್ನ? ಹೆಚ್ಚಿಸಿ ಬೆಳೆಸಬೇಕಿದೆ ಎಂದರು. ನಮ್ಮ ಜನಪದ ಕಲೆ ಬೆಳೆಯಬೇಕಿದೆ. ಹಾಗಾಗಿ ಮೈಸೂರು, ಬೆಂಗಳೂರು ಕಡೆಗಳಲ್ಲೆಲ್ಲಾ ಕರ್ಯಕ್ರಮವನ್ನು ನೀಡಿದ್ದೇನೆ. ದಕ್ಷಿಣ ಕನ್ನಡದ ಕಡೆಗಳಲ್ಲೂ ಹೆಚ್ಚು ಜನಪದ ಕಲೆ ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು. ಚಲನ ಚಿತ್ರ ಗೀತೆಗಳನ್ನು ಎಲ್ಲರೂ ನೋಡ್ತಾರೆ ಹಾಗೂ ಕೇಳ್ತಾರೆ. ಆದರೆ ಜನಪದ ಗೀತೆಗಳು ನಶಿಸುತ್ತಿವೆ. ನಮ್ಮ ಸಂಸ್ಕೃತಿ, ಹಬ್ಬಗಳೆಲ್ಲವೂ ಜನಪದದ ಮೂಲ. ಜನಪದ ಹಾಡುಗಳನ್ನು ಕೇಳುವ ಪೀಳಿಗೆ ಕಡಿಮೆಯಾಗಿದೆ. ಅದು ನಶಿಸಬಾರದು ಎಂಬ ದೃಷ್ಟಿಯಿಂದ ಹಾಡಿನ ಜೊತೆಗೆ ಇನ್ನಿತರ ವಾದ್ಯಗಳನ್ನು ಬಳಸಿ ಹಾಡಿದರೆ ಜನ ಇ?ಪಡುತ್ತಾರೆ ಎನ್ನುವ ನಿಟ್ಟಿನಲ್ಲಿ ಪ್ರಯೋಗನಿರತರಾಗಿದ್ದೇವೆ. ಎಂಬುದು ಖುಷಿ ತಂದಿದೆ ಎಂದು ಅಭಿಪ್ರಾಯಪಟ್ಟರು

Комментарии

Информация по комментариям в разработке