ನಿಮ್ಮಂತೆ ನಾನೂ ಕೂಡಾ (ಕವಿತೆ) - ಸಂತೆಬೆನ್ನೂರು ಫೈಜ್ನಟ್ರಾಜ್# Nemmanthe Naanu Kuda - Santebennur Faijnatraj

Описание к видео ನಿಮ್ಮಂತೆ ನಾನೂ ಕೂಡಾ (ಕವಿತೆ) - ಸಂತೆಬೆನ್ನೂರು ಫೈಜ್ನಟ್ರಾಜ್# Nemmanthe Naanu Kuda - Santebennur Faijnatraj

ಆಕರ ಕೃತಿ:ಬುದ್ದನಾಗ ಹೊರಟು - ಕನ್ನಡ ಶ್ರಾವಣ ೪

ನಾನೂ ಕೂಡಾ ನಿಮ್ಮಂತೆ - ಸಂತೆಬೆನ್ನೂರು ಫೈಜ್ನಟ್ರಾಜ್

ಕವಿ ಪರಿಚಯ:-
ಹೆಸರು : ಸಂತೆಬೆನ್ನೂರು ಫೈಜ್ನಟ್ರಾಜ್
ಸ್ಥಳ: ಸಂತೆಬೆನ್ನೂರು (ದಾವಣಗೆರೆ)
ವೃತ್ತಿ: ಕನ್ನಡ ಅಧ್ಯಾಪಕರು
ಕೃತಿಗಳು: ಬುದ್ದನಾಗ ಹೊರಟು, ಎದೆಯೊಳಗಿನ ತಲ್ಲಣ, ಮಂತ್ರದಂಡ, ಲೋಕದ ಡೊಂಕು..
ಪ್ರಶಸ್ತಿ: ಸಂಚಯ ಪ್ರಶಸ್ತಿ, ಗವಿಸಿದ್ಧ ಕಾವ್ಯ ಪ್ರಶಸ್ತಿ..

ಕವಿತೆಯ ವಿಶ್ಲೇಷಣೆ:-

1]ಈ ಕವಿತೆಯು ಸರಳ ಸುಂದರ ಭಾಷೆಯೊಂದಿಗೆ ಆಧುನಿಕ ಕನ್ನಡ ಕಾವ್ಯದಾಟಿಯಲ್ಲಿಯೇ ರೂಪಗೊಂಡಿದೆ ದೊಡ್ಡ ಕೆಲಸವೇನಲ್ಲ ಒಬ್ಬನೇ ಇದ್ದಾಗ ಬುದ್ಧನಾಗುತ್ತೇನೆ ಎಂದು ಪ್ರಾರಂಭ ವಾಗುತ್ತಾ ಕವಿ ತನ್ನ ಆತ್ಮಾವಲೋಕನ ವನ್ನು ಮಾಡಿಕೊಳ್ಳುವುದರೊಂದಿಗೆ ಸಾಮಾಜಿಕ ಜೀವನದ ಕುರಿತು ಮೌಲ್ಯಗಳ ಕುರಿತು ಒಳಿತು ಚಿಂತಿಸಿ ಆ ವಿಷಯಗಳನ್ನು ಅರಿತು ಸಮಾಜ ಕಟ್ಟುವ ಕೆಲಸವನ್ನ ಮಾಡಬೇಕಾಗಿದೆ ಎಂಬ ಅನಿವಾರ್ಯತೆಯನ್ನು ತಿಳಿಸುತ್ತದೆ.

2.ಮನುಷ್ಯ ಸಹಜವಾಗಿ ಅವರ ಯೋಗಕ್ಷೇಮವನ್ನ ವಿಚಾರಿಸಿದ ನಂತರ ಮಣ್ಣ ಮೇಲಿನ ಧೂಳಿನಂತೆ ಜಗಕ್ಕೆ ಅಂಟಿದ ಅನೇಕ ಸಾಮಾಜಿಕ ಸಮಸ್ಯೆಗಳನ್ನ ಬಗೆಹರಿಸಬೇಕು ಎಂಬ ನಿಲುವಿನೊಂದಿಗೆ ಅದಕ್ಕಾಗಿ ಸಿದ್ಧತೆಯನ್ನು ನಡೆಸುತ್ತಾ ಸಮಾಜದಲ್ಲಿ ಬೇರು ಬಿಟ್ಟಿರುವ ಅನೇಕ ಸಮಸ್ಯೆಗಳನ್ನ ರಂಬೆ ಕೊಂಬೆಗಳ ಸವರಿ ಸಿದ್ಧ ಮಾಡುವ ರೀತಿಯಲ್ಲಿ ಅಥವಾ ಹೊಲದಲ್ಲಿ ರೈತ ಕಳೆಯನ್ನ ಕಿತ್ತು ಪೈರನ್ನು ಬೆಳೆಸುವ ರೀತಿಯಲ್ಲಿ ಸಮಾಜವನ್ನು ಸರಿದಾರಿಗೆ ಕೊಂಡಯ್ಯಬೇಕು ಎಂಬ ಆಶಯದೊಂದಿಗೆ ಆತ್ಮಾವಲೋಕನದೊಂದಿಗೆ ಮನಸ್ಸಸಂತೋಷವನ್ನು ಪಡುತ್ತಾ ಸಂಭ್ರಮಿಸುವ ಕವಿಮನ, ಕಾಂಡ ಮತ್ತು ಬೇರಿನ ನಗುವು ಕೇಳಿಸಿಕೊಳ್ಳುವ ರೀತಿಯಲ್ಲಿ ಸಂತಸದಿಂದ ಮನೆ ಸೇರುತ್ತದೆ.

3.ಸಮಾಜದಲ್ಲಿ ನಡೆಯುವ ಅನೇಕ ಘಟನೆಗಳನ್ನು ಕುರಿತು ಮಾತನಾಡುವಾಗ ನಾವು ಒಳಿತನ್ನು ಮಾತ್ರ ಮಾತನಾಡುತ್ತಾ ಹೆಣ್ಣು ಹೊನ್ನು ಮಣ್ಣು ಗಳೆಂದು ಭಾಷಣ ಬಿಗಿಯುತ್ತ ನಮ್ಮ ಶ್ರೇಷ್ಠತೆಯನ್ನ ಮಾತ್ರ ಹೇಳಿಕೊಳ್ಳುತ್ತೇವೆ, ಆದರೆ ಕಣ್ಣೆದುರು ನಡೆಯುವ ಘಟನೆಗಳನ್ನುಮರೆತು, ಉಸಿರು ಚೆಲ್ಲಿದ ಭ್ರೂಣಗಳ ಭಾಷಣ ಬಿಗಿಯುತ್ತ ನಮ್ಮ ಶ್ರೇಷ್ಠತೆಯನ್ನ ಮಾತ್ರ ಹೇಳಿಕೊಳ್ಳುತ್ತೇವೆ, ಆದರೆ ಕಣ್ಣೆದುರು ನಡೆಯುವ ಘಟನೆಗಳನ್ನುಮರೆತು, ಉಸಿರು ಚೆಲ್ಲಿದ ಭ್ರೂಣಗಳ ಸದ್ದಿಗೆ ಮೌನವಾಗಿ ಹೋಗುತ್ತೇವೆ.
ಇಂದಿಗೂ ಹೆಣ್ಣು ಭ್ರೂಣ ಹತ್ಯೆ ಮತ್ತು ಲಿಂಗ ತಾರತಮ್ಯತೆ ಶೋಷಣೆ ನಿರಂತರವಾಗಿ ನಡೆಯುತ್ತಲೇ ಇದೆ ಎಂಬುದನ್ನು ಕವಿತೆ ಸೂಕ್ಷ್ಮವಾಗಿ ಬಿಚ್ಚಿಡುತ್ತದೆ.

4.ಸಮಾಜದಲ್ಲಿನಮ್ಮ ಕಣ್ಣ ಮುಂದೆ ಏನೆಲ್ಲ ನಡೆಯುತ್ತಿದ್ದರು ಅದರ ಅರಿವು ನಮಗಿದ್ದರೂ ಸಹ ಸ್ವರವೇ ಇಲ್ಲದ ಮಾತಿನಂತೆ ಅದಕ್ಕೆ ಅಕ್ಷರ ತುಂಬಿಸಲು ನಾವು ಸೋಲುವ ರೀತಿಯಲ್ಲಿ ಮನಸ್ಸು ವ್ಯವಸ್ಥೆಯನ್ನು ಪ್ರಶ್ನಿಸಲಾರದೆ ಹೊಂದಿಕೊಳ್ಳುತ್ತದೆ ಹಾಗೆಯೇ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ತೋರ್ಪಡಿಕೆಗೆ ಬಿಳಿಯ ವಸ್ತ್ರವನ್ನ ತೊಟ್ಟು ಮನಸ್ಸಿನೊಳಗೆ ನೋವನ್ನು ತುಂಬಿಕೊಂಡಿರುವ ನಾವುಗಳು, ಆತ್ಮವನ್ನು ಮನೆಯೊಳಗೆ ನಗುವ ಗಾಂಧೀಜಿ ಫೋಟೋದ ಮೊಳೆಗೆ ನೇತು ಹಾಕಿ ಬಂದಿದ್ದೇನೆ ಎಂಬ ಸಾಲಿನೊಂದಿಗೆ ಕವಿತೆ ಸಾಮಾಜಿಕ ವಿಡಂಬನೆಯನ್ನು ಮಾಡುತ್ತ ಆದರ್ಶಗಳು ಗಾಂಧಿ ಫೋಟೋ ದಂತೆ ಪೂಜಿತವಾಗಿವೆ ಪ್ರದರ್ಶನವಾಗಿವೆ ಆದರೆ ಅವು
ಅಸ್ತಿತ್ವಕ್ಕೆ ಬರುತ್ತಿಲ್ಲ ಎಂಬ ಅಳಲು ಕವಿಮಾನದ್ದಾಗಿದೆ.

5.ನಾವು ಅಂದರೆ ಮನುಷ್ಯರು ಮಾಡುವ ತಪ್ಪುಗಳು ನಮ್ಮ ಮನಸ್ಸಿಗೆ ಅರ್ಥವಾದರೂ ಕೂಡ ಅದನ್ನು ಅರ್ಥೈಸಿಕೊಳ್ಳದೆ ನಾಟಕದ ಪಾತ್ರಧಾರಿಗಳಂತೆ ನಟಿಸುತ್ತಾ ಮುಂದೆ ಸಾಗುತ್ತಿದ್ದೇವೆ. ಹೀಗೆ ಆಟ ಮುಂದುವರಿಯುತ್ತಿದೆ ಇದು ಎಂದು ಬದಲಾಗುವುದು ಯಾರಿಗೆ ಗೊತ್ತು ನೀವು ನಾಳೆ ನಾಡಿದ್ದು ಬದಲಾಗಬಹುದು ಎಂಬ ಆಶಯವನ್ನು ಕವಿ ಇಟ್ಟುಕೊಂಡಿದ್ದಾರೆ ನಾಟಕೀಯ ಬದುಕು ಕೊನೆಗೊಂಡು ವಾಸ್ತವಿಕ ಪರಿಸ್ಥಿತಿಯನ್ನು ಅರಿತು ಮನುಷ್ಯ ಮನುಷ್ಯನಾಗಿ ಇತರರಿಗೆ ಸ್ಪಂದಿಸುವ ಮಾನವೀಯ ಗುಣವನ್ನು ಬೆಳೆಸಿಕೊಳ್ಳಬೇಕೆಂಬ ಆಶಯವನ್ನ ವ್ಯಕ್ತಪಡಿಸುತ್ತಾರೆ. ಒಟ್ಟಾರೆ ಈ ವ್ಯವಸ್ಥೆ ಬದಲಾಗಬೇಕೆಂಬ ಹೆಬ್ಬಯಕೆಯನ್ನು ಕವಿತೆ ಇಟ್ಟುಕೊಂಡಿದೆ.

6.ಸಾಮಾಜಿಕ ಶೋಷಣೆಗೆ ಸಿಲುಕಿದ ಅದೆಷ್ಟೋ ಹೆಣ್ಣು ಮಕ್ಕಳು ಇತರ ಸಹಾಯವನ್ನ ಬಯಸಿದರು ಅದನ್ನ ಅರ್ಥೈಸಿಕೊಳ್ಳದ ಸಮಾಜ ಅದನ್ನ ಕಂಡು ಕಾಣದವರಂತೆ ಜಾಣ ಕುರುಡರಂತೆ ನಟಿಸುತ್ತಾ ಮುಂದೆ ಸಾಗುತ್ತಾರೆ ನಾವು ಮನುಷ್ಯರು ಎಂಬುದನ್ನು ಸಹ ಮರೆತು ವರ್ತಿಸುತ್ತಾರೆ ಆದರೆ ಇದು ಕೊನೆಗೊಳ್ಳಬೇಕು ಸಾಮಾಜಿಕ ಅಸಮಾನತೆ ಲಿಂಗ ತಾರತಮ್ಯತೆ ಸ್ತ್ರೀ ಪುರುಷ ಎಂಬ ಬೇದಭಾವ ಕೊನೆ ಆಗಬೇಕು ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ನಿಲ್ಲಬೇಕು ಹೆಣ್ಣು ಭ್ರೂಣ ಹತ್ಯೆ ಶಾಶ್ವತವಾಗಿ ನಿಲ್ಲಬೇಕು. ಎಂಬ ಆಶಯದೊಂದಿಗೆ ಕವಿಮನ ಓದುಗರನ್ನು ಕವಿತೆಯ ಮೂಲಕ ಎಚ್ಚರಿಸುತ್ತಾ ಸಮಾಜವನ್ನು ಸರಿದಾರಿಗೆ ಕೊಂಡೊಯ್ಯುವ ಸಣ್ಣ ಪ್ರಯತ್ನವನ್ನು ಮಾಡುತ್ತಾ ಈ ಪ್ರಯತ್ನದಲ್ಲಿ ಎಲ್ಲರೂ ಭಾಗಿಯಾಗೋಣ ಸಮ ಸಮಾಜವನ್ನು ಕಟ್ಟುವಲ್ಲಿ ನಾವು ಯಶಸ್ವಿಯಾಗೋಣ ಎಂಬ ನಿರ್ಧಾರಕ್ಕೆ ಬರುತ್ತಾ ಕವಿತೆ ಸಾಮಾಜಿಕ ಸಮಸ್ಯೆಗಳನ್ನ ಅರ್ಥೈಸುತ್ತಾ ಅವುಗಳ ವಿಪತ್ತನ್ನು ಎಚ್ಚರಿಸುತ್ತ ಅವುಗಳನ್ನ ಹೋಗಲಾಡಿಸಲು ಎಲ್ಲರೂ ಕೈಜೋಡಿಸಬೇಕಾಗಿ ಅಥವಾ ಪಣತೊಡಬೇಕಾಗಿ ತಿಳಿಸುತ್ತದೆ.

"ಸಂತೆಬೆನ್ನೂರ್ ಪೈಜಟ್ರಾಜ್" ರವರ “ಬುದ್ಧನಾಗ ಹೊರಟು” ಎಂಬ ಕವನ ಸಂಕಲನದಿಂದ ಈ ಪಠ್ಯವನ್ನ ಆಯ್ದುಕೊಳ್ಳಲಾಗಿದೆ.

ಈ ಕವಿತೆ ಆತ್ಮ ನಿವೇದನೆಯನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಯಶಸ್ವಿಯಾಗಿದೆ.

ಸರಳ ಸುಂದರ ಭಾಷೆಯೊಂದಿಗೆ ಆಧುನಿಕ ಕನ್ನಡ ಕಾವ್ಯದ ದಾಟಿಯಲ್ಲಿಯೇ ರೂಪಗೊಂಡಿದೆ.

ಬಿಳಿ ಅಂಗಿಯ ಒಳಗಿನ ಕಪ್ಪು ಮನುಷ್ಯನಾನು ಎನ್ನುವ ಸಾಲುಗಳು ಗಮನಿಸಿದಾಗ ಸಾಮಾಜಿಕ ವಿಡಂಬನೆಯನ್ನು ವ್ಯಕ್ತಪಡಿಸಿದೆ.

ಪ್ರತಿಯೊಬ್ಬ ಮನುಷ್ಯ ಆತ್ಮಾವಲೋಕನವನ್ನು ಮಾಡಿಕೊಳ್ಳುವ ಅನಿವಾರ್ಯತೆಯನ್ನು ಕವಿತೆ ತಿಳಿಸಿದೆ.

ಮಾನವೀಯತೆಯ ಮೌಲ್ಯಗಳು ಮನುಷ್ಯನ ಸಾರ್ಥಕ ಜೀವನದಲ್ಲಿ ಅಳವಡಿಕೆ ಆಗಬೇಕು ಎಂಬುದರೊಂದಿಗೆ ಕವಿತೆ ಮನುಷ್ಯನ ಇಬ್ಬಗೆಯ ಉಸಿ ನಾಟಕ ವ್ಯಕ್ತಿತ್ವದ ಇನ್ನೊಂದು ಮುಖವನ್ನ ಪರಿಚಯಿಸುತ್ತದೆ.

Комментарии

Информация по комментариям в разработке