Ava Kulavo Ranga | ಆವ ಕುಲವೋ ರಂಗಾ | Dasarapada | Srinivas

Описание к видео Ava Kulavo Ranga | ಆವ ಕುಲವೋ ರಂಗಾ | Dasarapada | Srinivas

ಹಾಡುವ ಸಣ್ಣ ಪ್ರಯತ್ನ-ಶ್ರೀನಿವಾಸ್

ರಚನೆ- ಶ್ರೀ ವಾಧಿರಾಜರು
ಸಂಯೋಜನೆ-ತಿರುಮಲೆ ಶ್ರೀನಿವಾಸ್
ಸಂಗೀತ-ಭಾರದ್ವಾಜ್ ಟಿ. ಟಿ ಡಿ.
ಮೂಲಗಾಯಕರು- ಅನಂತ್ ರಾಜ್ ಮಿಸ್ತ್ರಿ

ಆವ ಕುಲವೋ ರಂಗಾ
ಅರಿಯಲಾಗದು ||

ಆವ ಕುಲವೆಂದರಿಯಲಾಗದು
ಗೋವ ಕಾಯ್ವ ಗೊಲ್ಲನಂತೆ
ದೇವಲೋಕದ ಪಾರಿಜಾತವು
ಹೂವ ಸತಿಗೆ ತಂದನಂತೆ||


ಗೋಕುಲದಲ್ಲಿ ಹುಟ್ಟಿದನಂತೆ
ಗೋವುಗಳನ್ನು ಕಾಯ್ದನಂತೆ ||
ಕೊಳಲನೂದಿ ಮೃಗಪಕ್ಷಿಗಳ
ಮರಳು ಮಾಡಿದನಂತೆ
ತರಳತನದಿ ವರಳ ನೆಗಹಿ
ಮರವ ಮುರಿದು ಮತ್ತೆ ಹಾರಿ
ತೆರೆದು ಬಾಯಿ‌ಯೊಳಗಿರೇಳು ಲೋಕವ
ಇರಿಸಿ ತಾಯಿಗೆ ತೋರ್ದನಂತೆ ||

ಗೊಲ್ಲತಿಯರ ಮನೆಗೆ ಪೊಕ್ಕು
ಕಳ್ಳತನವ ಮಾಡಿದನಂತೆ ||
ಒಲ್ಲದ ಪೂತನಿಯ ವಿಷವನುಂಡು
ಮೆಲ್ಲನೆ ತೃಣನ ಕೊಂದನಂತೆ
ಪಕ್ಷಿ ತನ್ನ ವಾಹನವಂತೆ
ಹಾವು ತನ್ನ ಹಾಸಿಗೆಯಂತೆ
ಮುಕ್ಕಣ್ಣ ತನ್ನ ಮೊಮ್ಮಗನಂತೆ
ಮುದ್ದುಮುಖದ ಚೆಲ್ವನಂತೆ ||

ಕರಡಿ ಮಗಳ ತಂದನಂತೆ
ಶರಧಿ ಮಗಳು ಮಡದಿಯಂತೆ ||
ಧರಣಿಯನ್ನು ಬೇಡಿದನಂತೆ
ಈರೇಳು ಲೋಕದ ಒಡೆಯನಂತೆ
ಹಡಗಿನಿಂದಲಿ ಬಂದನಂತೆ
ಕಡಲದಡೆಯಲಿ ನಿಂದನಂತೆ
ಒಡನೆ ಮಧ್ವರಿಗೊಲಿದನಂತೆ ಒಡೆಯ ಹಯವದನನಂತೆ
ಆವ ಕುಲವೋ ರಂಗಾ
ಅರಿಯಲಾಗದು ||

ಆವ ಕುಲವೆಂದರಿಯಲಾಗದು
ಗೋವ ಕಾಯ್ವ ಗೊಲ್ಲನಂತೆ
ದೇವಲೋಕದ ಪಾರಿಜಾತವು
ಹೂವ ಸತಿಗೆ ತಂದನಂತೆ||

Комментарии

Информация по комментариям в разработке