ಹಾರಕೂಡ ಶ್ರೀ ಮಠದ ಸೇವಾಧಾರಿಗಳಿಂದ ಗುರುವಂದನೆ Guruvandane from the sevadharis of Harakuda Sri Mutt

Описание к видео ಹಾರಕೂಡ ಶ್ರೀ ಮಠದ ಸೇವಾಧಾರಿಗಳಿಂದ ಗುರುವಂದನೆ Guruvandane from the sevadharis of Harakuda Sri Mutt

ಹಾರಕೂಡ ಶ್ರೀಮಠದ ಸೇವಾಧಾರಿಗಳಿಂದ ಗುರುವಂದನೆ
ಗುರುಸೇವೆಯೇ ಪುಣ್ಯ ಸಂಪಾದನೆಯ ಗುಟ್ಟು - ಹಾರಕೂಡ ಶ್ರೀ
ಗುರುವಿನ ಸೇವೆಯಿಂದ ಪುಣ್ಯ ಸಂಪಾದನೆಯಾಗಿ ಜನನ ಮರಣಗಳ ಬಂಧನದಿಂದ ಮುಕ್ತಿ ಪಡೆಯಬಹುದಾಗಿದೆ.
ಗುರುವಿನಿಂದ ಪಡೆದ ಅರುವಿನ ಬೆಳಕಿನಲ್ಲಿ ನಮ್ಮ ಇರುವಿಕೆಯ ಮೂಲ ಉದ್ದೇಶ ಅರಿತರೆ ಅದೊಂದು ದೊಡ್ಡ ಸಾಧನೆ ಯಾಗಬಲ್ಲದು ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಮಠದ ಸೇವಕರ ವತಿಯಿಂದ ಆಯೋಜಿಸಿದ ಗುರುವಂದನೆ ಹಾಗೂ 703ನೇ ತುಲಾಭಾರ ಸೇವೆ ಸಮಾರಂಭದ ಸನ್ನಿಧಾನ ವಹಿಸಿ ಮಾತನಾಡಿದ ಶ್ರೀಗಳು, ಗುರು ಸೇವೆ ಎಂದರೆ ಒಬ್ಬ ಗುರುವಿನ ಕರಾಸಂಜಾತರಾಗಿ ಸೇವೆಗೈಯುವದಷ್ಟೇ ಅಲ್ಲ, ಗುರುವಿನ ಸತ್ಯ ಸಂಕಲ್ಪವಾದ ಲೋಕಕಲ್ಯಾಣ ಕಾರ್ಯದಲ್ಲಿ ಸಂಕಲ್ಪದಿಂದ ಸಫಲತೆವರೆಗೆ ಸಾಗುವ ಗುರುವಿನ ಪಯಣದಲ್ಲಿ ನಿಸ್ವಾರ್ಥದಿಂದ ವಕ್ರಭಾವವಿಲ್ಲದೆ ಶ್ರಮ ಸಲ್ಲಿಸುವುದಾಗಿದೆ.
ಸಮಾಜ, ನಾಡು, ರಾಷ್ಟ್ರ ಕಟ್ಟುವ ಬೃಹತ್ ಕಾರ್ಯದಲ್ಲಿ ಗುರುವಿನ ಮಾರ್ಗದರ್ಶನದಂತೆ ಸೇವೆಗೆಯುವುದು ಪ್ರತಿಯೊಬ್ಬ ಸೇವಕನ ಹೊಣೆಗಾರಿಕೆ ಯಾಗಿದೆ.
ಸೇವೆಯ ನೆನಪದಲ್ಲಿ ಸ್ವಾರ್ಥ ಸಾಧಿಸಿಕೊಳ್ಳಲು ಹವಣಿಸಿದರೆ ಅದು ಗುರು ದ್ರೋಹವಾಗುತ್ತದೆ.
ಗುರು ಕೃಪೆ ತಾನಾಗಿಯೇ ಬಂದರೆ ಅದು ಸೇವೆಯ ಫಲಶೃತಿ.
ಸೇವಾ ಮನೋಧರ್ಮವೇ ಶ್ರೇಷ್ಠ ಧರ್ಮವಾಗಿದೆ, ಎಲ್ಲಾ ಬಗೆಯ ಸೇವೆಯಲ್ಲಿ ಶುದ್ಧ ಅಂತ: ಕರಣ ಹೊನಲಾಗಿ ಹರಿಯುತ್ತಿರಬೇಕು.
ಕೊಂಚ ಬಿಸಿಲು, ಕೊಂಚ ಮಳೆ, ಕೊಂಚ ಮೋಡ ಇರುವುದರಿಂದಲೇ ಶ್ರಾವಣ ಮಾಸದ ಸೊಬಗು ಹೆಚ್ಚುತ್ತದೆ.
ಹಾಗೆಯೇ ಬದುಕಿನಲ್ಲಿ ಪರಿಸ್ಥಿತಿ ಬದಲಾದರೂ, ಮನಸ್ಥಿತಿ ಬದಲಾಗದಂತೆ ಸಮಚಿತ್ತದಿಂದ ಸೇವೆ ಮಾಡುವುದರಿಂದ ಶ್ರೇಯಸ್ಸು ಲಭಿಸುತ್ತದೆ.
ನಮ್ಮ ಮಠದ ಸೇವಕರೆಲ್ಲರೂ ಅತ್ಯಂತ ಭಕ್ತಿ ಶ್ರದ್ಧೆಯಿಂದ ಸಮರ್ಪಿಸಿದ ಗುರುವಂದನೆ ಹಾಗೂ ತುಲಾಭಾರ ಸೇವೆಯಿಂದ ನಾವು ತೃಪ್ತರಾಗಿದ್ದು ಚನ್ನಬಸವ ಶಿವಯೋಗಿಗಳ ಕೃಪಾಧಾರೆ ನಿಮ್ಮೊಂದಿಗಿರಲಿ ಸರ್ವರಿಗೂ ಸನ್ಮಂಗಳವಾಗಲಿ ಎಂದು ಶುಭ ಹಾರೈಸಿದರು.
ಆನಂದರಾವ ಝಳಕೆ ಪ್ರಸ್ತಾವಿಕವಾಗಿ ಮಾತನಾಡಿದರು.
ವೀರಣ್ಣ ಶೀಲವಂತ ಭಿನ್ನವತ್ತಳೆ ವಾಚನ ಮಾಡಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಹರತ್ ಉಸ್ಮಾನ ಖಾನ್ ಮೀರಜಾಯಿ ಮುಖಂಡರಾದ ಮೇಘರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ, ಬಾಬು ಹೊನ್ನಾ ನಾಯಕ್, ಸುಭಾಷ ಮುರುಡ ಸೇರಿದಂತೆ ಹಾರಕೂಡ ಶ್ರೀಮಠದ ಸಮಸ್ತ ಸೇವಕರು ಉಪಸ್ಥಿತರಿದ್ದರು.
ಚನ್ನಬಸಪ್ಪ ಮೀನಹಾಬಾಳ ಹಾಗೂ ಶರಣಪ್ಪ ಸುಂಠಾಣ ಪ್ರಾರ್ಥನೆ ಗೀತೆ ಸಾದರ ಪಡಿಸಿದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಮತ್ತು ಸಂಗಡಿಗರು ರುದ್ರ ಸಂಗೀತ ನಡೆಸಿಕೊಟ್ಟರು.
ರಮೇಶ ರಾಜೋಳೆ ಕಾರ್ಯಕ್ರಮವನ್ನು ನಿರೂಪಿಸಿದರು.
ಬಸವಕಲ್ಯಾಣ ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಮಠದ ಸೇವಕರ ವತಿಯಿಂದ ಆಯೋಜಿಸಿದ ಗುರುವಂದನೆ ಹಾಗೂ 703ನೇ ತುಲಾಭಾರ ಸೇವೆ ಸಮಾರಂಭವನ್ನು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.

Комментарии

Информация по комментариям в разработке