ಒಬ್ಬನಿಗೆ ಎಷ್ಟು ಭೂಮಿ ಬೇಕು? - ಲಿಯೋ ಟಾಲ್ ಸ್ಟಾಯ್॥ಅನು:ರಂಗನಾಥ॥How Much Land Does a Man Need? - Leo Tolstoy

Описание к видео ಒಬ್ಬನಿಗೆ ಎಷ್ಟು ಭೂಮಿ ಬೇಕು? - ಲಿಯೋ ಟಾಲ್ ಸ್ಟಾಯ್॥ಅನು:ರಂಗನಾಥ॥How Much Land Does a Man Need? - Leo Tolstoy

ಒಬ್ಬನಿಗೆ ಎಷ್ಟು ಭೂಮಿ ಬೇಕು? - ಅನು: ಜಿ.ಎನ್.ರಂಗನಾಥ ರಾವ್
ಆಕರ ಕೃತಿ: ಮಹಾಪ್ರಸ್ಥಾನ ಮತ್ತು ಇತರ ಕಥೆಗಳು
ಮೂಲ: ಲಿಯೋಟಾಲ್ ಸ್ಟಾಯ್ (ರಷ್ಯಾದ ಪ್ರಮುಖ ಕಥೆಗಾರ, ಕಾದಂಬರಿಕಾರ, ನಾಟಕಕಾರ ಹಾಗೂ ತತ್ವಜ್ಞಾನಿ)
ಕೃತಿಗಳು: ವಾರ್ ಅಂಡ್ ಪೀಸ್, ಅನ್ನಾಕರೆನಿನ, ರಿಸೆಕ್ಷನ್.

ಆಶಯ

ಮನುಷ್ಯ ಇತಿಹಾಸದಲ್ಲಿ ಭೂಮಿಗಾಗಿ ಹಪಹಪಿಸದವರು ಕಡಿಮೆ. ನೆಲದ ಮೇಲಿನ ವ್ಯಾಮೋಹದಿಂದ ನೊಂದು ನಾಶವಾದವರಲ್ಲಿ ವಿವೇಕ ಇನ್ನೂ ಕಡಿಮೆ. ಮಣ್ಣಿಗಾಗಿ ಎಲ್ಲ ಬಗೆಯ ಸಂಬಂಧಗಳನ್ನೂ ಕಳೆದುಕೊಂಡು ಏಕಾಕಿತನವನ್ನು ಅನುಭವಿಸಿದವರು ಕೂಡ ವಿವೇಚನೆಯಿಂದ ನಡೆದುಕೊಂಡಿಲ್ಲ. ಭೂಮಿಗಾಗಿ ಆಸೆಪಟ್ಟು ಪ್ರಾಣತೆತ್ತವರನ್ನು ಚರಿತ್ರೆ ಮತ್ತು ಪುರಾಣಗಳಲ್ಲಿ ಕಾಣುತ್ತೇವೆ.

ಈ ಕಥೆಯಲ್ಲಿ ಬರುವ ಪಾಹಾಂ ತನ್ನಲ್ಲಿರುವುದಕ್ಕಿಂತ ಹೆಚ್ಚಿನ ಭೂಮಿಯನ್ನು ಹೊಂದಬೇಕೆಂದು ಪರ್ಯಟನೆ ಆರಂಭಿಸುತ್ತಾನೆ. ವಿವಿಧ ರೀತಿಯ ಬುಡಕಟ್ಟು ಜನತೆ ಮತ್ತು ರೈತಾಪಿ ವರ್ಗವನ್ನು ಸಂಧಿಸುತ್ತಾನೆ. ಅವರ ಬಳಿ ತನಗೆ ಇನ್ನೂ ಹೆಚ್ಚಿನ ಕೃಷಿಭೂಮಿ ಬೇಕು ಕೊಂಡುಕೊಳ್ಳುತ್ತೇನೆಂದು ಬೇಡಿಕೆ ಸಲ್ಲಿಸುತ್ತಾನೆ. ಅತಿಯಾದ ಆಸೆಯಿಂದ ಹೆಚ್ಚಿನ ಭೂಮಿಯನ್ನು ತನ್ನದಾಗಿ ಮಾಡಿಕೊಳ್ಳಲು ನಡೆದು ನಡೆದು ಸುಸ್ತಾಗಿ ಸಾವನಪುತ್ತಾನೆ.

ಮನುಷ್ಯ ಅತಿಯಾದ ಆಸೆ ಪಟ್ಟರೆ ನೆಮ್ಮದಿ ಕಳೆದುಕೊಳ್ಳುತ್ತಾನೆ. ಸಂತೋಷದಿಂದ ಬದುಕಲು ಸಾಧ್ಯವಿಲ್ಲವೆನ್ನುವ ತಾತ್ವಿಕತೆ ಈ ಕಥೆಯಲ್ಲಿದೆ. ಅತಿಯಾಸೆ ತೊರೆದು ಇರುವುದರಲ್ಲೇ ತೃಪ್ತಿಪಡಬೇಕೆಂಬುದು ಇಲ್ಲಿನ ಆಶಯ.

Комментарии

Информация по комментариям в разработке