Strict Action Against Traffic Violations By Koppal District Police Department | Vijay Karnataka

Описание к видео Strict Action Against Traffic Violations By Koppal District Police Department | Vijay Karnataka

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ನ್ಯಾಯಾಲಯದಿಂದ ನೋಟಿಸ್ ಕಳಿಸುವ ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ ದಂಡ ಕಟ್ಟುವ ವ್ಯವಸ್ಥೆ ಕೊಪ್ಪಳ ಜಿಲ್ಲೆಯಲ್ಲಿ ಆರಂಭವಾಗಿದೆ.

ಸಂಚಾರಾಇ ನಿಯಮಗಳ ಕಟ್ಟುನಿಟ್ಟಿನ ಪಾಲನೆಗಾಗಿ ಇಂತಹ ನೂತನ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿರುವುದಾಗಿ ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಸಿಗ್ನಲ್ ಜಂಪ್ ಮಾಡಿದರೆ ವಾಹನ ಮಾಲೀಕರಿಗೆ ಪೊಲೀಸರಿಂದ ನೋಟಿಸ್ ಬರುತ್ತದೆ. ಈ ವ್ಯವಸ್ಥೆ ಈಗ ಕೊಪ್ಪಳ ಹಾಗು ಗಂಗಾವತಿ ನಗರದಲ್ಲಿಯೂ ಜಾರಿಗೊಳಿಸಲಾಗಿದೆ.

ಟ್ರಾಫಿಕ್ ಎನ್ಫೋರ್ಸ್ಮೆಂಟ್ ಸೆಂಟರ್‌ನ್ನು ಕೊಪ್ಪಳ ಜಿಲ್ಲಾ ಪೊಲೀಸರು ಆರಂಭಿಸಿದ್ದಾರೆ. ವಾಹನ ಚಾಲಕರು ಎಲ್ಲೆ ಬೇಕೆಂದರಲ್ಲಿ ಅಲ್ಲಿ ವಾಹನ ನಿಲ್ಲಿಸಿದ್ದರೆ. ತ್ರಿಬಲ್ ರೈಡಿಂಗ್, ಸಿಗ್ನಲ್ ಜಂಪ್, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ತಿಳಿಸಿದ್ದಾರೆ.

ಈಗಾಗಲೇ ಒಂದು ವಾರದ ಅವಧಿಯಲ್ಲಿ ಕೊಪ್ಪಳ ಹಾಗೂ ಗಂಗಾವತಿ ನಗರದಲ್ಲಿ ಒಟ್ಟು 133 ವಾಹನ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ವಾಹನ ಮಾಲೀಕರು ನಾವು ನಿಯಮ ಉಲ್ಲಂಘಿಸಿಲ್ಲ ಎಂದು ಹೇಳುವಂತಿಲ್ಲ ನೋಟಿಸ್‌ನೊಂದಿಗೆ ನಿಯಮ ಉಲ್ಲಂಘನೆಯ ಫೋಟೊ ಸಹ ಕಳುಹಿಸಲಾಗುತ್ತಿದೆ. ಇದರಿಂದಾಗಿ ವಾಹನ ಚಾಲಕರು ಹಾಗು ಮಾಲೀಕರು ಸಂಚಾರಿ ನಿಯಮ ಪಾಲನೆ ಮಾಡುವಂತಾಗುತ್ತದೆ ಎಂದು ಎಸ್‌ಪಿ ಹೇಳಿದ್ದಾರೆ.

#PoliceDepartment #TrafficViolations #Koppal


Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке