ಧನಿಯರ ಸತ್ಯನಾರಾಯಣ | ಕೊರಡ್ಕಲ್ ಶ್ರೀನಿವಾಸರಾವ್ | Kannada storyteller | Dhaniyara Satyanarayana

Описание к видео ಧನಿಯರ ಸತ್ಯನಾರಾಯಣ | ಕೊರಡ್ಕಲ್ ಶ್ರೀನಿವಾಸರಾವ್ | Kannada storyteller | Dhaniyara Satyanarayana

ಕೊರಡ್ಕಲ್ ಶ್ರೀನಿವಾಸರಾವ್ ಅವರು ಮೂವತ್ತರ ದಶಕದಲ್ಲಿ ರಚಿಸಿದ ದನಿಯರ ಸತ್ಯನಾರಾಯಣ ೧೯೩೮ ರಲ್ಲಿ ಪ್ರಕಟವಾದ ಅವರ ನಂದಾದೀಪ ಎಂಬ ಕಥಾಸಂಕಲನದಲ್ಲಿ ಸೇರಿದೆ. ಶೋಷಣೆ ಮತ್ತು ಬಂಡಾಯ ಗಳನ್ನು ವಸ್ತುವಾಗುಳ್ಳ ಆಧುನಿಕ ಕನ್ನಡ ಕಥೆಗಳು ಆದಿಮ ರೂಪಕದಂತೆ ಪ್ರಜ್ವಲಿಸುವ ಎಲ್ಲಾ ಮುಖ್ಯ ಆಂತಾಲಜಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಂಡು ಬಂದಿದೆ. ತನ್ನ ಸೀಮಿತ ಅವಕಾಶದಲ್ಲೇ ವರ್ಗ ಸಮಾಜವೊಂದರ ಸ್ವರೂಪವನ್ನು ಅದರ ಸೂಕ್ಷ್ಮ ರೂಪದಲ್ಲಿ ಕಾಣಿಸಿಕೊಳ್ಳುವ ಈ ಕಥೆ ತನ್ನ ಧ್ವನಿ ಶಕ್ತಿಯಿಂದ ಇಂದಿಗೂ ಓದುಗರ ಗಮನ ಸೆಳೆಯುವಂತಿದೆ. ಭಾವಾತಿರೇಕವಿಲ್ಲದ ಭಾವತೀವ್ರತೆ ಈ ಕಥೆಯ ಮುಖ್ಯ ಗುಣವಾಗಿದೆ. ಬರಹ ತುಂಬಾ ಸರಳವಾಗಿದ್ದರೂ ಸಾಂದ್ರವಾಗಿದೆ. ಸಂಕ್ಷಿಪ್ತತೆ ಇಲ್ಲಿ ದೋಷವಾಗಿ ಇಲ್ಲ. ಗಿರಡ್ಡಿ ಗೋವಿಂದರಾಜರು ಸರಿಯಾಗಿಯೇ ಗುರುತಿಸಿರುವಂತೆ ನಿರೀಕ್ಷೆ ಮತ್ತು ವಾಸ್ತವಗಳ ನಡುವಿನ ಅಂತರ ತನ್ನ ಉತ್ಕಟತೆಯಿಂದಾಗಿ ಅತ್ಯಂತ ಪರಿಣಾಮಕಾರಿಯಾಗಿದೆ. ತಾವು ದುಡಿದು ಬೆಳೆದದ್ದೆಲ್ಲಾ ತಮಗೆ ಎಂದು ನ್ಯಾಯವಾಗಿಯೇ ಭಾವಿಸುವ ಮುಗ್ದ ಉತ್ಸಾಹದ ದೃಷ್ಟಿಕೋನ ಒಂದು ಕಡೆ; ಈ ಜಗತ್ತಿನ ನ್ಯಾಯವೇನೆಂದು ಬಲ್ಲ ಅವರ ತಂದೆ ತಾಯಿಗಳ ಅಸಹಾಯಕತೆ ಇನ್ನೊಂದು ಕಡೆ; ತನ್ನ ನೆಲದಲ್ಲಿ ಬೆಳೆದದ್ದೆಲ್ಲ ತನ್ನದೇ ಎಂದು ಭಾವಿಸುವ ದನಿಯ ದೃಷ್ಟಿಯು ಮತ್ತೊಂದು ಕಡೆ. ಈ ಮೂರು ದೃಷ್ಟಿಕೋನಗಳು ತಮ್ಮ ತಮ್ಮ ರೀತಿಯಲ್ಲಿ ಪ್ರಾಮಾಣಿಕವಾಗಿದೆ. ಅಂತೆ ಅವುಗಳ ನಡುವಿನ ಘರ್ಷಣೆ ಅದರಿಂದ ಹುಟ್ಟುವ ದುಃಖ ರೋಷಗಳು ನೈಜವಾಗಿದೆ

ಪ್ರಾಚೀನ ಇತಿಹಾಸವನ್ನು ಹೊಂದಿರುವ ಕನ್ನಡ ಸಾಹಿತ್ಯವು ಹಲವಾರು ಸಾಹಿತ್ಯ ಪ್ರಕಾರಗಳ ಮೂಲಕ ತನ್ನ ಒಡಲನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಂತಹ ಸಾಹಿತಿಕ ಪ್ರಕಾರದಲ್ಲಿ ಒಂದು ಮಕ್ಕಳ ಸಾಹಿತ್ಯ. ’ಬೆಳೆಯುವ ಪೈರು ಮೊಳಕೆಯಲ್ಲಿಯೇ’ ಎಂಬಂತೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಒಳ್ಳೆಯ ಸಂಸ್ಕಾರ, ನಡೆ ನುಡಿಗಳನ್ನು ರೂಡಿಸಿಕೊಳ್ಳುವಂತಾಗುವಲ್ಲಿ ಮಕ್ಕಳ ಸಾಹಿತ್ಯದ ಪಾತ್ರವು ಹಿರಿದಾದುದರಲ್ಲಿ ಎರಡು ಮಾತಿಲ್ಲ. ಬರಿ ಮಾತಿನಿಂದ ಏನೇ ಹೇಳಿದರು ಮಕ್ಕಳ ಮೇಲೆ ಅದು ಯಾವುದೇ ರೀತಿಯ ಪರಿಣಾಮಕಾರಿಯಾಗುವುದಿಲ್ಲ. ಬರಿ ಮಾತಿನ ಬದಲಿಗೆ ಕತೆ, ಕವಿತೆ, ನಾಟಕದಿಂದ ಅದೇ ಮಾತನ್ನು ಮಕ್ಕಳಿಗೆ ಹೇಳಿದರೆ ಅದು ಪರಿಣಾಮಕಾರಿಯಾದುದಕ್ಕೆ ಮಹತ್ಮ ಗಾಂಧೀಜಿಯವರು ಸೇರಿದಂತೆ ಹಲವಾರು ನಿದರ್ಶನಗಳಿವೆ. ಅಂತಹ ಮಕ್ಕಳ ಸಾಹಿತ್ಯ ರಚನೆಗೆ ಹಲವಾರು ಮಹಾನ್ ಸಾಹಿತಿಗಳು ತಮ್ಮದೇ ಆದ ಕೊಡುಗೆಯನ್ನು ನೀಡಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.

--------------------------------------------------------------------------------------------


೧೮೯೪-೧೯೪೮. ಶೃಂಗೇರಿ ಬಳಿಯ ಕೊರಡ್ಕಲ್ ಎಂಬಲ್ಲಿ ಜನನ. ಪ್ರಮುಖ ಕೃತಿಗಳು: ಪದ್ಮಾವಳಿ, ಆರೋಗ್ಯ ಪ್ರತಾಪ, ನಂದಾದೀಪ, ಧರ್ಮಸಂಕಟ, ಸುಶೀಲಾ ಸುಂದರ, ಸುಲಭದಲ್ಲಿ ಇಂಗ್ಲೀಷ್ ಮೊದಲಾದವು.

--------------------------------------------------------------------------------------------



Instagram Link :

  / kannadastoryteller  


--------------------------------------------------------------------------------------------



Subscribe For More Videos 👇 :

   / @kannadastoryteller  


--------------------------------------------------------------------------------------------


Listen To The Stories On Spotify : 👇

https://open.spotify.com/show/1WMIu1o...

--------------------------------------------------------------------------------------------



Like & Subscribe To The Channel


--------------------------------------------------------------------------------------------


#kannadastory , #kannadastoryteller , #storyteller, #story,
#kannadiga, #Pustaka, #booklover, #indianstories #Motivational #Indian #kuvempu #poornachandratejaswi #books, #kannadaabimani, #karnataka, #Books, #lovebooks, #instagood, #Devanoorumahadeva, #Dambarubandudu, #instagram, #inspirationalquotes, #instagramstory, #instareels, #kannadareels, #smallstories , #kannadasongs , #kannadaquotes , #kannadamemes , #music #uttarakaranataka , #dailyquotes , #peacequotes , #kannadakavanagalu , #zeekannada , #kavite‌ , #kannada ,
#Kannada , #books ,

Комментарии

Информация по комментариям в разработке