Makkott Mahalakshmi Namme Kaikad

Описание к видео Makkott Mahalakshmi Namme Kaikad

ಸಾವಿರಾರು ವರ್ಷಗಳ ಹಿಂದೆ ಮಕ್ಕೋಟ್ ಎಂಬ ಮುನಿ ಈಗಿನ ಮಡಿಕೇರಿ ತಾಲೂಕು ಕೈಕಾಡ್ ಗ್ರಾಮಕ್ಕೆ ಬಂದು ಕಠೋರ ತಪಸ್ಸನ್ನಾಚರಿಸಲಾರಂಭಿಸಿದ. ಮಕ್ಕೋಟ್ ಮುನಿಯ ತಪಸ್ಸಿಗೆ ಮೆಚ್ಚಿದ ಮಹಾಲಕ್ಷ್ಮಿ ದೇವಿಯು ಕೆರೆಯ ಕೆಂಪು ತಾವರೆಯ ಮೇಲೆ ನಿಂತು ಮುನಿಗೆ ಒಲಿದಳು. ಅಂದಿನಿಂದ ಕೈಕಾಡ್ ಗ್ರಾಮದ ಆ ಕೇರಿಗೆ "ಮಕ್ಕೋಟ್ ಕೇರಿ" ಎಂದು ಹೆಸರಾಯಿತು. ತಾಯಿ ಒಲಿದ ಕೆರೆ "ಮುನಿ ಕೆರೆ" ಆಯಿತು. ಅದಾದ ಕೆಲವರ್ಷಗಳ ನಂತರ ಗ್ರಾಮಸ್ಥರಿಗೆ ಕಾಡಿನ ಪ್ರಾಣಿಗಳು ವಿಚಿತ್ರವಾಗಿ ಕಾಣಿಸಿಕೊಳ್ಳುವುದು, ಅನೇಕ ದೈವಿ ಶಕ್ತಿಗಳು ಗೋಚರವಾಗಲಾರಂಭಿಸಿದವು. ಅಷ್ಟಮಂಗಲ ಪ್ರಶ್ನೆಯಾಯಿತು. ಪ್ರಶ್ನೆಯಲ್ಲಿ ತಾಯಿಗೆ ನೆಲೆಯಿಲ್ಲದೆ ಕಾಡುಪ್ರಾಣಿಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ ಎನ್ನುವುದು ತಿಳಿದುಬಂತು. ಹೀಗೆ ಮಕ್ಕೋಟ್ ಕೇರಿಯಲ್ಲಿ ಮಾಲಕ್ಷ್ಮಿ ನೆಲೆನಿಂತಳು.
ಪ್ರತೀ ಎರಡು ವರ್ಷಗಳಿಗೊಮ್ಮೆ ಕೈಕಾಡಿನಲ್ಲಿ ಮಕ್ಕೋಟ್ ಮಾಲಕ್ಷ್ಮಿ ದೇವರ ಹಬ್ಬ ನಡೆಯುತ್ತದೆ. ಹದಿನೆಂಟು ದಿನಗಳ ಕಾಲ ನಡೆಯುವ ಹಬ್ಬದಲ್ಲಿ ದಿನಕ್ಕೊಂದರಂತೆ ಕಡವೆಯ ಕೊಂಬು, ನವಿಲಿನ ಗರಿ, ಕತ್ತಿ... ಹೀಗೆ ಹದಿನೆಂಟು ಬಗೆಯ ಕುಣಿತಗಳನ್ನು ಮಾಲಕ್ಷ್ಮಿಗೆ ಸಮರ್ಪಿಸಲಾಗುತ್ತದೆ. ಈ ಹದಿನೆಂಟು ದಿನಗಳಲ್ಲಿ ಇಡೀ ಗ್ರಾಮ ಕಠೋರ ವ್ರತವನ್ನು ಧರಿಸುತ್ತದೆ. ಅಕ್ಕಿಯಿಂದ ತಯಾರಿಸಿದ ಪದಾರ್ಥಗಳನ್ನು ಸಂಪೂರ್ಣ ನಿಲ್ಲಿಸುತ್ತದೆ. ಮರ-ಮರದ ಕೊಂಬೆ, ಹಲಸು-ಮಾವಿನ ಮಿಡಿಗಳನ್ನೂ ಕಡಿಯಬಾರದು ಮತ್ತು ಕೊಯ್ಯಬಾರದೆಂಬ ಕಟ್ಟು ಬೀಳುತ್ತವೆ. ಹದಿನೆಂಟು ದಿನಗಳೂ ಗ್ರಾಮಸ್ಥರು ಊರು ಬಿಟ್ಟು ತಂಗದೆ ವ್ರತ ಪಾಲಿಸುತ್ತಾರೆ. ಜಗಳ-ವ್ಯಾಜ್ಯಗಳನ್ನು ಮರೆಯುತ್ತಾರೆ. ಕೊನೆಯ ದಿನ ಹದಿನೆಂಟು ಬಗೆಯ ಕುಣಿತವನ್ನು ಮಾಲಕ್ಷ್ಮಿಗೆ ಅರ್ಪಿಸಿ ಧನ್ಯರಾಗುತ್ತಾರೆ. ೧೯ನೆ ಕುಣಿತವೂ ಒಂದಿದೆ, ಭಸ್ಮಾಸುರನನ್ನು ಬೂದಿ ಮಾಡಿದಾಗ ದೇವಿ ಕುಣಿದ ಕುಣಿತವನ್ನು ಮನುಷ್ಯರು ಕುಣಿಯಬಾರದೆಂಬ ನಂಬಿಕೆ ಗ್ರಾಮಸ್ಥರಲ್ಲಿದೆ. ಪ್ರತಿ ಕುಣಿತದಲ್ಲೂ ದೇವಿ ಶಕ್ತಿಯಿರುವುದು, ವ್ರತಧಾರಿ ಕುಣಿಯುವವರಿಗೆ ಆವೇಶ ಆವರಿಸುವುದು ಮಕ್ಕೋಟ್ ಮಾಲಕ್ಷ್ಮಿ ದೇವಸ್ಥಾನದಲ್ಲಿ ಸಾಮಾನ್ಯ. ಅದು ನೋಡುಗರ ಅನುಭವಕ್ಕೂ ಬರುತ್ತದೆ.
ಪುರಾಣ ಪ್ರಸಂಗವೊಂದರ ಪ್ರತ್ಯಕ್ಷ ಆಚರಣೆ, ಅದಕ್ಕೆ ಬುಡಕಟ್ಟು ಕುಣಿತಗಳನ್ನು ಅಷ್ಟೇ ಶ್ರದ್ಧಾ ಭಕ್ತಿಗಳಿಂದ ಇಂದಿಗೂ ಆಚರಿಸುತ್ತಿರುವುದು ನಮ್ಮ ಜಿಲ್ಲೆಯ ಹೆಮ್ಮೆ.
Santhosh Thammaiah
CONNECTING KODAVAS

Комментарии

Информация по комментариям в разработке