ಕಾಶಿ ವಿಶ್ವನಾಥ ದೇವಸ್ಥಾನ Kashiviswanatha Tempal in Balepete Bangalore

Описание к видео ಕಾಶಿ ವಿಶ್ವನಾಥ ದೇವಸ್ಥಾನ Kashiviswanatha Tempal in Balepete Bangalore

ಪ್ರತಿಯೊಬ್ಬರಿಗೂ ಕಾಶಿಗೆ ಹೋಗಿ ಕಾಶಿ ವಿಶ್ವನಾಥನ ದರ್ಶನ ಮಾಡಿದರೆ ಜನ್ಮ ಪಾವನ ಎಂಬುವುದು ಪ್ರತಿಯೊಬ್ಬರ ನಿರೀಕ್ಷೆ ಮತ್ತು ಆಸೆ ಕನಸು,
ಆದರೆ ಜೀವನದ ಜಂಜಾಟ ಹಲವಾರು ಸಮಸ್ಯೆಗಳಿಂದ ಎಷ್ಟೊ ಜನರು ಹಾಗೂ ಹಿರಿಯರು ಅಲ್ಲಿಗೆ ಹೋಗಲೇ ಆಗದೆ ತುಂಬಾ ಬೇಸರದಲ್ಲಿ ಇರುತ್ತಾರೆ ಆದರೆ ಸರಿ ಸುಮಾರು ಬೆಂಗಳೂರಿನಿಂದಲೇ ಎರಡೂವರೆ ಸಾವಿರ ಕಿಲೋಮೀಟರ್ ದೂರದಲ್ಲಿರುವ ಕಾಶಿ ವಿಶ್ವನಾಥ ಈ ಕ್ಷೇತ್ರಕ್ಕೂ ಮುನ್ನ ಮೂಲ ಮತ್ತು ಮೊದಲ ಕಾಶಿ ವಿಶ್ವನಾಥ ಇರುವುದು ನಮ್ಮ ಕರ್ನಾಟಕದ ಬೆಂಗಳೂರಿನಲ್ಲಿ.

ಬೆಂಗಳೂರಿನ ಹೃದಯ ಭಾಗವಾದ ಮೆಜೆಸ್ಟಿಕ್ ಬಳೆಪೇಟೆ ಸರ್ಕಲ್ ನಲ್ಲಿ ಕಳೆದ 400 ವರ್ಷಗಳ ಹಿಂದೆ ನಮ್ಮ ಪೂರ್ವಜರು ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗಿ ಅಲ್ಲಿಂದ ಕಾಶಿ ವಿಶ್ವನಾಥನ ವಿಗ್ರಹವನ್ನು ಎಲ್ಲಿಯೂ ಕೂಡ ನೆಲಕ್ಕೆ ಇಡದೆ ರಾತ್ರಿ, ಹಗಲು ತ್ಯಾಗ ಮಾಡಿ ತಂದು ಈ ಒಂದು ಬೆಂಗಳೂರಿನ ಬಳೆಪೇಟೆ ಸರ್ಕಲಲ್ಲಿ ಸ್ಥಾಪಿಸಲಾಗಿದೆ.

ಕಾಶಿಯಲ್ಲಿರುವ ವಿಶ್ವನಾಥನಿಗೂ ಒಂದು ಒಂದು ಗುಲಗಂಜಿಗಿಂತಲೂ ಹೆಚ್ಚೆಂದು ಪ್ರಸಿದ್ಧಿ ಹೊಂದಿರುವ ಕಾಶಿ ವಿಶ್ವನಾಥ ಇರುವ ಮೂಲ ಸ್ಥಳ ಅದು ಬೆಂಗಳೂರಿನ ಬಳೆಪೇಟೆ ಸರ್ಕಲ್ ನಲ್ಲಿ ಈ ದೇವಸ್ಥಾನದಲ್ಲಿ ಪ್ರತಿ ಸೋಮವಾರ ಹುಣ್ಣಿಮೆ ಹೀಗೆ ಹಲವಾರು ವಿಶೇಷ ದಿನಗಳಲ್ಲಿ ಅದ್ದೂರಿಯಾಗಿ ವಿಶೇಷ ಪೂಜೆಗಳು, ಅಭಿಷೇಕಗಳು ನಡೆಯುತ್ತವೆ ಪ್ರತಿದಿನ ಕೂಡ ಇಲ್ಲಿ ಪೂಜೆ ಪುನಸ್ಕಾರ, ಅಭಿಷೇಕ ನಡೆಯುತ್ತದೆ ಇಲ್ಲಿ ವಿಶೇಷವಾಗಿ ಪ್ರತಿ ಸೋಮವಾರ ಸಾವಿರಾರು ಜನ ಭಕ್ತರು ಬೆಂಗಳೂರಿನ ನಾನಾ ಭಾಗದಿಂದ ಆಗಮಿಸುವುದರೊಟ್ಟಿಗೆ ಈ ಒಂದು ಕ್ಷೇತ್ರಕ್ಕೆ ಮಾರ್ವಾಡಿಗಳು, ಮುಸ್ಲಿಮರು, ಕ್ರಿಶ್ಚನ್ರು, ಹಿಂದುಗಳು ಎಲ್ಲಾ ಧರ್ಮ ಜನಾಂಗದ ಜನರು ಎಲ್ಲರೂ ಕೂಡ ಬರುವುದು ಈ ದೇಶದ ಅತಿ ದೊಡ್ಡ ವಿಶೇಷತೆ, ಜೊತೆಗೆ ಇಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಯಾವುದೇ ತೊಂದರೆ ಇದ್ದರೂ ಕೂಡ ಈ ದೇವಸ್ಥಾನಕ್ಕೆ ಬಂದು ಸೇವೆಯನ್ನು ಮಾಡಿದ ಹಲವಾರು ಜೀವನದಲ್ಲಿ ಒಂದು ಹೊಸ ಬದಲಾವಣೆ ಮತ್ತು ಪರಿಹಾರ ಸಿಕ್ಕಿದೆ. ಹೀಗೆ ನೂರಾರು ಉದಾಹರಣೆಗಳು ಇಲ್ಲಿವೆ ಸಾಯುವ ಹಂಚಿನಲ್ಲಿದ್ದವರು ಇಲ್ಲಿ ಬಂದು ಅಭಿಷೇಕ ಮಾಡಿಸಿ ಬದುಕಿದ್ದಾರೆ ಕೆಲವರು ಬರಲು ಆಗದಿದ್ದವರು ಇಲ್ಲಿಗೆ ಫೋನ್ ಮುಖಾಂತರ ಕರೆ ಮಾಡಿ ಅವರೇ ಹೆಸರಿನಲ್ಲಿ ಅಭಿಷೇಕ ಮಾಡಿಸಿ ಗುಣವಾಗಿ ಈಗ ಪ್ರತಿ ವಾರ ಪ್ರತಿ ದಿನ ದೇವಸ್ಥಾನಕ್ಕೆ ಪೂಜಾ ಸಮಯದಲ್ಲಿ ಆಗಮಿಸುವ ಹತ್ತಾರು ಜನಗಳು ಬರುತ್ತಿರುವ ನಿದರ್ಶನಗಳಿವೆ ಅಂತ ವಿಶೇಷ ಮತ್ತು ವಿಶಿಷ್ಟವಾದಂತ ಕಾಸಿ ವಿಶ್ವನಾಥನ ಮೂಲ ನೆಲೆ ನಮ್ಮ ಬೆಂಗಳೂರಿನಲ್ಲೇ ಇದೆ ನಿಮ್ಮ ಯಾವುದೇ ಕಷ್ಟಗಳಿಗೆ ಒಮ್ಮೆ ಇಲ್ಲಿ ಭೇಟಿ ಕೊಡಿ

............................................................
location



ಶ್ರೀ ಕಾಶಿ ವಿಶ್ವನಾಥೇಶ್ವರ ದೇವಸ್ಥಾನ
ಬಳೆಪೇಟೆ ಸರ್ಕಲ್, ಬೆಂಗಳೂರು
............................................................

Комментарии

Информация по комментариям в разработке