Bidenu Ninna Paada - Video Song | Naa Ninna Bidalare | S Janaki | Lakshmi | Ananthnag

Описание к видео Bidenu Ninna Paada - Video Song | Naa Ninna Bidalare | S Janaki | Lakshmi | Ananthnag

Song: Bidenu Ninna Paada - HD Video.
Kannada Movie: Naa Ninna Bidalare
Actor: Lakshmi, Ananthnag
Music: Rajan-Nagendra
Singer: S Janaki
Lyrics: Chi Udayashankar
Director: Vijay
Year: 1979

Bidenu Ninna Paada Raghavendra Song Lyrics

ರಾಘವೇಂದ್ರ ನೀ ಮೌನವಾದರೆ ನನ್ನ ಗತಿಯೇನು
ನಿನ್ನ ಕರುಣೆಯ ಜ್ಯೋತಿ ಬಾಳ ಬೆಳಗುವತನಕಾ....
ಬಿಡೆನು ನಿನ್ನ ಪಾದ ಬಿಡೆನು ನಿನ್ನ ಪಾದ
ಭೂಮಿಯು ಬಿರಿಯಲಿ ಗಗನವು ನಡುಗಲಿ
ಭೂಮಿಯು ಬಿರಿಯಲಿ ಗಗನವು ನಡುಗಲಿ ಸಾಗರ ಕೆರಳಲಿ ಗಿರಿಗಳು ಉರುಳಲಿ
ಬಿಡೆನು ನಿನ್ನ ಪಾದ ಬಿಡೆನು ನಿನ್ನ ಪಾದ
ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ
ಪತಿಯ ಪ್ರಾಣವನು ಉಳಿಸುವ ತನಕ ಅಂಧಕಾರವನು ಅಳಿಸುವ ತನಕ
ಬಿಡೆನು ನಿನ್ನ ಪಾದ ನಿನ್ನ ನಾಮ ವೇದ
ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ

ಮೂಡಿದ ಹೂಗಳು ಮುದುಡಿ ಹೋಗುತ ಬಾಡುತಿದೆ ಬಾಡುತಿದೆ
ಅರಿಶಿನ ಕುಂಕುಮ ಬೆವರಲಿ ಬೆರೆತು ಕರಗುತಿದೆ ಕರಗುತಿದೆ
ನನ್ನ ಕೊರಳ ಮಂಗಲ್ಯವು ಕಳಚಿ ಜಾರುತಿದೆ ಜಾರುತಿದೆ
ಬಾಳಿನ ಜ್ಯೋತಿಯು ಗಾಳಿಗೆ ಸಿಲುಕಿ ಆರುತಿದೆ ಅರುತಿದೆ
ಮೊರೆಯ ಕೇಳದೆ ಕರುಣೆ ತೋರದೆ ಪ್ರಾಣ ಉಳಿಸದೆ ನನ್ನ ಹರಸದೆ
ಬಿಡೆನು ನಿನ್ನ ಪಾದ ಬಿಡೆನು ನಿನ್ನ ಪಾದ
ಭೂಮಿಯು ಬಿರಿಯಲಿ ಗಗನವು ನಡುಗಲಿ ಸಾಗರ ಕೆರಳಲಿ ಗಿರಿಗಳು ಉರುಳಲಿ
ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ||

ದುಷ್ಟ ಶಕ್ತಿಯು ಅಟ್ಟಹಾಸದಲಿ ನಗುತಲಿದೆ ನಲಿಯುತಿದೆ
ದಮನ ಮಾಡುವ ದೈವ ಶಕ್ತಿಯು ಕಾಣಿಸದೆ ಕೆಣಕುತಿದೆ
ಅಳುವ ಹೆಣ್ಣಿನ ಅರ್ಧನಾದವು ಕೇಳಿಸದೆ ದಯೆಬರದೆ
ದಾರಿಕಾಣೆನು ರಾಘವೇಂದ್ರನೆ ನೀ ಬರದೆ ಕೈ ಬಿಡದೆ
ಸಹಿಸೋ ಶಕ್ತಿಯ ನೀನು ದಹಿಸದೆ ದೈವ ಶಕ್ತಿಯ ಮಹಿಮೆ ತೋರದೆ
ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ
ಪತಿಯ ಪ್ರಾಣವನು ಉಳಿಸುವ ತನಕ ಅಂಧಕಾರವನು ಅಳಿಸುವ ತನಕ
ಬಿಡೆನು ನಿನ್ನ ಪಾದ ನಿನ್ನ ನಾಮ ವೇದ
ರಾಘವೇಂದ್ರ , ರಾಘವೇಂದ್ರ ಯೋಗೀಂದ್ರ ಯೋಗೀಂದ್ರ ರಾಘವೇಂದ್ರ …ರಾಘವೇಂದ್ರ ಆಆಆ...…….

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Naa Ninna Bidalare – ನಾ ನಿನ್ನ ಬಿಡಲಾರೆ1979SGV

Комментарии

Информация по комментариям в разработке