Pt.Mallikarjuna Mansoor, Hindustani Classical Vocalist, interviewed by Dr Vasantha Kavali

Описание к видео Pt.Mallikarjuna Mansoor, Hindustani Classical Vocalist, interviewed by Dr Vasantha Kavali

Mansur was well known for his command over a large number of rare (aprachalit) ragas such as Shuddh Nat, Asa Jogiya, Hem Nat, Lachchhasakh, Khat, Shivmat Bhairav, Kabir Bhairav, Bihari, Sampoorna Malkauns, Lajawanti, Adambari Kedar, Ek Nishad Bihagda and Bahaduri Todi, as well as his constant, mercurial improvisations in both melody and metre without ever losing the emotional content of the song. Initially, his voice and style resembled that of Manji Khan and Narayanrao Vyas, but gradually he developed his own style of rendition.

He also remained music director with His Master's Voice (HMV) and later music advisor to All India Radio's Dharwad station.[5]

ಮಲ್ಲಿಕಾರ್ಜುನ ಭೀಮರಾಯಪ್ಪ ಮನ್ಸೂರ್ (೧೯೧೧–೧೯೯೨) ಒಬ್ಬ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ. ಇವರು ಜೈಪುರ-ಅತ್ರೋಲಿ ಘರಾನಾದ 'ಖಯಾಲಿ' ಶೈಲಿಯ ಸಂಗಿತಗಾರರಾಗಿದ್ದರು.[೧] ಇವರಿಗೆ ೩ ಪದ್ಮ ಪ್ರಶಸಿಗಳನ್ನು ನೀಡಿ ಭಾರತ ಸರ್ಕಾರ ಗೌರವಿಸಿದೆ: ೧೯೭೦ರಲ್ಲಿ ಪದ್ಮಶ್ರೀ, ೧೯೭೬ರಲ್ಲಿ ಪದ್ಮ ಭೂಷಣ, ಮತ್ತು ೧೯೯೨ರಲ್ಲಿ ಪದ್ಮವಿಭೂಷಣ.[೨]

ಮಲ್ಲಿಕಾರ್ಜುನ ಮನ್ಸೂರ್' ಕನ್ನಡ ನಾಡು ಕಂಡ ಶ್ರೇಷ್ಠ ಸಂಗೀತ ಪ್ರತಿಭೆ. ಇವರು ಹಾಡಿದ್ದು ಹಿಂದೂಸ್ತಾನಿ ಖಯಾಲ್ ಸಂಗೀತ ಶೈಲಿಯ ಜೈಪುರಿ-ಅತ್ರೊಲಿ ಘರಾಣೆಯಯಲ್ಲಿ. ನೀಲಕಂಠ ಬುವಾ ಮತ್ತು ಪ್ರಖ್ಯಾತ ಸಂಗೀತಕಾರ ಅಲ್ಲಾದಿಯಾ ಖಾನ್ ಅವರ ಪುತ್ರರಾದ ಮಂಜಿ ಖಾನ್ ಹಾಗೂ ಬುರಜಿ ಖಾನ್ ಇವರ ಸಂಗೀತ ಗುರುಗಳಲ್ಲಿ ಪ್ರಮುಖರಾಗಿದ್ದಾರೆ. ಸುಮಾರು ೬೦ ವರುಷಗಳಿಗಿಂತ ಹೆಚ್ಚು ಕಾಲ ದೇಶ-ವಿದೇಶಗಳಲ್ಲಿ ಸಂಗೀತ ಸುಧೆಯನ್ನು ಹರಿಸಿದ ಮಹಾನ್ ಸಂಗೀತಗಾರ ಮಲ್ಲಿಕಾರ್ಜುನ ಮನ್ಸೂರ್. ಬಾಲ್ಯದಲ್ಲಿ ನಾಟಕಗಳಲ್ಲಿ ಪಾತ್ರ ಮಾಡಿ, ಪ್ರಹ್ಲಾದ, ಧ್ರುವ, ನಾರದ ಮೊದಲಾದ ಪಾತ್ರಗಳ ಅಭಿನಯಕ್ಕಾಗಿ ಅಪಾರ ಜನಪ್ರಿಯತೆ ಗಳಿಸಿದರೂ, ಸಂಗೀತದ ಒಲವು ಅವರನ್ನು ಸಂಗೀತದ ಸಾಧನೆಗೆ ಕರೆದೊಯ್ಯಿತು. ಬಡ ಕುಟುಂಬದಿಂದ ಬಂದ ಮಲ್ಲಿಕಾರ್ಜುನ ಮನ್ಸೂರ್, ಸರಳ ಜೀವನ, ವಿನಯತೆ ಮತ್ತು ನೇರನುಡಿಗಾಗಿ ಪ್ರಸಿದ್ಧರು. ಸಂಗೀತವೇ ನನ್ನ ಜೀವನ, ನನ್ನ ಕಾಯಕ ಮತ್ತು ಪೂಜೆ ಎಂದು ಹೇಳಿ, ಬಾಳಿದವರು ಮಲ್ಲಿಕಾರ್ಜುನ ಮನ್ಸೂರ್. ಮಹಾತ್ಮ ಗಾಂಧೀಜಿ ಮತ್ತು ಧಾರವಾಡದ ಮುರುಘಾ ಮಠದ ಮೃತ್ಯುಂಜಯ ಮಹಾಸ್ವಾಮಿಗಳವರಿಂದ ಪ್ರಭಾವಿತರಾದ ಇವರು, ವಚನ ಸಂಗೀತಕ್ಕಾಗಿ ನೀಡಿದ ಕೊಡುಗೆ ಅಪಾರ.

ಇವರು ತಮ್ಮ ಜೀವನ ಚಿತ್ರವನ್ನು "ನನ್ನ ರಸಯಾತ್ರೆ" ಎಂಬ ಹೆಸರಿನ ಪುಸ್ತಕದಲ್ಲಿ ದಾಖಲಿಸಿದ್ದಾರೆ. ದೇಶದ ಪ್ರತಿಷ್ಠತ ಪ್ರಶಸ್ತಿ ಕಾಳಿದಾಸ ಸಮ್ಮಾನ್ ಪಡೆದ ಪ್ರಥಮ ಕನ್ನಡಿಗ ಸಂಗೀತಗಾರರು ಇವರು. ಕರ್ನಾಟಕ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿದೆ.ಭಾರತ ಸರಕಾರ ಇವರಿಗೆ ಪದ್ಮವಿಭೂಷಣಪ್ರಶಸ್ತಿಯನ್ನಿತ್ತು ಗೌರವಿಸಿದೆ.

Комментарии

Информация по комментариям в разработке