ಶಿವಲಿಂಗ ಪೂಜೆ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! How to do Shiva Linga Pooja at Home

Описание к видео ಶಿವಲಿಂಗ ಪೂಜೆ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! How to do Shiva Linga Pooja at Home

ಶಿವಲಿಂಗ ಪೂಜೆ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! How to do Shiva Linga Pooja at Home
#shivalinga #lordshiva #shivapooja

ಶಿವ ನಾಮಾವಳಿ ಮಂತ್ರ:
|| ಶ್ರೀ ಶಿವಾಯ ನಮಃ ||
|| ಶ್ರೀ ಶಂಕರಾಯ ನಮಃ ||
|| ಶ್ರೀ ಮಹೇಶ್ವರಾಯ ನಮಃ ||
|| ಶ್ರೀ ಸಾಂಬಸದಾಶಿವಾಯ ನಮಃ ||
|| ಶ್ರೀ ರುದ್ರಾಯ ನಮಃ ||
|| ಓಂ ಪಾರ್ವತಿಪತಯೇ ನಮಃ ||
|| ಓಂ ನಮೋ ನೀಲಕಂಠಾಯ ನಮಃ ||

ಶಿವನಿಗೆ ಆರತಿ ಮಾಡಿದ ನಂತರ ಕ್ಷಮೆ ಮಂತ್ರವನ್ನು ಪಠಿಸಬೇಕು. ಅಂದರೆ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬೇಕು.
ಮಹಾಮೃತ್ಯುಂಜಯ ಮಂತ್ರ:
"ಓಂ ತ್ರಯಂಬಕಂ ಯಜಾಮಹೇ
ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮೇವ ಬಂಧನಾನ್
ಮೃತ್ಯೊರ್ಮುಕ್ಷೀಯ ಮಾಂಮೃತಾತ್"
ಶಿವ ಪೂಜೆಯಿಂದ ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯ ಹೆಚ್ಚಾಗುತ್ತದೆ.
ಶಿವ ಪೂಜೆಯನ್ನು ಮಾಡುವುದರಿಂದ ಉತ್ತಮ ಆರೋಗ್ಯ ಪ್ರಾಪ್ತವಾಗುತ್ತದೆ. ಮತ್ತು ಮಾರಣಾಂತಿಕ ಕಾಯಿಲೆಗಳಿಂದ ರಕ್ಷಣೆಯನ್ನು ಪಡೆಯಲು ಶಿವ ಪೂಜೆಯನ್ನು ಮಾಡಬೇಕು.
ಶಿವ ಪೂಜೆ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ನೆಲೆಯಾಗುತ್ತದೆ. ಕುಟುಂಬದ ಸದಸ್ಯರಲ್ಲಿ ಸಂತೋಷ ಮತ್ತು ಐಕ್ಯತೆ ವೃದ್ಧಿಸುತ್ತದೆ.ಅವಿವಾಹಿತ ಮಹಿಳೆಯರು ಸೋಮವಾರ ಸೇರಿದಂತೆ ಇನ್ನಿತರ ದಿನಗಳಲ್ಲಿ ಶಿವನನ್ನು ಪೂಜಿಸುವುದರಿಂದ ಉತ್ತಮ ಪತಿಯನ್ನು ಪಡೆಯುವಿರಿ.
ದಂಪತಿಗಳು ಶಿವ ಪೂಜೆಯನ್ನು ಮಾಡಿ, ಸೋಮವಾರ ವ್ರತವನ್ನು ಕೈಗೊಳ್ಳುವುದರಿಂದ ಅವರ ಸಂಬಂಧದಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಾಗುತ್ತದೆ.
ಶಿವನನ್ನು ಪೂಜಿಸುವುದರಿಂದ ಆ ವ್ಯಕ್ತಿ ಮರಣದ ನಂತರ ಮೋಕ್ಷವನ್ನು ಪಡೆಯುವನು.
ವಿವಾಹಿತ ಮಹಿಳೆಯರು ತಮ್ಮ ಗಂಡನ ಮತ್ತು ಮಕ್ಕಳ ಉತ್ತಮ ಆರೋಗ್ಯಕ್ಕೆ ಹಾಗೂ ಯೋಗಕ್ಷೇಮಕ್ಕೆ ಶಿವ ಪೂಜೆಯನ್ನು ಮಾಡುತ್ತಾರೆ.
ಭಕ್ತರ ಕಷ್ಟಗಳನ್ನು ನಿವಾರಿಸುತ್ತಾ, ಭಕ್ತರ ಕಲ್ಯಾಣಕ್ಕಾಗಿಯೇ ಇರುವ ಮಹಾನ್ ಶಕ್ತಿ ದೇವ ಶಿವ. ಸೃಷ್ಟಿಕರ್ತ ಶಿವನನ್ನು ನೆನೆದರೆ ಯಾವುದೇ ಭಯ ಹಾಗೂ ಕಷ್ಟಗಳು ಇರುವುದಿಲ್ಲ. ಸರಳ ಪೂಜೆ ಹಾಗೂ ನಿರ್ಮಲ ಭಕ್ತಿಗೆ ಒಲಿಯುವ ದೇವ. ಅಲಂಕಾರ ಹಾಗೂ ಆಡಂಬರದ ಜೀವನವನ್ನು ಬಯಸದೆ ಸರಳ ಚಿಂತನೆ ಹಾಗೂ ವಿಭೂತಿ ಧಾರಕನಾದ ಶಿವನು ಭಕ್ತರ ಕಷ್ಟಗಳನ್ನು ಬಹುಬೇಗ ನಿವಾರಿಸುವನು.

Комментарии

Информация по комментариям в разработке