ಇವರಂತೂ ನಾಗಸ್ವರ ಮಾಂತ್ರಿಕರಪ್ಪ | ಕಲಾಮಯಂ ಉಡುಪಿ

Описание к видео ಇವರಂತೂ ನಾಗಸ್ವರ ಮಾಂತ್ರಿಕರಪ್ಪ | ಕಲಾಮಯಂ ಉಡುಪಿ

ಇವರಂತೂ ನಾಗಸ್ವರ ಮಾಂತ್ರಿಕರಪ್ಪ. ಜಾನಪದ ಸಂಗೀತ ಪರಿಕರಗಳೊಂದಿಗೆ ಬೆರೆತು ಹಾಡಿದಾಗ ಹೃದಯವೇ ಕರಗಿ ನೀರಾಗಬೇಕು. ಹಾಗಿದೆ.

ಅದರ ಜೊತೆಗೆ ಪ್ರತೀ ಹಾಡನ್ನು ತಲೆದೂಗುತ್ತಾ,ಚಪ್ಪಾಳೆ ತಟ್ಟುತ್ತಾ, ಸಂಗೀತವನ್ನು‌ ಅನುಭವಿಸುವ ಈ ತಂಡವೇ ಜಾನಪದ ಹಾಡಿನ ಸವಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಷ್ಟೂ ಹೊತ್ತು ಮೊಬೈಲನ್ನು ಮುಟ್ಟದ ಯುವಕ ಯುವತಿಯರ ತಂಡ ಜಾನಪದ ಹಾಡನ್ನು ಹೀಗೂ ಅನುಭವಿಸಬಹುದೆಂದು ಹೇಳಿಕೊಡುತ್ತದೆ.

ಇಡೀ ಕರ್ನಾಟಕದ ವಿದ್ಯಾರ್ಥಿಗಳು, ಯುವಕ ಯುವತಿಯರು ಕಲಾಮಯಂ ತಂಡದ ಈ ಪ್ರದರ್ಶನ ನೋಡಲೇಬೇಕು. ನಿಜಕ್ಕೂ ಕರಗಿ ಹೋಗ್ತೀರಿ. ಮೊಬೈಲು, ಒತ್ತಡದಿಂದ ಒಂದಷ್ಟು ದೂರ ಹೋಗಿ ಬಿಡುತ್ತೀರಿ. ನೃತ್ಯದಲ್ಲಿ ಹಲವು ಸಮಯದಿಂದ ತೊಡಗಿಕೊಂಡಿದ್ದ ಈ ತಂಡದ ಸಂಗೀತ ಪ್ರಸ್ತುತಿ ಹೊಸತು, ಇತ್ತೀಚೆಗಷ್ಟೇ ಆರಂಭಿಸಿದ್ದು. ನಾವು ಉಡುಪಿಯ ಕಂಡೀರಾ ದಲ್ಲಿ ಅವರ ನಾಲ್ಕೈದು ವೀಡಿಯೋಗಳನ್ನು ಹಾಕಿದ್ದೆವು. ಲಕ್ಷಾಂತರ ಜನ ಇಷ್ಟ ಪಟ್ಟರು. ನೂರಾರು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದರು. ನನಗೊಂದು ಖುಷಿ, ವೀಡಿಯೋಗೆ ಬಂದಿದ್ದ ಎಲ್ಲಾ ಕಮೆಂಟುಗಳನ್ನು ನಾನು ಓದಿರಲಿಲ್ಲ. ಆದರೆ ಆ ತಂಡದ ಪ್ರತಿಯೊಬ್ಬರೂ ಓದಿದ್ದಾರೆ. ನಿನ್ನೆಯದು ಕೇವಲ ಮೂರನೇ ಪ್ರದರ್ಶನ. ಮೊದಲ ವೀಡಿಯೋದಲ್ಲಿ ಜನ ಕೊರತೆ ಅಂತ ಹೇಳಿದ್ದೆಲ್ಲವನ್ನೂ ಈ ಹುಡುಗರ ತಂಡ ಬದಲಾಯಿಸಿಕೊಂಡಿದೆ. ಮುಖ್ಯವಾಗಿ ಮೊದಲನೆಯ ಪ್ರದರ್ಶನದಲ್ಲಿ ಎಲ್ಲರೂ ಟೀ ಶರ್ಟು ಜೀನ್ಸ್ ಪ್ಯಾಂಟ್ ಧರಿಸಿದ್ದರು. ಒಂದಷ್ಟು ಜನ ಸಾಂಪ್ರದಾಯಿಕ ಉಡುಗೆ ಇದ್ದರೆ ಚೆಂದ ಅಂತ ಕಮೆಂಟು ಹಾಕಿದ್ದರು. ಸಾಹಿತ್ಯ ಕೇಳಿಸಲ್ಲ, ಹಿಮ್ಮೇಳವೇ ಜಾಸ್ತಿಯಾಯ್ತು ಎಂದಾಗಲೂ ಬೇಸರಿಸದೆ ಪ್ರದರ್ಶನದಿಂದ ಪ್ರಸರ್ಶನಕ್ಕೆ ಸುಧಾರಣೆ, ಬದಲಾವಣೆ ಕಂಡುಕೊಳ್ಳುತ್ತಿರುವ, ಕಲಿಯುತ್ತಿರುವ, ನಮ್ನನ್ನೂ ಕುಣಿಸುತ್ತಿರುವ ಕಲಾಮಯಂ ತಂಡಕ್ಕೆ ಅಭಿನಂದನೆಗಳು. ಅಧಿಕೃತವಾಗಿ ಒಂದು ತಂಡವಾಗಿ ಒಂದು ವರ್ಷವೂ ಆಯಿತಂತೆ. ಈ ತಂಡ ಶಾಶ್ವತವಾಗಲಿ.

ಕಲಾಮಯಂ ತಂಡಕ್ಕೆ ಅಂಬಲಪಾಡಿಯ ನೆಲೆ ಮನೆಯ ಪ್ರೋತ್ಸಾಹ ದೊಡ್ಡದು. ವೀಡಿಯೋಗಳನ್ನು ನೋಡಿ ಪ್ರೋತ್ಸಾಹ ನೀಡಿದ ನಿಮ್ಮ ಪ್ರೀತಿಗೆ ಋಣಿಗಳು.

ಮಂಜುನಾಥ ಕಾಮತ್

Комментарии

Информация по комментариям в разработке