hennu makkalige madallakki/ ಹೆಣ್ಣು ಮಕ್ಕಳಿಗೆ ಮಾಡಲ್ಲಕ್ಕಿ ತುಂಬುವ ಪೂರ್ತಿ ಮಾಹಿತಿ

Описание к видео hennu makkalige madallakki/ ಹೆಣ್ಣು ಮಕ್ಕಳಿಗೆ ಮಾಡಲ್ಲಕ್ಕಿ ತುಂಬುವ ಪೂರ್ತಿ ಮಾಹಿತಿ

#ಹೆಣ್ಣುಮಕ್ಕಳಿಗೆಮಾಡಲ್ಲಕ್ಕಿ
#hennu_makkalige_madallakki
#Hindu_rituals


ಹೆಣ್ಣು ಮಕ್ಕಳಿಗೆ ಮಡಲಕ್ಕಿ ಕಟ್ಟುವ ಬಗ್ಗೆ, ಯಾವಾಗ ಕಟ್ಟಬೇಕು, ಯಾವ ದಿನ ಕಟ್ಟಿದರೆ ಒಳ್ಳೇದು, ಯಾರಿಗೆ ಕಟ್ಟಬೇಕು ಹಾಗು ಮಡ್ಲಕ್ಕಿಯಾ ಮಹತ್ವವನ್ನು ಮಲ್ಲಮ್ಮ ಅಜ್ಜಿ ಅವರಿಂದ ಇಲ್ಲಿ ತಿಳೀರಿ,

ಮಡಲಕ್ಕಿಯ (ಮಡಿಲ ಅಕ್ಕಿ) (ಮಡ್ಲಕ್ಕಿ) ಮಹತ್ವ:
ಮಡ್ಲಕ್ಕಿ ಎಂದರೆ ತವರಿನ ಸಿರಿ. ಈ ಸಿರಿಯು ಎಲ್ಲ ಹೆಣ್ಣು ಮಕ್ಕಳಿಗೂ ಸಿಗುವಂತಹ ಸಿರಿ.
ಪ್ರತಿ ಯೊಬ್ಬ ಹೆಣ್ಣು ಮಗಳು ತವರಿನಲ್ಲೇ ಹುಟ್ಟಿ, ಹಳುಂಡು, ಆಟವಾಡಿ, ಬೆಳೆದು, ಶಾಲಾ ಕಾಲೇಜುಗಳನ್ನೂ ಮುಗಿಸಿ, ತಂದೆ ತಾಯಿ ತೋರಿಸಿದ ಹುಡುಗನನ್ನೇ ಮನ ಮೆಚ್ಚಿ ಮದುವೆಯಾಗಿ ತವರಿನಿಂದ ಹೊರಡುತ್ತಾಳೆ.

ಹೊರಡುವಾಗ ತನ್ನ ಹೆತ್ತು ಹೊತ್ತು ಸಾಕಿ ಸಲಹಿದವರನ್ನು, ಸ್ನೇಹಿತರನ್ನು, ತನ್ನ ಸಹೋದರ ಸಹೋದರಿಯರನ್ನು ಬಿಟ್ಟು ಹೊರಡುತ್ತಾಳೆ. ದೊಡ್ಡಮ್ಮ ದೊಡಪ್ಪ, ಚಿಕ್ಕಮ್ಮ ಚಿಕ್ಕಮ್ಮ, ಅಪ್ಪ ಅಮ್ಮನ ಕಡೆಯವರ ಬಂಧು ಬಳಗದವರನ್ನು ಬಿಟ್ಟು, ತಲೆ ಬಗ್ಗಿಸಿ ತಾಳಿ ಕಟ್ಟಿಸಿಕೊಂಡು, ಗಂಡನ ಜೊತೆ ಸಪ್ತಪದಿ ತುಳಿದು, ಗಂಡನೇ ಸರ್ವಸ್ವಯೆಂದು ಗಂಡನ ಬಂಧು ಬಳಗದವರೊಂದಿಗೆ ಹೊರಡುತ್ತಾಳೆ.

ಹೊಸ ಪ್ರಪಂಚ, ಹೊಸ ಜನ, ಹೊಸ ವಾತಾವರ್ಣ, ಎಲ್ಲವೂ ಹೊಸದು, ಹೀಗೆ ಎಲ್ಲರನ್ನು ಪ್ರೀತಿಂದ ಸಂಬಾಳಿಸಿಕೊಂಡು ನಿಭಾಹಿಸುತ್ತಾ ಗೃಹಿಣಿಯಾಗಿ ಜೀವನ ನಡೆಸುತ್ತಾಳೆ. ಈ ಹೆಣ್ಣಿಗೆ ತವರಿನಿಂದ ಯಾವ ಸಿರಿ ಸಂಪತ್ತು ಸಿಗದಿದ್ದರೂ, ಮದಲಕ್ಕಿಯ ಸಿರಿ ಸಿಗಬೇಕು. ತವರಿನವರು ತಂಪಾಗಿ, ಸಂತೋಷವಾಗಿ, ತ್ರುಪ್ತಿಯಾಗಿ, ಯಾವ ತೊಂದರೆ ಬಂದರೂ ಸಹಿಸಿಕೊಂಡು ಹೋಗುವಂಥಹುದು ಈ ತವರಿನ ಸಿರಿ. ಈ ಸಿರಿಗೆ ಬೆಲೆಯನ್ನೇ ಕಟ್ಟಲು ಆಗುವುದಿಲ್ಲ.

ಮಾನವನಿಗೆ ಮಾತ್ರವಲ್ಲ, ಆ ದೇವನುದೆವತೆಗಳಿಗೆ ಈ ಸಿರಿ ಬೇಕು. ಶಿವನ ಹೆಂಡತಿ ಪಾರ್ವತಿಯು ವರ್ಷಕ್ಕೆ ಒಂದು ಸಾರಿ ತವರಿಗೆ ಬಂದು ಸಿಹಿ ಊಟ ಮಾಡಿ, ಹೊಸ ಬಟ್ಟೆ ಉಟ್ಟು, ಬಾಗಿನವನ್ನು ಸ್ವೀಕರಿಸುತ್ತಾಳೆ. ಆಗ ಮಗ ಗಣೇಶ ಅಮ್ಮನ್ನನ್ನು ಕರೆದುಕೊಂಡು ಹೋಗಲು ಅಮ್ಮನ ತವರಿಗೆ ಬರುತ್ತಾನೆ. ಅವನೂ ಕೂಡ ಅವನಿಗೆ ಇಷ್ಟವಾಗುವಂತಹ ತಿಂಡಿ ತಿನಿಸುಗಳನ್ನು ಊಟ ಮಾಡಿ ತನ್ನ ಗೆಳೆಯರೊಂದಿಗೆ ತನ್ನ ಎಲ್ಲಾ ಚಟುವಟಿಕೆಗಳ್ಳನ್ನು ತನ್ನ ಮಹಿಮೆಯನ್ನು ತೋರಿಸುವ ಮನಸ್ಸು. ಆಗ ತವರಿನಲ್ಲಿ ಎಲ್ಲರೂ ಗಣೇಶ ನನ್ನಾ, ಬೀದಿ ಗಳಲ್ಲಿ, ಮನೆಗಳಲ್ಲಿ, ಆಫೀಸ್ ಗಳಲ್ಲಿ, ಹೀಗೆ ತನ್ನ ಮಹಿಮೆಯನ್ನು ಮಹತ್ವವನ್ನು ತೋರಿಸಿ, ತನ್ನ ತಾಯಿ ಯನ್ನು ಒಳ್ಳೆ ದಿನ ನೋಡಿ ಕರೆದುಕೊಂಡು ಹೊರಡುತ್ತಾನೆ.

ಹೊರಡುವಾಗ ಪ್ರತಿ ಒಬ್ಬ ಗೃಹಿಣಿಯೂ ಗೌರಿ, ಗಣೇಶನಿಗೆ ಮಡ್ಲಕ್ಕಿಯನ್ನು, ಬುತಿಯನ್ನು, ಕೊಟ್ಟು ಕಳಹಿಸುತ್ತಾರೆ.
ಅದೇ ಸಂಪ್ರದಾಯವಾಗಿ ಹಿರಿಯರು ಎಲ್ಲ ಹೆಣ್ಣು ಮಕ್ಕಳಿಗೆ ತವರಿನಿಂದ ಮಡ್ಲಕ್ಕಿಯನ್ನು ಕಟ್ಟಿ, ಸಿಹಿ ತಿಂಡಿಗಳನ್ನು ಕೊಟ್ಟು ಕಳುಹಿಸುವ ವಾಡಿಕೆ ಪದ್ದತಿ ಮಾಡಿಕೊಂಡು ಬಂದಿದ್ದಾರೆ. ಅದೇ ಪದ್ದತಿ ಈಗಲೂ ಇದೆ. ಮುಂದೆಯೂ ಇರುತ್ತದೆ.

ಮಡ್ಲಕ್ಕಿಯನ್ನು ಯಾವಾಗ ಕಟ್ಟಬೇಕು:
for more details please visit http://www.cookinggranny.com/madalakki/

thanks for watching

please like, share, like and comment.
Also follow mallamma ajji on instagram, facebook and twitter
please visit www.cookinggranny.com

To order amma's products click on the link below
https://wa.me/c/917337602455

or what's app to 7337602455

Комментарии

Информация по комментариям в разработке