volg-2 kukke Subramanya|| sarpa samskara|| full details of Pooja|| ಕುಕ್ಕೆಸುಬ್ರಹ್ಮಣ್ಯ ||ಸರ್ಪಸಂಸ್ಕಾರ 🙏

Описание к видео volg-2 kukke Subramanya|| sarpa samskara|| full details of Pooja|| ಕುಕ್ಕೆಸುಬ್ರಹ್ಮಣ್ಯ ||ಸರ್ಪಸಂಸ್ಕಾರ 🙏

volg-2 kukke Subramanya|| sarpa samskara|| full details of Pooja|| ಕುಕ್ಕೆಸುಬ್ರಹ್ಮಣ್ಯ ||ಸರ್ಪಸಂಸ್ಕಾರ 🙏


ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ
ಈ ಕ್ಷೇತ್ರದಲ್ಲಿ ಸರ್ಪ ಸಂಸ್ಕಾರ ಆಶ್ಲೇಷ ಬಲಿ ಶ್ರೀರಾಭಿಷೇಕ ಹೀಗೆ ಅನೇಕವಾದ ಅಂತಹ ಪೂಜಾ ನಿಧಿಗಳು ಇಲ್ಲಿದೆ ಇಲ್ಲಿ ಮುಖ್ಯವಾಗಿ ಸರ್ಪಸಂಸ್ಕಾರ ಪೂಜೆ ಬಹಳ ಮಹತ್ವವಾದಂತಹ ಪೂಜೆಯಾಗಿದೆ.
ಪ್ರತಿಯೊಬ್ಬರ ಜೀವನದಲ್ಲಿಯೂ ಸರ್ಪದೋಷಗಳು ಮಹಾ ಸರ್ಪ ದೋಷಗಳು ಕಾಲ ಸರ್ಪದೋಷಗಳು ಪಿತೃ ದೋಷಗಳು ರಾಹು ದೋಷಗಳು ಕುಜ ದೋಷಗಳು
ಹೀಗೆ ಅನೇಕ ವಿಧವಾದ ಅಂತಹ ದೋಷಗಳಿಂದ ಆರೋಗ್ಯದಲ್ಲಿ ತೊಂದರೆ ವಿವಾಹ ವಿಳಂಬ ಮಕ್ಕಳಾಗದೆ ಇರೋದು ಕುಟುಂಬದಲ್ಲಿ ಕಲಹ ಆರೋಗ್ಯ ಸಮಸ್ಯೆ ವಿದ್ಯಾಭ್ಯಾಸ ಸಮಸ್ಯೆ ಮನ ಶಾಂತಿ ನೆಮ್ಮದಿ ಇಲ್ದಿರೋದು. ಹೀಗೆ ಅನೇಕ ಸಮಸ್ಯೆಗಳು ಕಾಡುತ್ತಿರುತ್ತೆ. ಇದಕ್ಕೆಲ್ಲ ಮೂಲ ಕಾರಣ ಹುಡುಕೋದಾದರೆ ಸರ್ಪದೋಷಗಳು.
ಈ ಸರ್ಪ ದೋಷಗಳು ಎಲ್ಲಿಂದ ಬರುತ್ತೆ? ಹೇಗೆ ಬರುತ್ತೆ
ನಮಗೆ ಗೊತ್ತಿದ್ದು ಗೊತ್ತಿಲ್ದಿರ ಅಥವಾ ಹಿಂದಿನ ಜನ್ಮದಲ್ಲಿ ನಮ್ಮ ದೊಡ್ಡವರು ಮಾಡಿರಬಹುದು ನಾವು ಮಾಡಿರಬಹುದು ಹಾವುಗಳಿಗೆ ಕೆಡಕನ್ನ ಮಾಡಿರುತ್ತೇವೆ ಅಂದ್ರೆ ಹಾವಿನ ಮೊಟ್ಟೆ ಒಡೆದು ಹೋಗಿರಬಹುದು ಹಾವನ್ನ ಹಿಂಸಿಸೋದು ಆಮನ್ನ ಸಾಯಿಸೋದು
ಯಾರಾದ್ರೂ ಹಾವನ್ನು ಸಾಯಿಸ್ತಾ ಇದ್ರೆ ಅದನ್ನ ನೋಡುವುದು ಹಾವಿನ ಹಿಂಸೆಯನ್ನು ಕಂಡು ಸಂತೋಷ ಪಡುವುದು ಅಥವಾ ನಮಗೆ ಗೊತ್ತಿಲ್ದಿರ ಗಾಡಿ ಹರಿಸಿರೋದು ಆಟ ಆಡುವಾಗ ಅದರ ಮೊಟ್ಟೆ ಅಥವಾ ಅದರ ನಿಲ್ಲಿಸ್ತಾ ಇರತಕ್ಕಂತಹ ಜಾಗವನ್ನ ಹಾಳ್ ಮಾಡಿರಬಹುದು ನಾವು ಮನೆ ಕಟ್ಟುವಾಗ ಹುತ್ತಗಳನ್ನು ಹೊಡೆದಾಕಿ ಮನೆ ಕಟ್ಟಿರಬಹುದು ಹೀಗೆ ಹೇಳ್ತಾ ಹೋದರೆ ನೂರಾರು ಸಾವಿರಾರು ತಪ್ಪುಗಳನ್ನ ಮನುಷ್ಯ ಮಾಡಿದ್ದಾನೆ..
ಇದಕ್ಕೆಲ್ಲ ನಾವು ಪರಿಹಾರ ಕಂಡುಕೋಬೇಕು ಅಂದ್ರೆ ಈ ಕುಕ್ಕೆ ಶ್ರೀ ಕ್ಷೇತ್ರದಲ್ಲಿ ಸರ್ಪ ಸಂಸ್ಕಾರ ಪೂಜೆಯನ್ನು ಮಾಡಿಸಿದರೆ
ಆ ಕ್ಷೇತ್ರ ಮಹಿಮೆಯಿಂದ ಆ ಭಗವಂತನ ಕೃಪೆಯಿಂದ ನಾವು ಮಾಡಿರತಕ್ಕಂತಹ ಪಾಪಗಳೆಲ್ಲ ಪರಿಹಾರ ಆಗಿ ನೆಮ್ಮದಿಯ ಜೀವನ ಸಿಕ್ಕುತ್ತೆ.
ಒಂದು ಪ್ರಮುಖವಾದಂತಹ ಮಾಹಿತಿ
ಪೂಜಾ ವಿಧಾನಕ್ಕೆ ಬಂದರೆ ಎರಡು ದಿನಗಳ ಪೂಜೆ ಆಗಿರುತ್ತೆ
ಮೊದಲನೆಯ ದಿನ ಸರ್ಪಕ್ಕೆ ಸಂಸ್ಕಾರ ಮಾಡ್ತೇವೆ ದಹನ ಸಂಸ್ಕಾರ
ಮಾರನೇ ದಿನ ಸರ್ಪಕ್ಕೆ ಜೀವ ಕೊಟ್ಟು ಮೊಟ್ಟೆಗಳಿಗೆ ಜೀವ ಕೊಟ್ಟು ಹಾವು ತನ್ನ ಸಂಸಾರದೊಂದಿಗೆ ಸುಖವಾಗಿ ಅದರ ವಂಶ ಅಭಿವೃದ್ಧಿ ಆಗಲಿ ಎನ್ನುವ ರೀತಿಯಲ್ಲಿ ಪೂಜೆ ಮಾಡುವ ಒಂದು ವಿಧಾನ.
ಮೊದಲನೆಯ ವಿಧಾನದಲ್ಲಿ ಸರ್ಪಕ್ಕೆ ಮೋಕ್ಷ ಸಿಕತೆ
ಎರಡನೆಯ ವಿಧಾನದಲ್ಲಿ ಸರ್ಪ ಸಂತತಿ ಬೆಳೆಯುತ್ತೆ
ಎರಡು ಕ್ರಮಗಳನ್ನು ಮಾಡುವುದರಿಂದ ಸರ್ಪಗಳು ಸಂತುಷ್ಟರಾಗುತ್ತಾರೆ.
ನಮ್ಮ ಬದುಕಿನಲ್ಲಿ ಸಂತೋಷವನ್ನು ಕೊಡುತ್ತಾರೆ.
ಇನ್ನ ಪೂಜಾ ಬುಕಿಂಗ್ ಬಂದ್ರೆ ಇದನ್ನ ಸುಮಾರು ಎರಡು ತಿಂಗಳ ಮುಂಚೆ ಮಾಡಿಕೊಳ್ಳಬೇಕಾಗುತ್ತೆ ಇದರ ವೆಚ್ಚ 4200 ರೂಗುಗಳಾಗಿರುತ್ತೆ. ಇದರಲ್ಲಿ ನಾವು ಉಳಿದುಕೊಳ್ಳುವುದಕ್ಕೆ ರೂಮು ಪೂಜಾ ವ್ಯವಸ್ಥೆ ಅರ್ಚಕರು ಎರಡು ದಿನಗಳ ಊಟ ಸಹ ಸೇರಿರುತ್ತೆ.
ಆದರೆ ರೂಮುಗ್ ಮಾತ್ರ 250 ಎಕ್ಸ್ಟ್ರಾ ಪೆ ಮಾಡಬೇಕಾಗುತ್ತೆ
ನಾಗ ಪ್ರತಿಷ್ಠೆ ಸಹ ಸೇರಿರುತ್ತೆ
ಆಶ್ಲೇಷ ಪೂಜೆ ಮಾಡಿಸ್ಕೋಬೇಕಾದರೆ ನನ್ನೂರು ರೂಪಾಯಿ ಎಕ್ಸ್ಟ್ರಾ ಕಟ್ಟಬೇಕಾಗುತ್ತೆ.
ಸರ್ಪಸಂಸ್ಕಾರ ಮಾಡಿದ ಮೇಲೆ ಆಶ್ಲೇಷ ಪೂಜೆ ಏನು ಅವಶ್ಯಕತೆ ಇಲ್ಲ
ನಾರ್ಮಲ್ ಆಗಿ ಯಾವಾಗಲಾದರೂ ನಾವು ಕುಕ್ಕೆಗೆ ಭೇಟಿ ಕೊಟ್ಟಾಗ ಆಶ್ಲೇಷ ಪೂಜೆಯನ್ನು ಮಾಡಿಸಿಕೊಳ್ಳಬಹುದು
ಅಭಿಷೇಕ ಸಹ ಮಾಡಿಸ್ಕೋಬಹುದು, ಕ್ಷೀರಭಿಷೇಕ
ರುದ್ರಾಭಿಷೇಕ ಸುಮಾರು ಪೂಜೆಗಳು ಇದೆ ಪೂಜಾ ಲಿಸ್ಟ್ ಅನ್ನು ನಾನು ಕೊಟ್ಟಿದ್ದೇನೆ.
ಮನುಷ್ಯ ಪ್ರತಿ 10 ವರ್ಷಕ್ಕೊಮ್ಮೆ ಈ ಸರ್ಪ ಸಂಸ್ಕಾರ ಪೂಜೆಯನ್ನ ಮಾಡಿಸಿಕೊಳ್ಳುವುದರಿಂದ ತನ್ನ ಬದುಕಿನಲ್ಲಿ ಒಳಿತನ್ನ ಕಾಣಬಹುದು.
ಯಾರಿಗಾದರೂ ಏನಾದರೂ ಕ್ವೆಶ್ಚನ್ಸ್ ಡೌಟ್ಸ್ ಇದ್ರೆ ಕಾಮೆಂಟಲ್ಲಿ ತಿಳಿಸಿ ನನಗೆ ಗೊತ್ತಿರುವ ಮಾಹಿತಿಯನ್ನು ಖಂಡಿತ ನಿಮ್ಮೊಂದಿಗೆ ಶೇರ್ ಮಾಡಿಕೊಳ್ಳುತ್ತೇನೆ.
ಎಲ್ಲರಿಗೂ ಒಳ್ಳೆಯದಾಗಲಿ ಆ ಭಗವಂತ ಸರ್ವರನ್ನು ರಕ್ಷಿಸಲಿ
ಸರ್ವೇ ಜನಾ ಸುಖಿನೋ ಭವಂತು 🙏


#KukkeSubramanyaSarpaSamskaraPooja:

#KukkeSubramanya

#SarpaSamskara

#PoojaAtKukkeSubramanya

#RitualsAndTraditions

#DivineBlessings

#SpiritualJourney

#SarpaDoshaNivarana

#SacredRituals

#KarnatakaTemples

#BlessingsOfSubramanya

kukke subramanya,sarpa samskara pooja in kukke subramanya,sarpa samskara pooja,kukke subramanya temple,kukke subramanya sarpa samskara pooja dates,ashlesha bali pooja in kukke subramanya,sarpa samskara,kukke subramanya temple pooja details,naga pratishta pooja in kukke subramanya,kukke subramanya temple sarpa samskara pooja,kukke subrahmanya temple,kukke subramanya temple history in telugu,#sarpa samskara pooja,kukke subramanya sarpa samskara

Комментарии

Информация по комментариям в разработке