ಗುಲಗಂಜಿ ಮಲೆ ಮಹದೇಶ್ವರ || Mahadeshwara || MM Hills || Male Mahadeshwara Swamy

Описание к видео ಗುಲಗಂಜಿ ಮಲೆ ಮಹದೇಶ್ವರ || Mahadeshwara || MM Hills || Male Mahadeshwara Swamy

ಗುಲಗಂಜಿ ಮಲೆ ಯಾತ್ರೆ🙏❤

ಮಲೈ ಮಹದೇಶ್ವರ 77 ಪವಾಡ ರಹಸ್ಯ ಮಲೆಗಳಲ್ಲಿ ಒಂದು ಅತ್ಯದ್ಭುತ ಕ್ಷೇತ್ರ

ತಮ್ಮಡಿಗಳ ಜೊತೆಗೆ ಮಾತ್ರ ಹೋಗಿರಿ ಮಹಿಳೆಯರಿಗೆ ಪ್ರವೇಶವಿಲ್ಲ( 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಪ್ರವೇಶ)

ತಾಳುಬೆಟ್ಟದಿಂದ ಸುಮಾರು 25 ರಿಂದ 28 ಬೆಟ್ಟಗಳ ದಟ್ಟವಾದ ಅರಣ್ಯಗಳ ತಪ್ಪಲಿನ ಮಧ್ಯೆ ಇರುವಂತಹ ಪುಣ್ಯ ಪ್ರದೇಶ. ಈ ಸ್ಥಳಕ್ಕೆ ಹೋಗಲು ಮಲೈ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಹೋಗುವ ಜೀಪ್ ಹತ್ತಿರಿ, ನಂತರ ಇಂಡಿಗನಾಥ ಜೀಪ್ ನಿಲ್ಲುವ ಸ್ಥಳ.

ತಮ್ಮಡಿ ಮಹದೇವ ಅಥವಾ ತಮ್ಮಡಿ ಮಾದೇವ ಅವರ ಹೋಟೆಲ್ ಎಂದು ಕೇಳಿದರೆ ಯಾರು ಬೇಕಾದರೂ ತಿಳಿಸುತ್ತಾರೆ, ನಿಮ್ಮ ಲಗೇಜ್ ಗಳನ್ನು ಅಲ್ಲಿ ಇಟ್ಟು 2 ಲೀಟರ್ ನೀರು ಹಿಡಿದು, ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿ ಬನ್ನಿ.

ಪ್ರತಿ ಸೋಮವಾರ ಮಾತ್ರ ಪೂಜೆ ಹಾಗೂ ಪ್ರತಿ ಅಮವಾಸ್ಯೆ ಯಂದು ಪೂಜೆ ಇರುತ್ತದೆ.

ನಿಮಗೆ ಎಷ್ಟೇ ಅನುಭವ ಇದ್ದರೂ ಸಹ ತಮ್ಮಡಿಗಳ ಸಹಾಯ ಇಲ್ಲದೆ ಹೋಗಬೇಡಿ ಈ ಸ್ಥಳದಲ್ಲಿ ಒಂದು ಮನೆಯಲ್ಲ, ಮನುಷ್ಯರ ಸುಳಿವೇ ಇರುವುದಿಲ್ಲ ಮತ್ತು ಒಂದು ಹನಿ ನೀರು ಕೂಡ ಸಿಗುವುದಿಲ್ಲ.

ಸುಮಾರು 10 ರಿಂದ 15 ಜನರು ಒಂದು ತಂಡವಾಗಿ ಹೋಗಿ ಅಥವಾ ಇಂಡಿಗನಾಥದಿಂದ ಸಾಕಷ್ಟು ಜನರು ಹೋಗುತ್ತಾರೆ ಅವರ ಜೊತೆ ಹೋಗಿ ಬನ್ನಿ.

ನಿಮ್ಮ ಜೀವನ ಪಾವನ ಮಾಡಿಕೊಳ್ಳಿರಿ

ತಮ್ಮಡಿ ಮಾದೇವ ಅವರ ಮೊಬೈಲ್ ನಂ. 63611 25523

ಗುಲಗಂಜಿ ಮಲೆ ಸನ್ನಿಧಾನದಲ್ಲಿ ತಮ್ಮಡಿ ಮಾದೇವಣ್ಣನವರು ಪೂಜೆ ಮಾಡಿಕೊಡುತ್ತಾರೆ, ನೀವು ಯಾರು ಹೋಗುತ್ತೀರೋ ಅವರು ಎಲೆ ಅಡಿಕೆ ಮೇಲೆ ಕನಿಷ್ಠ ಒಬ್ಬೊಬ್ಬರು 51/- ರೂ ಕಾಣಿಕೆ ನೀಡಿ ಅಥವಾ ಎಲ್ಲರೂ ಸೇರಿ 501/- ಕಾಣಿಕೆ ಇಟ್ಟು ಅವರ ಕಾಲಿಗೆ ನಮಸ್ಕರಿ ಗೌರವಿಸಿ.

ದಯವಿಟ್ಟು ಈ ಸ್ಥಳಕ್ಕೆ ಹೋಗುವವರು ಶ್ರದ್ಧೆ, ಭಕ್ತಿ, ನಂಬಿಕೆ ಸರಳ ಉಡುಗೆ ಯಿಂದ ಹೋಗಿರಿ ಪಾದರಕ್ಷೆ ಧರಿಸಬಹುದು ಹಾಗೂ ಪಾದರಕ್ಷೆ ಎಲ್ಲಿ ಬಿಡಬೇಕು ಎಂದು ತಮ್ಮಡಿ ಮಾದೇವಣ್ಣ ತಿಳಿಸುತ್ತಾರೆ ಹಾಗೂ

ಮುಖ್ಯವಾಗಿ ಪೂಜೆ ಪ್ರಸಾದ ಎಲ್ಲಾ ಮುಗಿಯುವ ಹೊತ್ತಿಗೆ ಅಂದಾಜು ಒಂದು ಗಂಟೆಯ ONE HOUR ಸಮಯವಾಗಬಹುದು ನಂತರ ಈ ಸ್ಥಳದಿಂದ ಹೊರಟು ಬಿಡಿ ಅತೀ ಸೂಕ್ಷ್ಮ ಪ್ರದೇಶ ಮತ್ತು ಬಿಸಿಲು ಹೆಚ್ಚಾದರೆ ನಡೆಯುವುದು ಸ್ವಲ್ಪ ಮಟ್ಟಿಗೆ ಕಷ್ಟವಾಗಬಹುದು "ಯಾವುದೇ ರೀತಿಯ ಪ್ರಾಣಿಗಳ ಭಯವಿಲ್ಲ" ಸಾಧ್ಯವಾದಷ್ಟು ನಿಮ್ಮ ಮನಸ್ಸು ಬುದ್ಧಿ ಮಾದಪ್ಪನ ಧ್ಯಾನದಲ್ಲಿದ್ದರೆ ನಿಮಗೆ ಆಯಾಸವೇ ತಿಳಿಯುವುದಿಲ್ಲ


❤️🙏 Ughe 🕉️ Mahadeshwara 🙏❤️
➖➖➖➖➖➖➖➖➖➖➖➖➖➖
IF U REALLY LIKE THIS VIDEO THEN DON'T FORGET TO . . . . . . .
🇱 🇮 🇰 🇪
🇸 🇭 🇦 🇷 🇪
🇨 🇴 🇲 🇲 🇪 🇳 🇹
🇸 🇺 🇧 🇸 🇨 🇷 🇮 🇧 🇪 ➖➖➖➖➖➖➖➖➖➖➖➖➖

Tags - #MahadevCreations #MMHills #MaleMahadeshwara #janapada #maleyamahadeshwara #MahadeshwaraWhatsappStatus #chamarajanagar #kollegala #mysuru #karnataka #brhills #kannada
#bengaluru
#mandya
#mysuru
#mandya
#malavalli
#madeshwara
#madeshwarasongs #madeshwaradayebarade
#kanakapura #malemahadeshwarabetta #malemahadeshwara #ugheughemadeshwara

🤗🌹THANK YOU FOR WATCHING🌹

Комментарии

Информация по комментариям в разработке