ಬಹುವಿಧದ ಬೇಡಿಕೆ ಈಡೇರಿಕೆಗೆ ಈ ದೇವಸ್ಥಾನ ಭೇಟಿ ನೀಡಿ!ಭೂ ವರಾಹ ಲಕ್ಷ್ಮೀನರಸಿಂಹ ದೇವಸ್ಥಾನ

Описание к видео ಬಹುವಿಧದ ಬೇಡಿಕೆ ಈಡೇರಿಕೆಗೆ ಈ ದೇವಸ್ಥಾನ ಭೇಟಿ ನೀಡಿ!ಭೂ ವರಾಹ ಲಕ್ಷ್ಮೀನರಸಿಂಹ ದೇವಸ್ಥಾನ

ಪ್ರಾಚೀನ ದೇಗುಲಗಳ ಬೀಡು ಹಲಸಿ..!
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಚಾರಿತ್ರಿಕ ಮಹತ್ವದ ಗ್ರಾಮ ಹಲಸಿ. ಕದಂಬರಿಂದ ಕಲ್ಯಾಣ ಚಾಲುಕ್ಯರ ಕಾಲದವರೆಗೂ ಪ್ರಮುಖ ಆಡಳಿತ ಕೇಂದ್ರವಾಗಿದ್ದು, ಹನ್ನೆರಡು ಸಾವಿರ ಗ್ರಾಮಗಳನ್ನು ಒಳಗೊಂಡ ಹಲಸಿಗೆ-12000 ಗ್ರಾಮಗಳ ವಿಭಾಗದ ಕೇಂದ್ರವಾಗಿತ್ತು. ಪ್ರಾಚೀನ ಶಾಸನಗಳು ಪಲಸಿಕಾ, ಪಲಸಿ, ಹಲಸಿಗೆ ಎಂದೇ ಈ ಗ್ರಾಮದ ಹೆಸರನ್ನು ಉಲ್ಲೇಖಿಸಿವೆ. ಇಂದು ಗ್ರಾಮದಲ್ಲಿ ಕಂಡುಬರುವ ಭಗ್ನ ದೇಗುಲಗಳು ಈ ಗ್ರಾಮದ ಪ್ರಾಚೀನ ಗತವೈಭವಕ್ಕೆ ಸಾಕ್ಷಿಯಾಗಿವೆ.ಇಂತಹುದೇ ಒಂದು ಸ್ಥಳ ಭೂವರಾಹ ನರಸಿಂಹ ಸ್ವಾಮಿ ದೇವಾಲಯ!
ಆ ಕಾಲದಲ್ಲಿ ನಿರ್ಮಾಣವಾದ ಈ ದೇಗುಲವು, ಪೂರ್ವ ಮತ್ತು ಪಶ್ಚಿಮಾಭಿಮುಖವಾಗಿರುವ ಎರಡುಗರ್ಭಗೃಹಗಳು,ಅಂತರಾಳ, ನವರಂಗದ ಜೊತೆಗೆ ದೇವಾಲಯಗಳ ಸಂಕೀರ್ಣವನ್ನೇ ಹೊಂದಿದೆ. ಪ್ರಧಾನ ಗರ್ಭಗೃಹದಲ್ಲಿ ಉದ್ಭವ ನರಸಿಂಹನ ಮೂರ್ತಿ ಹಾಗೂ ನಾರಾಯಣನ ಸುಂದರ ಮೂರ್ತಿಯಿದೆ. ದಾಖಲೆಗಳ ಪ್ರಕಾರ ಗೋವೆಯ ಕದಂಬರ ದೊರೆ ಶಿವಚಿತ್ತನು ಕ್ರಿ.ಶ. 1169 ರಲ್ಲಿ ಈ ದೇವಾಲಯವನ್ನು ಕಟ್ಟಿಸಿದ್ದು, ಇವನ ತಾಯಿಯ ಆದೇಶದ ಮೇರೆಗೆ ‘ಅನಂತ ವೀರವಿಕ್ರಮ ನರಸಿಂಹ’ ನ ಮೂರ್ತಿಯನ್ನು ಇಲ್ಲಿಯ ಗರ್ಭಗೃಹದಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದು ತಿಳಿದುಬರುತ್ತದೆ. ಇದರ ಅಭಿಮುಖವಾಗಿರುವ ಗರ್ಭಗೃಹದಲ್ಲಿ ಕ್ರಿ.ಶ. 1186 ರಲ್ಲಿ ಮೂರನೇ ವಿಜಯಾದಿತ್ಯನ ಕಾಲದಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಭೂವರಾಹ ಸ್ವಾಮಿಯ ನಿಂತ ಭಂಗಿಯಲ್ಲಿರುವ ಸುಂದರವಾದ ಮೂರ್ತಿಯಿದೆ.ಎರಡೂ ಗರ್ಭಗೃಹಗಳ ಬಾಗಿಲುಗಳಿಗೆ ಅಲಂಕಾರಿಕ ಪಟ್ಟಿಕೆಗಳಿದ್ದು, ಲಲಾಟದಲ್ಲಿ ಲಕ್ಷ್ಮಿಯ ಬಿಂಬವನ್ನು ಕಾಣಬಹುದು. ಅಂತರಾಳದ ಬಾಗಿಲಿಗೆ ವಿಶಿಷ್ಠವಾಗಿ ಕೆತ್ತಲ್ಪಟ್ಟ ಚೌಕಾಕಾರದ ಜಾಲಂಧ್ರಗಳಿದ್ದು ಗಮನಸೆಳೆಯುತ್ತವೆ.ನವರಂಗದ ಮಧ್ಯದಲ್ಲಿ ನಾಲ್ಕು ದೈತ್ಯ ಕಂಬಗಳು,ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಪ್ರವೇಶ ದ್ವಾರಗಳು ಕಂಡುಬರುತ್ತದೆ.ಇಡೀ ದೇವಾಲಯವು ಎತ್ತರದ ಜಗತಿಯ ಮೇಲೆ ನಿರ್ಮಾಣವಾಗಿರುವುದೂ ಹಾಗೂ ಪ್ರಧಾನ ಗರ್ಭಗೃಹದ ಮೇಲಿರುವ ಕದಂಬ ನಾಗರ ಶಿಖರವು ದೇವಾಲಯದ ಅಂದವನ್ನು ಹೆಚ್ಚಿಸಿವೆ.
ಧ್ಯೇಯಃ ಸದಾ ಸವಿತೃಮಂಡಲ ಮಧ್ಯವರ್ತೀನಾರಾಯಣಃ ಸರಿಸಿಜಾಸನಸನ್ನಿವಿಷ್ಟಃ |
ಕೇಯೂರವಾನ್ ಮಕರಕುಂಡಲವಾನ್ ಕಿರೀಟೀ
ಹಾರೀ ಹಿರಣ್ಮಯವಪುಃ ಧೃತಶಂಖಚಕ್ರಃ ||
ಸೂರ್ಯಮಂಡಲದ ಮಧ್ಯದಲ್ಲಿ ಪದ್ಮಾಸನದಲ್ಲಿ ಆಸೀನನಾದ ಶ್ರೀನಾರಾಯಣನು,ತೋಳಿನಲ್ಲಿ ವಂಕಿ (ಕೇಯೂರ),ಕಿವಿಯಲ್ಲಿ ಮಕರಕುಂಡಲ,ಶಿರಸ್ಸಿನಲ್ಲಿ ಕಿರೀಟ,ಕತ್ತಿನಲ್ಲಿ ಮುತ್ತಿನ ಹಾರಗಳು,ಬಂಗಾರದ ಮೈಬಣ್ಣ, ಎರಡು ಕೈಗಳನ್ನು ತೊಡೆಯಮೇಲಿರಿಸಿಕೊಂಡು ಉಳಿದೆರಡು ಕೈಗಳಿಂದ ಶಂಖ-ಚಕ್ರಗಳನ್ನು ಹಿಡಿದುಕೊಂಡಿದ್ದಾನೆ.
ಹೆಚ್ಚಿನ ಮಾಹಿತಿಗೆ ಟ್ರಸ್ಟೀ.
ಶ್ರೀ ಭೂವರಾಹ ನರಸಿಂಹ ದೇವಸ್ಥಾನ (Regd No.BGM/2725)
ವಿವೇಕಾನಂದ ಪಾರಿಪತ್ಯದಾರ (ಟ್ರಸ್ಟಿ)
ಪೋ.ಹಲಸಿ ತಾ.ಖಾನಾಪುರ.ಜಿಲ್ಲಾ.ಬೆಳಗಾವಿ
9980087912
9900330911

#halasi #khanapur
#nammakarnataka #tourism #travelkarnataka #travel #traveldiaries #explorekarnataka #travelinspo #vacationvibes #onestatemanyworlds #visitkarnataka #hiddenkarnataka #unexploredkarnataka #ancientarchitecture #indianarchitecture #templesofindia #karnataka #Magnificent #temple #dramaticsky #sacred #karnatakatourism #templesofkarnataka #karnatakapilgrimage
#ನವೀನಶಾಸ್ತ್ರಿಪುರಾಣಿಕ
#naveenshastripuranik
#naveen_shastri_puranik


ಪ್ರತಿ ನಿತ್ಯವು ಅತ್ಯುಪಯುಕ್ತವಾದ ನಿತ್ಯ ಪಂಚಾಂಗ ಹಾಗೂ ದ್ವಾದಶ ರಾಶಿಗಳ ಭವಿಷ್ಯ ನೋಡಲು ಜೋತಿಷ್ಯ ದಾರಿ ದೀಪ ಚಾನೆಲ್ ಬಹಳ ಅನುಕೂಲ.ಹಾಗೆ
Don't forget to LIKE, COMMENT, SHARE And SUBSCRIBE.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು, ಸಂಸ್ಕೃತಿ, ನಿಸರ್ಗ ಸೌಂದರ್ಯ, ರಾಷ್ಟ್ರೀಯ ಚಿಂತನೆ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಜ್ಯೋತಿಷ್ಯ ದಾರಿದೀಪ ಯುಟ್ಯೂಬ್ ಚಾನೆಲ್ ತಪ್ಪದೇ ನೋಡುತ್ತಿರಿ.ಹಾಗೇ ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ, ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ನೋಟಿಫಿಕೇಶನ್ ಗಾಗಿ ತಪ್ಪದೇ ಬೆಲ್ ಬಟನ್ ಒತ್ತಿ.
#ದಿ_ಡೈಲಿ_ನ್ಯೂಸ್ ದಿನಪತ್ರಿಕೆಯಲ್ಲಿ ಪ್ರತಿ ದಿನದ ರಾಶಿ ಭವಿಷ್ಯ ಪ್ರಕಟವಾಗುತ್ತದೆ.
#Vistranews ವಿಸ್ತಾರ ಮೀಡಿಯಾದಲ್ಲಿ ಸಹ ರಾಶಿ ಭವಿಷ್ಯ ನೋಡಬಹುದು.
#ವಿಜಯ_ಕರ್ನಾಟಕದ ಬೋಧಿವೃಕ್ಷ ವಾರ ಪತ್ರಿಕೆಯಲ್ಲಿ ಜೋತಿಷ್ಯಕ್ಕೆ, ಧಾರ್ಮಿಕ ವಿಷಯಗಳ ಕುರಿತಾಗಿ ನನ್ನ ಲೇಖನಗಳು ಪ್ರಕಟವಾಗುತ್ತಿರುತ್ತವೆ.।
Don't forget my YouTube channel 👇
YouTube link:
   / @jyotishyadaarideepa.  

   / @jyotishyadaarideepa  .
follow
Facebook link:
  / naveenshastri.puranik  

Facebook page link:
https://www.facebook.com/profile.php?...

Twitter link:
Take a look at Naveenshastri Puranik (@NaveenshastriP3): https://twitter.com/NaveenshastriP3?t...

Disclaimer
Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.
Thank you
Naveenshastri Puranik
‪@jyotishyadaarideepa.‬

Комментарии

Информация по комментариям в разработке