Ninhoratu Porevavara Nannariye Hariye.. ನಿನ್ಹೊರತು ಪೊರೆವವರ ನಾನರಿಯೆ ಹರಿಯೇ..

Описание к видео Ninhoratu Porevavara Nannariye Hariye.. ನಿನ್ಹೊರತು ಪೊರೆವವರ ನಾನರಿಯೆ ಹರಿಯೇ..

ಕನ್ನಡ ದಾಸರ ಕೀರ್ತನೆ

ನಿನ್ಹೊರೆತು ಪೊರೆವವರ ನಾನರಿಯೆ ಹರಿಯೇ
ಆದಿಯು ಮೊದಲು ನಿನ್ನ ಪಾದವ ನಂಬಿದೆ
ಭೇದವೆಣಿಸದೆ ಮೋದದಾಯಕ |
ಆದರದಿಂದಲಿ ಕಾಯೋ ಸೋದರಮಾವನ ವೈರಿ
ಮೇದಿನಿಪತಿಯೇ ನಿನ್ನಾರಾಧನೆ ಮಾಡಿಸೋ ಹರಿಯೇ ||

ದಾನವಾಂತಕ ನೀನೇ ಗತಿಯೆಂದು
ಸ್ವಾನುರಾಗದಿಂ ಧ್ಯಾನ ಮಾಡುವೆ |
ಮಾನ ಅಭಿಮಾನ ನಿನ್ನದು ವೇಣುಗೋಪಾಲ ಕೃಷ್ಣ
ಭಾನುಕೋಟಿತೇಜ ಎನ್ನ ದೀನನಾಗಿ ಮಾಡೋ ಹರಿಯೇ ||

ಪಂಕಜಾಕ್ಷ ಮುಕುಂದ ಮಾಧವ
ಕಿಂಕರಾಮರ ವಂದ್ಯ ಶ್ರೀಹರಿ |
ಸಂಕಟಗಳನು ನೀ ಬಿಂಕದಿಂ ಪರಿಪಾಲಿಪ
ಕಂಕಣಧರಿಸಿದ ಶ್ರೀವೆಂಕಟವಿಠ್ಠಲ ಹರಿಯೇ ||

Комментарии

Информация по комментариям в разработке