Chaturmas Rangili mantra🥰🙏/ಚಾತುರ್ಮಾಸ ರಂಗೋಲಿ ಮತ್ತು ಮಂತ್ರ🥰🙏

Описание к видео Chaturmas Rangili mantra🥰🙏/ಚಾತುರ್ಮಾಸ ರಂಗೋಲಿ ಮತ್ತು ಮಂತ್ರ🥰🙏

" ಚಾತುರ್ಮಾಸದ ರಂಗೋಲಿ ಮಂತ್ರ"

ಏಕಾದಶಿ ವಿಷ್ಣನ್ನ | ದ್ವಾದಶಿ ದ್ವಾರಪಾಲಕರನ್ನ | ಇಂದ್ರನ್ನ ಚಂದ್ರನ್ನ ದೇವೇಂದ್ರನ್ನ

ಪಂಚಪಾಂಡವರನ್ನು ಕೂಡಿ ಪಗಡಿ ಆಡೋ ಹೊತ್ತಿನ ವಳಗ ತಂತಿ ಹರಿತು ಬೇಲಿ ಮುರಿತು

ಅಂತ ದ್ವಾರಪಾಲಕರು ಹೇಳಿದರು || ಊರೊಳಗೆ ಚಾತುರ್ಮಾಸದ ರಂಗೋಲಿ ಯಾರ

ಪಕ್ಕಾರ ನೋಡಿಕೊಂಡು ಬಾ ಅಂತಾ ಹೇಳಿದರು | ಗಂಗಿ ಹಾಕ್ಯಾಳ, ಗೌರಿ ಹಾಕ್ಯಾಳ, ಸಾವಿತ್ರಿ

ಸರಸ್ವತಿ ಹಾಕ್ಯಾಳ, ಶ್ರೀಕೃಷ್ಣನ ತಂಗಿ ಸುಭದ್ರಾ ಹಾಕಿಲ್ಲ ಅಂತ ಹೇಳಿದರು ಆಕೆ ಬೆನ್ನುಹರು

ತಂದು ಬೇಲಿಗೆ ಬಿಗಿರಿ ನರಾ ತಂದು ತಂತಿಗೆ ಬಿಗಿರಿ ಅಂತ ಅಂದ್ರು ಆಗ ಉದಯ

ಕಾಲದಲೆದ್ದು ಶ್ರೀಕೃಷ್ಣ ಪರಮಾತ್ಮ ತಂಗಿ ಮನೆಕಡೆ ಹೋದಾ ಯಾಕ ತಂಗಿ ಚಾತುರ್ಮಾಸ್ಯ

ನೇಮಾ ಏನು ಮಾಡದಿ ಅಂತಾ ಕೇಳಿದ ಇಂದ್ರನಂಥಾ ಗಂಡನ್ನ ಬಲ್ಲೆ, ಚಂದ್ರನಂಥಾ ತಮ್ಮನ್ನ

ಬಲ್ಲೆ, ಅರ್ಜುನನಂಥಾ ಗಂಡನ್ನ ಬಲ್ಲೆ, ವಾಸುದೇವ ದೇವಕಿ ಅಂಥಾ ತಂದೆ - ತಾಯನ್ನ

ಬಲ್ಲೆ ಶ್ರೀಕೃಷ್ಣ ಪರಮಾತ್ಮನ ಬಲ್ಲೆ ಅಂದಳು. ಹಂಗ ಅಂದರ ಹ್ಯಾಂಗವಾ ರಂಗೋಲಿ ಹಾಕು

ನೇಮ ಹಿಡಿ, ಘಟ್ಟ ಬೆಟ್ಟಕೆ ಹೋಗಿ ಅಚ್ಚ ಬೆಂಚಿಕಲ್ಲು ತಂದು ಹವಳ, ಮುತ್ತು ಹಾಕಿ ಕುಟ್ಟಿ

ಬೀಸಿ | ಶ್ರೀಕೃಷ್ಣನ ಗದ್ದುಗೆ, ವಿಷ್ಣುಪಾದ, ಶಂಖಾ, ಚಕ್ರಾ, ಗದಾ ಪದ್ಮಾ ಸ್ವಸ್ತಿಕೆ | ವೃಂದಾವನ

ಕೊಳಲು, ತಂತಿ, ಬೇರಿ ಆಕಳು, ಕರು ಮೂವತ್ತಮೂರು ಪದ್ಮಶ್ರೀ ರಾಮನ ತೊಟ್ಟಿಲು, ಸೀತಾ

ತೆರಗು, ತುಳಸಿದಳಾ ಇಷ್ಟೆಲ್ಲಾ ಹಾಕಬೇಕು, ಆನೆ, ದ್ವಾರಪಾಲಕರು ಹಾಕಬೇಕು ಅಂತಾ

ಹೇಳಿದ, ತಂಗಿ ಸುಭದ್ರಾ ಬೆಂಚಿಕಲ್ಲು ತಂದು ಹವಳಾ ಮುತ್ತು ಹಾಕಿ ಕುಟ್ಟಿ ರಂಗೋಲಿ ಅಣ್ಣ

ಶ್ರೀಕೃಷ್ಣ ಹೇಳಿದಂತೆ ಹಾಕಿದಳು. ಈ ರಂಗೋಲಿಯನ್ನು ಕರಿ ಆಕಳು ಕಟ್ಟಿದಲ್ಲೇ, ಬಿಳಿ ಆಕಳು

ಬಿಚ್ಚಿದಲ್ಲಿ ಋಷಿಗಳು ಕೂಡುವಲ್ಲಿ ಗಂಗಾ ತಟಕಾದಲ್ಲಿ ದೇವರ ಮುಂದೆ. ತುಳಸಿ ಮುಂದ

ಇಂಥ ಸ್ಥಳದಲ್ಲಿ ಹಾಕಬೇಕು ಸುಭದ್ರಾ ರಂಗೋಲಿ ಹಾಕಿ ಆಷಿಣ ಕುಂಕುಮ, ಅಕ್ಕಿಕಾಳು

ಆರ್ಥ್ಯ ಕೊಟ್ಟಳು ಐದು ವರ್ಷ ಹಾಕಿದಳು. ರಂಗೋಲಿ ಹೋಗಿ ಗುಡ್ಡಾಗಿ ನಿಂತು, ಅರಿಷಿಣ

ಕುಂಕುಮ ಬೆಟ್ಟ ಆಗಿ ನಿಂತು, ಅಕ್ಕಿಕಾಳು ರಾಶಿಗಿ ನಿಂತು, ಅರ್ಥ್ಯ ಕೊಟ್ಟದ್ದು ಹಳ್ಳ ಆಗಿ

ಹರಿದು ಮೊದಲನೇ ವರ್ಷ ಶಾವಿಗೆ ಪಾಯಸ, ಎರಡನೇ ವರ್ಷ ಎಷ್ಟೋರಿಗಿ, ಮೂರನೇ

ವರ್ಷ ಮುಟ್ಟೋರಿ, ನಾಲ್ಕನೇ ವರ್ಷ ಅನಾರಸ, ಐದನೇ ವರ್ಷ ಮಂಡಿಗೆ ಕೊಟ್ಟಳು. ಅಣ್ಣ

ಆಗಿ ತೆಗೆದುಕೊಂಡ, ತಮ್ಮನಾಗಿ ತೆಗೆದುಕೊಂಡ. ಶ್ರೀಕೃಷ್ಣ ಪರಮಾತ್ಮನಾಗಿ ತೆಗೆದುಕೊಂಡ.

ಸುಭದ್ರ ಹಾಕಿದ ರಂಗೋಲಿ ಸಂಪೂರ್ಣ೦


||ಶ್ರೀಕೃಷ್ಣಾರ್ಪಣಮಸ್ತು |






#vedavyasvibes #chatrmasarangoli#chaturmasamantra2024#chaturmasamahatva

Комментарии

Информация по комментариям в разработке