Agni Shridhar Exclusive Interview Part 2 | ಜಯರಾಜ್ ಮಗನಿಗೆ ನಾನು ಓಪನ್ ಚಾಲೆಂಜ್ ಹಾಕ್ತೀನಿ |Vijay Karnataka

Описание к видео Agni Shridhar Exclusive Interview Part 2 | ಜಯರಾಜ್ ಮಗನಿಗೆ ನಾನು ಓಪನ್ ಚಾಲೆಂಜ್ ಹಾಕ್ತೀನಿ |Vijay Karnataka

ಅಗ್ನಿ ಶ್ರೀಧರ್ ಅವರು 'ಹೆಡ್ ಬುಷ್' ಸಿನಿಮಾಕ್ಕೆ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಕಥೆ ಚಿತ್ರಕಥೆ ಬರೆದಿದ್ದಾರೆ. ನನ್ನ ತಂದೆ ಜಯರಾಜ್ ಕಥೆಯನ್ನು ಈ ಸಿನಿಮಾದಲ್ಲಿ ನೆಗೆಟಿವ್ ಆಗಿ ತೋರಿಸಿದ್ದಾರೆ ಎಂದು ಜಯರಾಜ್ ಪುತ್ರ ಅಜಿತ್ ಆರೋಪ ಮಾಡಿದ್ದರು. ಈ ಆರೋಪಕ್ಕೆ ಸ್ಪಷ್ಟನೆ ನೀಡುವ ವೇಳೆ ಅಗ್ನಿ ಶ್ರೀಧರ್ ಅವರು 'ವಿಜಯ ಕರ್ನಾಟಕ ವೆಬ್‌'ನ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

'ದಾದಾಗಿರಿಯ ದಿನಗಳು' ಪುಸ್ತಕದ ಕುರಿತಾಗಿಯೇ 'ಹೆಡ್ ಬುಷ್' ಕಂಪ್ಲೀಟ್ ಸಿನಿಮಾ ಇದೆಯಾ? 'ದಾದಾಗಿರಿಯ ದಿನಗಳು' ಪುಸ್ತಕಕ್ಕೆ ಯಾವುದೇ ವಿರೋಧ ಬರಲಿಲ್ಲವಾ? ಈ ಸಿನಿಮಾ ಮೂಲಕ ನೀವು ಏನು ಹೇಳೋದಿಕ್ಕೆ ಹೊರಟಿದ್ದೀರಿ? ಸಿನಿಮಾ ಮಾಡಲು ಸಾಕಷ್ಟು ವಿಷಯ ಇದೆ, ಆದರೆ ಜಯರಾಜ್ ಅವರ ಕಥೆ ಆಯ್ಕೆ ಮಾಡಿಕೊಂಡಿದ್ದು ಯಾಕೆ? ಜಯರಾಜ್ ಎನ್ನುವ ಪಾತ್ರ ಕಾಲಘಟ್ಟವನ್ನು ತೆರೆ ಮೇಲೆ ತರಬೇಕು ಅಂತ ಅನ್ಕೊಂಡ್ರಿ? ರೌಡಿಸಂ, ಗ್ಯಾಂಗ್ ಸ್ಟರ್ ಕುರಿತಾದ ಸಿನಿಮಾಗಳು ಜಾಸ್ತಿ ಬರ್ತಿದೆ, ಸಮಾಜಕ್ಕೆ ಇದರಿಂದ ಏನು ಸಿಗುತ್ತದೆ ಎಂದು ಕೇಳಿದ್ದಾರೆ. ನಿಮ್ಮ ಅಭಿಪ್ರಾಯ ಏನು? ಇವತ್ತು ರೌಡಿಸಂ ಕಥೆ, ಆಕ್ಷನ್, ವಯಲೆನ್ಸ್ ಕುರಿತ ಸಿನಿಮಾಗಳು ಹೆಚ್ಚು ಬರುತ್ತಿವೆ‌. ಹಾಗಾದರೆ ಈ ರೀತಿ ಸಿನಿಮಾಗಳನ್ನು ಹೆಚ್ಚು ಮಾಡಬೇಕಾ? ಈ ವಿಚಾರದ ಬಗ್ಗೆ ನಿಮ್ಮ ನಿಲುವೇನು? ರೌಡಿ ಆಗೋದು ಅಥವಾ ಕಾನೂನು ಬಾಹಿರ ಕೆಲಸ ಮಾಡುವ ವ್ಯಕ್ತಿ ಹಿಂದೆ ಒಂದು ಬಲವಾದ ಕಾರಣ ಇರತ್ತೆ ಅಂತಾರೆ. ಈ ಚಿತ್ರದಲ್ಲಿ ರೌಡಿಸಂ ಹೊರತಾದ ವ್ಯಕ್ತಿತ್ವ, ಕಾಲಘಟ್ಟ ತೋರಿಸುವ ಆಲೋಚನೆ ಮಾಡುತ್ತಿದ್ದೀರಾ? ಈ ಪ್ರಶ್ನೆಗಳಿಗೆ ಪತ್ರಕರ್ತ ಅಗ್ನಿ ಶ್ರೀಧರ್ ಹೇಳಿದ್ದಾರೆ.

ಚಿತ್ರರಂಗದಲ್ಲಿ ವಿಲನ್, ಕಮಷಿ೯ಯಲ್ ಹೀರೋ, ಆಮೇಲೆ ಕಮರ್ಷಿಯಲ್ ಪೋಷಾಕನ್ನು ಕಳಚಿಟ್ಟು, ಸಹಜವಾದ ಪಾತ್ರ ಮಾಡಿ ನಟರಾಕ್ಷಸ ಎನಿಕೊಂಡಿದ್ದಾರೆ. ಈ ಸಿನಿಮಾ ಅವರಿಗೆ ಯಾವ ರೀತಿ ಇಮೇಜ್ ತಂದುಕೊಡುತ್ತದೆ? ಎಷ್ಟು ವಿಶೇಷ ಆಗುತ್ತದೆ? ಹೆಡ್ ಬುಷ್ ಸಿನಿಮಾನಾ ವೀಕ್ಷಕರು ಯಾಕೆ ಥಿಯೇಟರ್ ಬಂದು ನೋಡಬೇಕು? ಹೆಡಿ ಬುಷ್ ಕಾಂಟ್ರವರ್ಸಿ ಪ್ರಚಾರದ ಗಿಮಿಕ್? ಓಟಿಟಿ ನಡುವೆ ಜನ ಥಿಯೇಟರ್ ಬರೋದು ಕಷ್ಟ. ಅದರಲ್ಲಿ ಸೌಥ್, ನಾರ್ಥ್ ಅಂತ ಒಂದಷ್ಟು ವಿವಾದಗಳು. ಇದೆಲ್ಲ ಅಗತ್ಯವಿದೆಯಾ? ಈ ಎಲ್ಲ ಪ್ರಶ್ನೆಗಳಿಗೆ ಪತ್ರಕರ್ತ ಅಗ್ನಿ ಶ್ರೀಧರ್ ಪ್ರತಿಕ್ರಿಯೆ ನೀಡಿದ್ದಾರೆ.


#AgniShridhar #HeadBush #MPJayaraj

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке