Agni Shridhar Exclusive Interview : Head Bush, Daali Dhananjaya, Don Jayaraj | Vijay Karnataka

Описание к видео Agni Shridhar Exclusive Interview : Head Bush, Daali Dhananjaya, Don Jayaraj | Vijay Karnataka

Senior Journalist Agni Shridhar Exclusive Interview With Vijay Karnataka Online. He Speaks About Kannada movie Head Bush Starring Daali Dhananjaya and Controversy surrounding it. Erstwhile Don MP Jayaraj's son Ajith Jayaraj has Opposed Head Bush Movie making allegations that it is not telling truth about the ex don of Bengaluru.

ಡಾಲಿ ಧನಂಜಯ್ ನಟಿಸಿ, ನಿರ್ಮಿಸುತ್ತಿರುವ 'ಹೆಡ್ ಬುಷ್' ಸಿನಿಮಾಕ್ಕೆ ಎಂಪಿ ಜಯರಾಜ್ ಪುತ್ರ ಅಜಿತ್ ವಿರೋಧ ವ್ಯಕ್ತಪಡಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಕುರಿತು ಈ ಸಿನಿಮಾದ ಕಥೆ, ಚಿತ್ರಕಥೆ ಬರೆದಿರುವ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಅಗ್ನಿ ಶ್ರೀಧರ್ ಅವರು ಜಯರಾಜ್ ಅವರನ್ನು ಹತ್ತಿರದಿಂದ ನೋಡಿದವರು, ಒಡನಾಡಿಗಳು.

'ದಾದಾಗಿರಿಯ ದಿನಗಳು' ಎಂದು ಅಗ್ನಿ ಶ್ರೀಧರ್ ಪುಸ್ತಕ ಬರೆದಿದ್ದರು. ಆ ಪುಸ್ತಕವನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಈ ಬಗ್ಗೆ ಅಗ್ನಿ ಶ್ರೀಧರ್ ಅವರು ವಿಜಯ ಕರ್ನಾಟಕ ವೆಬ್ ಜೊತೆಗೆ ಮಾತನಾಡಿದ್ದಾರೆ. ಸಿನಿಮಾದಲ್ಲಿ ಯಾವೆಲ್ಲ ಅಂಶಗಳಿವೆ? ಸಿನಿಮಾ ಶೂಟಿಂಗ್ ಕಂಪ್ಲೀಟ್ ಆದ ನಂತರ ಅಜಿತ್ ಈ ರೀತಿ ವಿರೋಧ ವ್ಯಕ್ತಪಡಿಸುತ್ತಿರುವುದು ಯಾಕೆ? ಅಜಿತ್ ಏನು ತಿಳಿದುಕೊಂಡಿದ್ದಾರೆ? ಎನ್ನುವುದರ ಬಗ್ಗೆ ಅಗ್ನಿ ಶ್ರೀಧರ್ ಮಾತನಾಡಿದ್ದಾರೆ. ಒಟ್ಟಾರೆಯಾಗಿ ಅಜಿತ್ ಆರೋಪಕ್ಕೆ ಅಗ್ನಿ ಶ್ರೀಧರ್ ಅವರು ಉತ್ತರ ನೀಡಿದ್ದಾರೆ. ಒಟ್ಟಿನಲ್ಲಿ ಒಂದು ಕಾಲಘಟ್ಟವನ್ನು ನಾನು ಸಿನಿಮಾ ಮಾಡುತ್ತಿದ್ದೇನೆ, ಜಯರಾಜ್ ಬಯೋಪಿಕ್ ಅಲ್ಲ ಇದು ಎಂದು ಅಗ್ನಿ ಶ್ರೀಧರ್ ಸ್ಪಷ್ಟಪಡಿಸಿದ್ದಾರೆ.

1970ರಲ್ಲಿ ಬೆಂಗಳೂರಿನ ಭೂಗತ ಜಗತ್ತನ್ನು ಈ ಚಿತ್ರದಲ್ಲಿ ತೋರಿಸಲು ನಿರ್ದೇಶಕ ಶೂನ್ಯ ಹೊರಟಿದ್ದಾರೆ. ಈಗ ಶೂಟಿಂಗ್ ಮುಗಿಸಿಕೊಂಡು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಚಾಲನೆ ನೀಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ. ಸೆಪ್ಟೆಂಬರ್‌ನಲ್ಲಿ ಸಿನಿಮಾ ರಿಲೀಸ್ ಮಾಡುವ ಆಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಈ ನಡುವೆ ಅಜಿತ್ ಜಯರಾಜ್ ಅವರು, "ನನ್ನ ತಂದೆಯ ಕಥೆಯನ್ನು ಸಿನಿಮಾ ಮಾಡಬೇಡಿ. ನಾನು ಕಾನೂನು ಹೋರಾಟಕ್ಕೂ ಸಜ್ಜಾಗುವೆ. ಖಾಸಗಿ ಬದುಕಿಗೆ ಹರ್ಟ್ ಆಗೋ ಥರ ಇವರೆಲ್ಲ ನಡೆದುಕೊಳ್ಳುತ್ತಿದ್ದಾರೆ. ನಮ್ಮ ತಂದೆ ಮುಂದೆ ನಿಲ್ಲುವುದಕ್ಕೂ ಆಗದವರೆಲ್ಲ ಈಗ ನಮ್ಮ ತಂದೆ ಬಗ್ಗೆ ಮಾತಾಡ್ತಿದ್ದಾರೆ' ಅಂತ ಕರ್ನಾಟಕ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಈ ಕುರಿತು ವಿಡಿಯೋ ಕೂಡ ಮಾಡಿ ಅಪ್‌ಲೋಡ್ ಮಾಡಿದ್ದಾರೆ.

#AgniShridhar #HeadBush #DaaliDhananjaya

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке