ನಮ್ಮ ಶರೀರದಲ್ಲಿರುವ ಏಳು ಚಕ್ರಗಳ ಸಂಪೂರ್ಣ ಮಾಹಿತಿ | secret of seven chakras in human body |

Описание к видео ನಮ್ಮ ಶರೀರದಲ್ಲಿರುವ ಏಳು ಚಕ್ರಗಳ ಸಂಪೂರ್ಣ ಮಾಹಿತಿ | secret of seven chakras in human body |

ನಮ್ಮ ಶರೀರದಲ್ಲಿರುವ ಏಳು ಚಕ್ರಗಳ ಸಂಪೂರ್ಣ ಮಾಹಿತಿ | secret of seven chakras in human body | Avadhootha Sri Vinay Guruji

ಮಾನವ ಶರೀರದಲ್ಲಿ 14 ಲೋಕಗಳಿವೆ. ನಮ್ಮ ದೇಹವು ಮೂಲಾಧಾರ ಚಕ್ರದಲ್ಲಿ ನೆಲೆಯಾಗಿದೆ. ಮೂಲಾಧಾರ ಸ್ಥಿತಿಗೆ ಗಣಪತಿ ಅಧಿಪತಿಯಾಗಿದ್ದಾನೆ. ಮಣಿಪುರ ಚಕ್ರವು ಕಾಮನೆಗಳನ್ನು ವೃದ್ಧಿಸುತ್ತದೆ. ಇಂದ್ರಿಯ ಸುಖಗಳಿಗೆ ಕಾರಣನಾದ ಇಂದ್ರ ಮತ್ತು ಮನ್ಮಥ ಈ ಚಕ್ರಭಾಗಕ್ಕೆ ಅಧಿದೇವತೆಗಳಾಗಿದ್ದಾರೆ. ಸ್ವಾದಿಷ್ಟಾನ ಚಕ್ರವು ಬ್ರಹ್ಮನಾಭಿಯಲ್ಲಿ ಜಠರಾಗ್ನಿ ನೆಲೆಯಾಗಿದೆ. ಈ ಭಾಗದಲ್ಲಿ ಸ್ವರ್ಗ ನರಕದ ನಡುವಿನಲ್ಲಿರುವ ವೈತರಣೀ ನದಿಯ ಅಸ್ತಿತ್ವವನ್ನು ಭ್ರಮಿಸಬಹುದು. ಹೃದಯ ಭಾಗದಲ್ಲಿ ಅನಾಹತ ಚಕ್ರ ಸ್ಥಿತವಿದೆ. ಇದನ್ನು ವಿಷ್ಣುಗ್ರಂಥಿ ಎನ್ನಲಾಗುತ್ತದೆ. ಪ್ರತಿಯೊಂದು ಜೀವಾತ್ಮದ ಹೃದಯ ಭಾಗದಲ್ಲಿ ಚೈತನ್ಯ ಶಕ್ತಿಯು ಅಣುವಿನ ರೂಪದಲ್ಲಿ ನೆಲೆಸಿದೆ. ಈ ಭಾಗದಲ್ಲಿ ಸೃಷ್ಠಿಯ ರಹಸ್ಯ ಅಥವಾ ಚಿದಂಬರ ರಹಸ್ಯವಿದೆ. ದೇಹದ ಗಂಟಲಿನ ಭಾಗದಲ್ಲಿ ಬ್ರಹ್ಮಗ್ರಂಥಿಯಿದೆ. ಬ್ರಹ್ಮದೇವರ ಪತ್ನಿಯಾದ ವಾಗ್ದೇವಿ ಈ ಭಾಗದಲ್ಲಿ ನೆಲೆಸಿದ್ದಾಳೆ. ಹಣೆಯ ಭಾಗದಲ್ಲಿ ರುದ್ರಗ್ರಂಥಿಯಿದೆ. ಇದನ್ನು ಆಜ್ಞಾಚಕ್ರ ಎಂತಲೂ ಕರೆಯುತ್ತಾರೆ. ಈ ಕಾರಣಕ್ಕೆ ಹಣೆಯ ಭಾಗದಲ್ಲಿ ಬಿಸಿ ತಾಪದ ಅನುಭೂತಿಯಾಗುತ್ತದೆ. ವಿಷ್ಣುಸ್ವರೂಪಿಯಾದ ವೀರ್ಯವು ದೇಹದ ಏಳು ಚಕ್ರಗಳನ್ನು ಬೇಧಿಸಿ ರುದ್ರಗ್ರಂಥಿಯನ್ನು ಪ್ರವೇಶಿಸಿದಾಗ ಮುಖ ಬ್ರಹ್ಮತೇಜಸ್ಸಿನಿಂದ ಹೊಳೆಯುತ್ತದೆ. ಅನೇಕ ಆಧ್ಯಾತ್ಮ ಯೋಗಿಗಳ ಮುಖದಲ್ಲಿರುವ ಬ್ರಹ್ಮತೇಜಸ್ಸಿಗೆ ಇದೇ ಕಾರಣ. ಧ್ಯಾನ ಈ ಸಾಧನೆಯ ವಿಧಾನವಾಗಿದೆ. ಜ್ಞಾನರಶ್ಮಿಯು ಮೆದುಳನ್ನು ಪ್ರವೇಶಿಸಿದಾಗ ಸಹಸ್ರಾರ ಚಕ್ರವು ಕಮಲದ ದಳಗಳಂತೆ ಅರಳುತ್ತದೆ. ಸಹಸ್ರಾರ ಚಕ್ರ ಜಾಗೃತವಾದ ಮನುಷ್ಯನಿಗೆ ಸರ್ವಜ್ಞತ್ವ ಸಿದ್ಧಿಸುತ್ತದೆ.

For More Videos:

ದೇಹದಲ್ಲಿ ಈ ಚಕ್ರ ಜಾಗೃತವಾದರೆ ಶಾರದೆ ಒಲಿಯುತ್ತಾಳೆ! | ಅವಧೂತ ಶ್ರೀ ವಿನಯ್ ಗುರೂಜಿ
   • ದೇಹದಲ್ಲಿ ಈ ಚಕ್ರ ಜಾಗೃತವಾದರೆ ಶಾರದೆ ಒಲಿಯ...  

ಇದು ನಾಗಪ್ರತಿಷ್ಠೆಯ ಹಿಂದಿನ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ    • ಇದು ನಾಗಪ್ರತಿಷ್ಠೆಯ ಹಿಂದಿನ ರಹಸ್ಯ! | ಅವಧ...  

ಕೃಷ್ಣಾಷ್ಟಮಿ ಆಚರಿಸುವ ಮುನ್ನ ಕೃಷ್ಣನ ಈ ಮಹಾಲೀಲೆಗಳ ಬಗ್ಗೆ ತಿಳಿದುಕೊಳ್ಳಲೇಬೇಕು! | ಅವಧೂತ ಶ್ರೀ ವಿನಯ್ ಗುರೂಜಿ    • ಕೃಷ್ಣಾಷ್ಟಮಿ ಆಚರಿಸುವ ಮುನ್ನ ಕೃಷ್ಣನ ಈ ಮಹ...  

ಇದು ಕೃಷ್ಣನ ಒಳಗಿರುವ ಅದ್ಭುತ ಮುಖಗಳು! | ಅವಧೂತ ಶ್ರೀ ವಿನಯ್ ಗುರೂಜಿ
   • ಇದು ಕೃಷ್ಣನ ಒಳಗಿರುವ ಅದ್ಭುತ ಮುಖಗಳು! | ಅ...  

ಇದು ದುರ್ಗಾಸಪ್ತಶತೀ ಮಂತ್ರದ ಉಗಮಕ್ಕೆ ಕಾರಣವಾದ ಪುಣ್ಯಕ್ಷೇತ್ರ! | ಅವಧೂತ ಶ್ರೀ ವಿನಯ್ ಗುರೂಜಿ    • ಇದು ದುರ್ಗಾಸಪ್ತಶತೀ ಮಂತ್ರದ ಉಗಮಕ್ಕೆ ಕಾರಣ...  

Комментарии

Информация по комментариям в разработке