Naagara Panchami | ನಾಗರಪಂಚಮಿಯ ವಿಶೇಷ ಪೂಜೆ✨

Описание к видео Naagara Panchami | ನಾಗರಪಂಚಮಿಯ ವಿಶೇಷ ಪೂಜೆ✨

ನಾಗರಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ. ಇದು ಹಬ್ಬಗಳ ಸಾಲಿಗೆ ನಾಂದಿ ಹಾಡುತ್ತದೆ. ನಾಗರಹಾವುಗಳು ಭಾರತದಲ್ಲಿ ಶಕ್ತಿ, ವಿಸ್ಮಯ ಮತ್ತು ಗೌರವದೊಂದಿಗೆ ಸಂಬಂಧ ಹೊಂದಿವೆ. ಹಿಂದೂ ಸಂಸ್ಕೃತಿಯ ಪ್ರಕಾರ, ಭಗವಾನ್ ವಿಷ್ಣುವು ಆದಿಶೇಷನ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಾನೆ. ಶಿವನು ತನ್ನ ಕೊರಳಲ್ಲಿ ವಾಸುಕಿಯನ್ನು ಧರಿಸಿದ್ದಾನೆ.ತುಳುನಾಡಿನ ಜನರಲ್ಲಿ ಕೆಲವು ಕುಲಗಳಿದ್ದರೂ ನಾಗಬನವನ್ನು ಹೊಂದಿರದ ಒಂದೇ ಒಂದು ತುಳುವ ಕುಟುಂಬವಿಲ್ಲ. ನಾಗಮಂಡಲ, ಆಶ್ಲೇಷ ಬಲಿ, ದಕ್ಕೆ ಬಲಿ ಹೀಗೆ ನಾಗನನ್ನು ಒಲಿಸಿಕೊಳ್ಳಲು ವಿವಿಧ ರೀತಿಯ ಪೂಜೆಗಳನ್ನು ಮಾಡಲಾಗುತ್ತದೆ. ತುಳುನಾಡಿನಲ್ಲಿ ಆಚರಿಸಲಾಗುವ ನಾಗಾರಾಧನಾ ವಿಧಿಗಳು ಸಾಕಷ್ಟು ವಿಶಿಷ್ಟ ಮತ್ತು ಇತರ ಆಚರಣೆಗಳಿಗಿಂತ ಭಿನ್ನವಾಗಿವೆ.
#tulunadu #nagarapanchami #tulu #samskruthi #traditional #believe #temple #god #kateel #mangalore #tulunadu

Комментарии

Информация по комментариям в разработке