ಶಕ್ತಿಸ್ವರೂಪಿಣಿ ಭಾರತಮಾತೆಯ ದುರ್ಜಯ ಪುನರವತಾರ | ಗೀತಭಾರತಿ

Описание к видео ಶಕ್ತಿಸ್ವರೂಪಿಣಿ ಭಾರತಮಾತೆಯ ದುರ್ಜಯ ಪುನರವತಾರ | ಗೀತಭಾರತಿ

ಶಕ್ತಿಸ್ವರೂಪಿಣಿ ಭಾರತಮಾತೆಯ ದುರ್ಜಯ ಪುನರವತಾರ | ಗೀತಭಾರತಿ

ಶಕ್ತಿಸ್ವರೂಪಿಣಿ ಭಾರತಮಾತೆಯ ದುರ್ಜಯ ಪುನರವತಾರ
ಮೂಡುತ್ತಿದೆ ಭಾರತದಲ್ಲೆಲ್ಲೆಡೆ ನವಚೈತನ್ಯದ ಸಂಚಾರ || ಪ ||

ಮಕ್ಕಳ ಮೈಮರೆವಿನ ಯುಗ ಕಳೆದಿದೆ ಅಳಿದಿದೆ ಅಳುಕಿನ ತಿಮಿರ
ಏಕಾತ್ಮತೆಯರುಣ ಪ್ರಭೆ ಮೂಡಿದೆ ಅಡಗಿದೆ ಒಡಕಿನ ಕುಹಕ
ಶತ್ರುವಿನಾಶದ ಆಶ್ವಾಸನೆಯಿದೆ ಜಗಕಿದೆ ಶಾಂತಿಯ ಶಪಥ
ವಿಜಯದ ಗಳಿಗೆಯಿದೋ ಸಮೀಪಿಸಿದೆ ಮುನ್ನುಗ್ಗಿದೆ ಯುವಪಥಕ || 1 ||

ಸಾವಿಲ್ಲದ ನಾಡಿನ ಸುತರೆದ್ದರು ಯಜ್ಞದ ಸಿದ್ಧತೆಗೆ
ಹಿಂದುತ್ವದಮರ ಗಂಗೆಯು ಹರಿದಿದೆ ಸೃಷ್ಟಿಯ ಏಳಿಗೆಗೆ
ಯುಗಯುಗಗಳ ಇತಿಹಾಸದ ವಿಜಯದ ವೈಭವ ಶಿಖರಕ್ಕೆ
ನವ ಇತಿಹಾಸದ ಧ್ವಜವನೇರಿಸುವ ಉತ್ಸಾಹದ ರಭಸಕ್ಕೆ || 2 ||

ಜಡವಾದದ ಮೌಢ್ಯದ ಕ್ರೌರ್ಯದ ಸಂಚಿನ ಕಂತೆಗೆ ಕೊನೆ ಹೇಳಿ
ತ್ಯಾಗ ಶೀಲ ವಿಶ್ವಾಸದ ಶ್ರದ್ಧೆಯ ಕಹಳೆಯಿದೋ ಕೇಳಿ
ಹಿಂದು ರಾಷ್ಟ್ರದ ಹೊಸ ಮುಂಜಾವಿನ ಮಂಗಳಕ್ಷಣ ಬಂದಿದೆ ಏಳಿ
ಜಗದೆಲ್ಲಡೆಯ ಜಡತೆಯ ತೊಡೆಯುವ ದಾಯಿತ್ವಕೇ ಮೈತಾಳಿ || 3 ||


Visit us at
►YOUTUBE:    / samvadk  
►INSTAGRAM : https://instagram.com/samvada_?igshid...
►TWITTER : https://twitter.com/samvada?s=09
►FACEBOOK :  / samvada  
►WEBSITE : https://samvada.org/

#geethabharathi
#geethaganga
#samvada

Комментарии

Информация по комментариям в разработке